Wednesday, 11th December 2024

ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಕೆಲಸವನ್ನು ಸರ್ಕಾರಗಳು ಮಾಡಲಿ: ರಂಭಾಪುರಿ ಶ್ರೀ

ತಿಪಟೂರು: ಗ್ಯಾರಂಟಿ ಯೋಜನೆಗಳಿಂದ ಸರ್ಕಾರವು ಮುಂದಿನ ದಿನಗಳಲ್ಲಿ ಕೆಟ್ಟ ದುಷ್ಪರಿಣಾಮಗಳನ್ನು ಅನುಭವಿಸ ಬೇಕಾಗುತ್ತದೆ, ದೇಶದ ಮತ್ತು ರಾಜ್ಯದ ಪರಿಸ್ಥಿತಿಗಳು ಬದಲಾಗುತ್ತವೆ, ಜನರಿಗೆ ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಸಬೇಕು ಜನರನ್ನು ಸೋಮಾರಿಗಳನ್ನಾಗಿ ಮಾಡಿ, ದುರಾಸೆ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಗುರುವಾರ ನಗರದ ಶ್ರೀ ಗುರುಲೀಲಾ ಕಲ್ಯಾಣ ಮಂಟಪದಲ್ಲಿ ಜರುಗಿದ ಆಷಾಢ ಮಾಸದ ಪೂಜಾ ಹಾಗೂ ಧರ್ಮ ಜಾಗೃತಿ ಸಮಾರಂಭದ ೨ನೇ ದಿನದ ಸಾನ್ನಿಧ್ಯ ವಹಿಸಿ ಅಶೀರ್ವಚನ ನೀಡುತ್ತಿದ್ದರು.
ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೊರತೆ ಉಂಟಾಗುತ್ತದೆ ಬದಲಾಗಿ ರೈತರ ಕಲ್ಯಾಣಕ್ಕಾಗಿ ದೀನದಲಿತರ ಅಭಿವೃದ್ಧಿಯಕ್ಕೆ ಸಾಮಾನ್ಯ ಜನರಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರಗಳು ಮಾಡಬೇಕಾಗುತ್ತದೆ. ಬದುಕು ಬದಲಾವಣೆ ಆಗಬೇಕಾದರೆ ದುರ್ಜನರ ಸಹವಾಸಗಳನ್ನು ಬಿಟ್ಟು ಸಾತ್ವಿಕ ಗುಣಗಳ ಜನರನ್ನು ಪಡೆದಾಗ ಮಾತ್ರ ಜೀವನವು ಶ್ರೇಷ್ಠತೆ ಸಿಗುತ್ತದೆ, ದೇವರಲ್ಲಿ ಧರ್ಮದಲ್ಲಿ ಶ್ರದ್ದೆ ನಿಷ್ಠತೆ ನಂಬಿಕೆ ವಿಶ್ವಾಸವನ್ನು ಇಟ್ಟು ಮನುಷ್ಯ ಬಾಳಬೇಕಾಗುತ್ತದೆ, ೧೨ನೇ ಶತಮಾನದ ಬಸವಣ್ಣನವರು, ಮಹಾತ್ಮ ಗಾಂಧೀಜಿ, ಡಿವಿಜಿ, ಕುವೆಂಪು ಇಂಥವರ ಚಿಂತನೆಗಳು ಮನುಷ್ಯನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಜುಲೈ ಮಾಸಿಕ “ರಂಭಾಪುರಿ ಬೆಳಗು” ಬಿಡುಗಡೆ ಮಾಡಿ  ಮಾತನಾಡಿ ಮನುಷ್ಯ ಮನುಷ್ಯ ನಾಗಿ ಮನುಷ್ಯತ್ವವನ್ನು ಕಳೆದುಕೊಂಡಾಗ ಹೀನ ಕೃತ್ಯಕ್ಕೆ ಕೈಯಾಗಿ ಇಡೀ ಸಮಾಜವನ್ನು ಅನಾಗರಿಕ ಸ್ಥಿತಿಗೆ ತಳ್ಳಲು ಬಯಸು ತ್ತಾನೆ. ಕಳೆದ ೪೦ ದಿನಗಳಲ್ಲಿ ಹೀನ ಕೃತ್ಯದ ಸರಣಿ ಕೊಲೆಗಳು ನಡೆಯುತ್ತಿದ್ದು ಮನುಷ್ಯನು ಪ್ರಾಣಿಗಿಂತ ಕಡೆಯಾಗಿ ನಡೆದು ಕೊಳ್ಳುತ್ತಿದ್ದಾನೆ. ಸಂಸ್ಕೃತಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಜೀವಿಸುತ್ತಿದ್ದಾನೆ ಆದ್ದರಿಂದ ರಂಭಾಪುರಿ ಶ್ರೀಗಳ ಧರ್ಮ ಜಾಗೃತಿ ಸಭೆಗಳಿಗೆ ನಾವೆಲ್ಲರೂ ಪಾಲ್ಗೊಂಡು ಧರ್ಮ ಸಂದೇಶವನ್ನು ಪಡೆದು ಮನುಷ್ಯತ್ವ ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಉತ್ತಮವಾದ ವಿಚಾರ ಧಾರೆಗಳ ಅವಶ್ಯಕತೆಯಿದೆ. ಪ್ರಾಚೀನ ಸಂಸ್ಕೃತಿ ಸಭ್ಯತೆಯನ್ನು ತಿಳಿದುಕೊಳ್ಳಬೇಕು ಎಂದರು.
