Monday, 14th October 2024

ಮಾನ್ವಿ ಪೋಲೀಸರ ಕಾರ್ಯಚಾರಣೆ ಅಂತರಾಜ್ಯ ಕುರಿ ಕಳ್ಳರ ಬಂಧನ

ಮಾನ್ವಿ: ಜಿಲ್ಲಾ ಪೊಲೀಸ್‌ವರಿಷ್ಟಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಿ ತನಿಖೆ ನಡೆಸಿ ಅಂತರಾಜ್ಯ ಕುರಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಆರೋಪಿತ ರಿಂದ ಕದ್ದ ಕುರಿ ಮಾರಾಟ ಮಾಡಿದ ಒಂದು ಲಕ್ಷ ಹತ್ತು ಸಾವಿರ ನಗದು ಹಣವನ್ನು ವಶಪಡಿಸಿಕೊಂಡು ಕಾನೂನುಕ್ರಮ ಕೈಗೊಳ್ಳಲಾಗಿದೆ ಎಂದು ಪಿ.ಐ.ಮಹಾದೇವಪ್ಪ ಪಂಚಮುಖಿ ತಿಳಿಸಿದರು

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತು ಮಾತನಾಡಿ ದದ್ದಲ ಗ್ರಾಮದ ಶೇಖರಪ್ಪನವರ ಜಮೀನಿನಲ್ಲಿ ಇದ್ದ ೫೦ ಕುರಿಗಳು ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದರಿಂದ ತನಿಖೆ ನಡೆಸಲಾಗಿ ಅಂತರಾಜ್ಯಗಳಲ್ಲಿ ಕುರಿಗಳ ವ್ಯಾಪಾರ ಮಾಡುವ ವೃತ್ತಿಯಲ್ಲಿರುವ ಆರೋಪಿಗಳಾದ ಸೀಮಾಂಧ್ರ ಪ್ರದೇಶದಲ್ಲಿನ ಸೂಗೂರು ಗ್ರಾಮದ ಕುರಿವ್ಯಾಪಾರ ಮಾಡುವ ವೃತ್ತಿಯ ಮಲ್ಲಿಕಾರ್ಜುನ, ಕಡಿವೇಲು ಗ್ರಾಮದ ಹನುಮಂತ, ಎನ್ನುವವರು ರಾಜ್ಯದಲ್ಲಿನ ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ಸಂಚಾರಿ ಕುರಿಗಾಯಿಗಳು ಹಾಗೂ ರೈತರು ಜಮೀನುಗಳಲ್ಲಿ ಕುಡಿಹಾಕಿರುವ ಕುರಿಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಪಡೆದು ಆರೋಪಿಗಳನ್ನು ದಸ್ತಿಗಿರಿ ಮಾಡಿ ಅವರಿಂದ ಕದ್ದ ಕುರಿಗಳನ್ನು ಮಾರಿದ ೧ ಲಕ್ಷ ಹತ್ತು ಸಾವಿರ ರೂಗಳನ್ನು ವಶಪಡಿಸಿಕೊಂಡು ಜಪ್ತಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾರ್ಯಚಾರಣೆಯಲ್ಲಿ ಪಿ.ಎಸ್.ಐ ಎಂ. ವೆಂಕಟೇಶ,ಪೊಲೀಸ್ ಸಿಬ್ಬಂದಿಗಳಾದ ದೇವರಾಜ,ಹುಸೇನ್ ಸಾಬ್,ಬಸವರಾಜ್, ರಮೇಶ,ಲಕ್ಷ್ಮಣ್,ಸೂಗಪ್ಪ,ಬಸವನಗೌಡ ಭಾಗವಹಿಸಿದ್ದರು.