Saturday, 15th June 2024

ಆರ್ ಎಸ್ ಎಸ್‌ನಿಂದ ಆಹಾರದ ಕಿಟ್ ವಿತರಣೆ

ಬಳ್ಳಾರಿ:

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ‌ತೀವ್ರ ತೊಂದರೆಗೀಡಾಗಿರುವ ಜನರ ನೆರವಿಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮುಂದೆ ಬಂದಿದ್ದು, ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿ ಸಂತ್ರಸ್ಥರ ಪಟ್ಟಿ ಮಾಡಿರುವ ಅವರು 2 ಸಾವಿರಕ್ಕೂ ‌ಹೆಚ್ಚು ಪಡಿತರ ಕಿಟ್ ವಿತರಿಸಲು ತೀರ್ಮಾನಿಸಿದ್ದಾರೆ.
ನಗರದ ಸೇವಾ ಭಾರತಿ‌ ಸಂಸ್ಥೆಯಲ್ಲಿ ಪಡಿತರ ಕಿಟ್ ಗಳನ್ನು ಸಿದ್ದಪಡಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಭಾನುವಾರದಿಂದ ಈ ಪಡಿತರ ಕಿಟ್ ಗಳನ್ನು ವಿತರಿಸಲಾಗುತ್ತಿದೆ.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಕೋವಿಡ್-19 ಜಿಲ್ಲಾ ಆಹಾರ ವಿತರಣಾ ಉಸ್ತುವಾರಿ ಅಧಿಕಾರಿ ರಾಜಪ್ಪ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದರು.ಈ ಪಡಿತರ ಕಿಟ್ ಗಳನ್ನು‌ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯಾದ್ಯಂತ ತೀವ್ರ ತೊಂದರೆಯಲ್ಲಿರುವ ಜನರಿಗೆ ವಿತರಿಸುವ ಮೂಲಕ‌ ಜಿಲ್ಲಾಡಳಿತದೊಂದಿಗೆ‌‌ ಕೈ ಜೋಡಿಸಿರುವುದು ಸಂತಸ ತಂದಿದೆ. ತಮಗೆ ಪಾಸ್, ಅನುಮತಿ ಸೇರಿದಂತೆ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!