ಅತಿಥಿಯಾಗಿ ಮುರಳೀಧರಹಾಲಪ್ಪ ಮಾತನಾಡಿ ಜಗದ್ಗುರುಗಳು ಧರ್ಮ ರಕ್ಷಣೆಗಾಗಿ ಪ್ರವಾಸವನ್ನು ಕೈಗೊಳ್ಳುತ್ತಾ ಧರ್ಮವನ್ನು ರಕ್ಷಿಸಲು ಧಾರ್ಮಿಕ ಜಾಗೃತಿ ಸಭೆಗಳನ್ನು ನಡೆಸುತ್ತಾ ಸಮಾಜದ ಬಂಧುಗಳಿಗೆ ಆತ್ಮಸ್ಥೈರ್ಯ ಆತ್ಮವಿಶ್ವಾಸ ತುಂಬುವ ಕೈಂಕ ರ್ಯವನ್ನು ಮಾಡುತ್ತಾ ಇವರ ಮಾರ್ಗದರ್ಶನವನ್ನು ಯುವ ಪೀಳಿಗೆ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಬೂದಿಹಾಳ ಮಠದ ಶಶಿಶೇಖರ ಸ್ವಾಮಿಗಳು  ಮಾತನಾಡಿ ಆಚಾರ ವಿಚಾರ ಸಂಸ್ಕೃತಿ ಸಂಬAಧಕ್ಕೆ ಹಾಗೂ ಶಿಲ್ಪ ಕಲೆಗಳ ತವರೂರಾದ ರಾಜ್ಯವು ಪಂಚಪೀಠಗಳಿಗೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶವಾಗಿದ್ದು ಇಂದು ಧರ್ಮ ಪ್ರಚಾರದ ಅವವಶ್ಯಕತೆ ಇದೆ ಎಂದು  ತಿಳಿಸಿದರು.
ಮಾದಿಹಳ್ಳಿ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿ. ಅಧರ್ಮ ದಿಂದ ಮನುಷ್ಯನು ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡ ಸಹಿತ ನಾಶವಾಗುತ್ತಾನೆ. ಆದ್ದರಿಂದ ಆಚಾರ್ಯರು ಮತ್ತು ಶರಣರು ತೋರಿದ ದಾರಿಯಲ್ಲಿ ಮುನ್ನಡೆದು ಆದರ್ಶ ಬದುಕು ಕಟ್ಟಕೊಳ್ಳಬೇಕೆಂದರು.
ಧರ್ಮಸಬೆಯಲ್ಲಿ ಗುರುಬಸಪ್ಪ ಪಲ್ಲಾಗಟ್ಟಿ, ಮಾಜಿ ಪುರಸಭಾ ಸದಸ್ಯ ನಟರಾಜ, ಎಎಸ್‌ಪಿ ಸಿದ್ಧಾರ್ಥ ಗೋಯಲ್ ಸಮಾ ರಂಭದಲ್ಲಿ ಪಾಲ್ಗೊಂಡಿದ್ದರು. ನ್ಯಾಯವಾದಿ ಬಿ.ನಂದಕುಮಾರ ಸ್ವಾಗತಿಸಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಗಂಗಾಧರಸ್ವಾಮಿ ಇವರಿಂದ ಪ್ರಾರ್ಥನಾ ಗೀತೆ ಜರುಗಿತು. ನ್ಯಾಯವಾದಿ ಶೋಭಾ ಜಯದೇವ ನಿರೂಪಿಸಿದರು. ಬೆಳಿಗ್ಗೆ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ನೆರವೇರಿಸಿ ಭಕ್ತ ಸಮೂಹಕ್ಕೆ ಶುಭ ಹಾರೈಸಿದರು.
*
ಮಾನವೀಯ ಸಂಬ0ಧಗಳು ಸಡಿಲಗೊಳ್ಳುತ್ತಿರುವುದರಿಂದ ಪರಸ್ಪರ ಪ್ರೀತಿ ವಾತ್ಸಲ್ಯಗಳು ಕಣ್ಮರೆಯಾಗುತ್ತಿವೆ. ಬದುಕಿಗೆ ಬಲ ಬರಬೇಕಾದರೆ ಸಂಬAಧಗಳ ಕೊಂಡಿ ಗಟ್ಟಿಯಿರಬೇಕು. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಯಿಸಿಕೊಂಡು ಸತ್ಪಥದಲ್ಲಿ ನಡೆದರೆ ಜೀವನ ಸಾರ್ಥಕ.
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು.
*
ಮನುಷ್ಯರು ಬೆಳೆಯುತ್ತಿದ್ದಂತೆ ದೂರವಾಗುತ್ತಾ ಹೋಗುತ್ತಾರೆ. ಮನುಷ್ಯ ಮತ್ತೊಬ್ಬರನ್ನು ಸಂತೋಷಪಡಿಸಲು ಹಣ ಬೇಕಾಗಿಲ್ಲ. ಅದರ ಬದಲು ಸಮಯ ಮತ್ತು ಪ್ರೀತಿಯ ನಾಲ್ಕು ಮಾತು ಸಾಕು. ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗ ಮಾಡಿ ಆದರೆ ಸತ್ಯವನ್ನು ತ್ಯಾಗ ಮಾಡಬಾರದು. ಅರ್ಥವಿಲ್ಲದ ಓದು, ಶಾಂತಿಯಿಲ್ಲದ ಬದುಕು, ರುಚಿಯಿಲ್ಲದ ಅಡಿಗೆ, ಖುಷಿಯಿಲ್ಲದ ಜೀವನ, ಮಧುರತೆಯಿಲ್ಲದ ಬಾಳು, ನೀತಿಯಿಲ್ಲದ ಬದುಕು ನಿರರ್ಥಕವಾಗುವುದು.