Saturday, 14th December 2024

ಸ್ಥಳೀಯ ಸಂಸ್ಥೆಗಳ ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ನೀಡುವಂತೆ ಆಗ್ರಹ

ತುಮಕೂರು: ಕರ್ನಾಟಕ ಸರಕಾರ ರಾಜ್ಯ ಸರಕಾರಿ ನೌಕರರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ನಿಟ್ಟಿನಲ್ಲಿ ಜಾರಿಗೆ ತಂದಿ ರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ(ಕೆ.ಎ.ಎಸ್.ಎಸ್.)ಯ ವ್ಯಾಪ್ತಿಗೆ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸೇರಿಸದೆ ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಹಾಗೂ ನಮ್ಮನ್ನು ಕೆ.ಎ.ಎಸ್.ಎಸ್.ಯೋಜನಾ ವ್ಯಾಪ್ತಿಗೆ ಒಳಪಡಿಸಬೇಕೆಂದು ಆಗ್ರಹಿಸಿ ಬುಧವಾರ ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘವತಿ ಯಿಂದ ಪಾಲಿಕೆಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘ ಇದರ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ ಸುಮಾರು ಪಾಲಿಕೆಯ 200ಕ್ಕು ಹೆಚ್ಚು ನೌಕರರು ತಮ್ಮ ಕೆಲಸವನ್ನು ಬದಿಗಿರಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ್,ತುಮಕೂರು ನಗರಪಾಲಿಕೆ ಸೇರಿದಂತೆ ರಾಜ್ಯದ 8 ನಗರಪಾಲಿಕೆ ಹಾಗೂ ಬಿಬಿಎಂಪಿ ನೌಕರರನ್ನು ನಮ್ಮಗಳ ಹಲವಾರು ಮನವಿಗಳ ನಡುವೆಯೂ ಆರೋಗ್ಯ ಸಂಜೀವಿನಿ ಯೋಜನೆಯಿಂದ ಕೈಬಿಟ್ಟಿದೆ.ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿ ಸಿಬ್ಬಂದಿ,ಪೌರಕಾರ್ಮಿಕರು,ನೀರು ಸರಬ ರಾಜು ಸಿಬ್ಬಂದಿಗಳು ದಿನವಹಿ ಸಾರ್ವಜನಿಕರೊಂದಿಗೆ ಸಂರ್ಪಕದಲ್ಲಿದ್ದು,ತೆರಿಗೆ ವಸೂಲಿ,ಸ್ವಚ್ಚತಾ ಕಾರ್ಯ,ಕುಡಿಯುವ ನೀರು ಪೂರೈಕೆ,ಚುನಾವಣಾ ಕೆಲಸ,ಜನನ ಮತ್ತು ಮರಣ ನೊಂದಣಿಯAತಹ ಮಹತ್ವದ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ.ನಗರದ ಸ್ವಚ್ಚತೆ ಮಾಡುವ ಕಾರ್ಮಿಕರು,ಅವರ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಹದಗೆಟ್ಟ ಆರೋಗ್ಯ ಸರಿಪಡಿಸಿಕೊಳ್ಳಲು ಲಕ್ಷಾಂತರ ರೂ ಕರ್ಚು ಮಾಡಿ, ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ನಿಜವಾಗಿಯೂ ಇಂತಹವರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಲಾಭ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಪೌರಾಡಳಿತ ಇಲಾಖೆಯ ನೌಕರರನ್ನು ಈ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ತುಮಕೂರು ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಸಂಘದ ಶಾಂತಕುಮಾರ್ ಮಾತನಾಡಿ,ಸರಕಾರ ಪೌರಸೇವಾ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ.ನಾವು ಕೂಡ ಕೆ.ಪಿ.ಎಸ್.ಸಿ.ಪರೀಕ್ಷೆಯಲ್ಲಿ ಉತ್ತೀರ್ಣ ರಾಗಿಯೇ ಈ ಹುದ್ದೆಗೆ ಬಂದಿದ್ದೇವೆ. ನಮ್ಮಂತೆಯೇ ಕೆಪಿಎಸ್ಸಿಯಲ್ಲಿ ಆಯ್ಕೆಯಾದ ಇತರೆ ಇಲಾಖೆಯ ನೌಕರರಿಗೆ ಈ ಸೌಲಭ್ಯ ನೀಡಿ,ಪಾಲಿಕೆಗಳ ನೌಕರರಿಗೆ ನೀಡದಿರುವುದು ಸಮಂಜಸವಲ್ಲ.ಕೂಡಲೇ ಸರಕಾರ ತನ್ನ ಆದೇಶ ಹಿಂಪಡೆದು, ಪೌರಸೇವಾ ನೌಕರರಿಗು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ವಿಸ್ತರಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಒಂದು ವೇಳೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆಯ ಜೊತೆಗೆ, ಪೌರಾಡಳಿತ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪಟ್ಟಣ ಪಂಚಾಯಿತಿ,ಪುರಸಭೆ, ನಗರಸಭೆ ನೌಕರರನ್ನು ಒಳಗೊಂಡು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಈ ಸಂಬ0ಧ ಮನವಿಯನ್ನು ಇಂದು ಪಾಲಿಕೆಯ ಆಯುಕ್ತರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳ ಮತ್ತು ನೌಕರರ ಸಂಘದ ಪದಾಧಿಕಾರಿಗಳಾದ ನಟರಾಜು, ಪುಷ್ಪಲತ, ರಮೇಶ್, ಜಗದೀಶ್,ಶೆಟ್ಟಾಳಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.