ಬೆಂಗಳೂರು: ಪಿಂಕ್‌ಸಾಲ್ಟ್ ಸೇವನೆ ಆರೋಗ್ಯಕರ ಎಂಬ ಕಾರಣಕ್ಕೆ ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಕಲಬೆರಕೆಯುಕ್ತ ಪಿಂಕ್‌ಸಾಲ್ಟ್ ದೊರೆಯು ತ್ತಿದ್ದು, ಇದರಿಂದ ಗುಣಮಟ್ಟದ ಪಿಂಕ್‌ಸಾಲ್ಟ್ ಕಂಡುಹಿಡಿಯುವುದೇ ತಲೆನೋವಾಗಿದೆ. ಈ ಗೊಂದಲಕ್ಕೆ ತೆರೆ ಎಳೆಯಲು ಪ್ರತಿಷ್ಠಿತ ಕಂಪನಿಯಾದ ಆಶೀರ್ವಾದ್ ಇದೀಗ ಮಾರುಕಟ್ಟೆಗೆ ಗುಣಮಟ್ಟದ “ಹಿಮಾಲಯನ್ ಪಿಂಕ್ ಸಾಲ್ಟ್”ನನ್ನು ಬಿಡುಗಡೆ ಮಾಡಿದೆ.
ಇದನ್ನು ಸೈಂಧವ ಲವಣ ಅಥವಾ ಸೇಂಧಾ ನಮಕ್ ಎಂದೂ ಕರೆಯಲಾಗುತ್ತದೆ. ಪಿಂಕ್ ಸಾಲ್ಟ್ ನೈಸರ್ಗಿಕ ಉಪ್ಪು ಆಗಿದ್ದು, ಹಿಮಾಲಯದ ಉಪ್ಪಿನ ಗಣಿಯಿಂದ ತಯಾರಿಸಲಾಗುತ್ತದೆ. ಪಿಂಕ್‌ಸಾಲ್ಟ್ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ತಿಳಿದ ಮೇಲೆ ಸಾಕಷ್ಟು ಕಲಬೆರೆಕೆಯುಕ್ತ ಪಿಂಕ್‌ಸಾಲ್ಟ್ ಮಾರುಕಟ್ಟೆಯಲ್ಲಿ ಓಡಾಡುತ್ತಿದೆ. ಜನರಿಗೆ ಯಾವುದು ನೈಜ ಪಿಂಕ್ ಸಾಲ್ಟ್ ಎಂಬು ತಿಳಿಯುವುದೇ ಕಷ್ಟವಾಗಿತ್ತು. ಹೀಗಾಗಿ ಜನರ ನಂಬಿಕೆಗೆ ಅರ್ಹವಾದ ಬಿಗ್‌ಬ್ರಾಂಡ್ ಆಶೀರ್ವಾದ್ ಸಾಲ್ಟ್ ವತಿಯಿಂದಲೇ ಪಿಂಕ್‌ಸಾಲ್ಟ್‌ನನ್ನು ಪರಿಚಯಿಸಿದೆ.
ಈ ಹಿಮಾಲಯನ್ ಪಿಂಕ್ ಸಾಲ್ಟ್‌ನಲ್ಲಿ ಅಗತ್ಯ ಖನಿಜಗಳಾದ ಕ್ಯಾಲ್ಶಿಯಂ ಮತ್ತು ಮ್ಯಾಗ್ನೀಶಿಯಂ ಕೂಡಾ ಇದ್ದು, ಹೆಚ್ಚು ಆರೋಗ್ಯಕರವಾಗಿದೆ. ಈ ಉಪ್ಪು ಆರೋಗ್ಯದ ಸ್ವಾದವನ್ನು ಹೆಚ್ಚಿಸಲಿದೆ. ಅಷ್ಟೇಅಲ್ಲದೆ, ಉತ್ತಮ ಪ್ಯಾಕೇಜಿಂಗ್ ಮೂಲಕ ಉಪ್ಪಿನ ತಾಜಾತನವನ್ನು ಕಾಯ್ದುಕೊಂಡಿದೆ. ಇದನ್ನು ಗ್ರಾಹಕರು ಪಾರದರ್ಶಕ ಸ್ಟ್ರಿಪ್ ಮೂಲಕ ಪತ್ತೆ ಮಾಡಬಹುದಾಗಿದೆ.
ಐಟಿಸಿಯ ಸ್ಟೇಪಲ್ಸ್ ಮತ್ತು ಅಡ್ಜಸೆನ್ಸಿ ವಿಭಾಗದ ಸಿಒಒ ಅನುಜ್ ಕುಮಾರ್ ರುಸ್ತೋಗಿ ಮಾತನಾಡಿ, “ಪಿಂಕ್ ಸಾಲ್ಟ್‌ನಲ್ಲಿ ಆರೋಗ್ಯ ಪ್ರಯೋಜನಗಳು ಅಪಾರವಾಗಿರುವುದರಿಂದ ಜನರು ಇದನ್ನು ಹೆಚ್ಚು ಬಳಸುತ್ತಿದ್ದಾರೆ. ಹೀಗಾಗಿ ಗುಣಮಟ್ಟದ ಪಿಂಕ್‌ಸಾಲ್ಟ್‌ನನ್ನು ಒದಗಿಸಲು ಇದೀಗ “ಹಿಮಾಲಯನ್ ಪಿಂಕ್ ಸಾಲ್ಟ್” ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದರು.
ಈ ಉಪ್ಪು ಇದೀಗ ಎಲ್ಲ ಪ್ರಮುಖ ಮೆಟ್ರೋಗಳಾದ ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತಾ ಸೇರಿದಂತೆ ಆಧುನಿಕ ಟ್ರೇಡ್/ಐಎಸ್‌ಎಸ್ ಸ್ಟೋರ್‌ಗಳಲ್ಲಿ ಮತ್ತು ಇಕಾಮರ್ಸ್/ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರಂಗಳಲ್ಲಿ ಲಭ್ಯವಿದೆ., 1 ಕಿಲೋ ಪ್ಯಾಕ್‌ಗೆ ರೂ. 120 ಬೆಲೆ ನಿಗದಿಪಡಿಸಲಾಗಿದೆ.