ಯಾದಗಿರಿ: ತಾನು ಪ್ರೀತಿಸಿದ ಯುವತಿಯನ್ನೇ ಮುಂಬೈನಲ್ಲಿ ಬರ್ಬರವಾಗಿ ಕೊಲೆಗೈದು ತಲೆ ಮರೆಸಿಕೊಂಡಿದ್ದ ಆರೋಪಿ ದಾವೂದ್ ಎನ್ನುವಾತ ನನ್ನು ಮುಂಬೈ ಪೊಲೀಸರು ಜಿಲ್ಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ದಾವೂದ್ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಂಗರಗಾ ಗ್ರಾಮದವನಾಗಿದ್ದು, ಫೇಸ್‌ಬುಕ್ ಮೂಲಕ ಯಶಶ್ರೀ ಎಂಬ ಯುವತಿಯನ್ನು ಪ್ರೀತಿಸಿ ಫೋನ್ ಸಂಪರ್ಕದಲ್ಲಿದ್ದ. 2019ರಲ್ಲಿಯೇ ಯುವತಿಗೆ ಕಿರುಕುಳ ನಿಡಿದ ಆರೋಪವೂ ಆತನ ಮೇಲಿತ್ತು, ಈ ಯುವತಿಯ ಪ್ರಕರಣದಲ್ಲಿಯೇ ಒಂದು ಭಾರಿ ಜೈಲುವಾಸವೂ ಅನುಭಸಿದ್ದ ದಾವೂದ್ ಜುಲೈ 27ರಂದು ಮುಂಬಯಿಯಲ್ಲಿ ಯಶಶ್ರೀ (25) ಯುವತಿಯನ್ನು ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಪರಾರಿಯಾಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ದಾವೂದ್ ನನ್ನು ಮುಂಬಯಿ ಪೊಲೀಸರು ಸೆರೆಹಿಡಿ ಹಿಡಿದಿದ್ದಾರೆ. ಯಶಶ್ರೀ ಕೊಲೆ ಪ್ರಕರಣ ಬೆನ್ನತ್ತಿದ ಮುಂಬೈ ನಗರ ಠಾಣೆ ಪೊಲೀಸರು ನಾಲ್ಕು ತಂಡ ರಚಿಸಿದ್ದರು. ಒಂದು ತಂಡ ಯಾದಗಿರಿಗೆ ಆಗಮಿಸಿ ಸೋಮವಾರ ರಾತ್ರಿ ಆರೋಪಿ ಅಡಗಿದ್ದ ಸ್ಥಳ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಜುಲೈ 27 ಶನಿವಾರ ಯುವತಿಯ ಮೃತದೇಹ ರಕ್ತದ ಮಡುವಿನಲ್ಲಿ ನವೀ ಮುಂಬೈನಲ್ಲಿ ಪತ್ತೆಯಾಗಿತ್ತು. ಮೃತ ಯುವತಿಯನ್ನು 25 ವರ್ಷದ ಯಶಶ್ರೀ ಎಂದು ಗುರುತಿಸಲಾಗಿತ್ತು. ಮೃತ ದೇಹವು ಆಕೆಯ ಎದೆ, ಸೊಂಟ, ಬೆನ್ನು ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಹಲವಾರು ಇರಿತದ ಗಾಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಆಕೆಯ ಮೂಳೆಗಳು ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.
ದಾವೂದ್ ಶೇಖ್ ಎಂಬಾತ ಆಕೆಯನ್ನು ಕೊಂದಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ದಾವೂದ್ 2019ರಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದಾಗ ಯಶಶ್ರೀಗೆ ಕಿರುಕುಳ ನೀಡಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು. ಜುಲೈ 25 ರಂದು ಯಶಶ್ರೀ ಶಿಂಧೆ ನಾಪತ್ತೆಯ ಬಗ್ಗೆ ಆಕೆಯ ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಶನಿವಾರ ಆಕೆಯ ಶವ ಅತ್ಯಂತ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿತ್ತು