Saturday, 14th December 2024

Unboxing: ವಿಜಯನಗರದ 12 ನೇ ಆವೃತ್ತಿಯ “ನಿಮ್ಮ ಉದ್ಯಾ ನವನದಲ್ಲಿ ಹಬ್ಬ” ವನ್ನು ಅನ್‌ಬಾಕ್ಸಿಂಗ್‌ ಬೆಂಗಳೂರಿನೊಂದಿಗೆ ಆಚರಿಸಿ

ಅನ್‌ಬಾಕ್ಸಿಂಗ್‌ ಬೆಂಗಳೂರು ವಿಜಯನಗರದ ಸುಭಾಷ್ ಚಂದ್ರ ಬೋಸ್ ಪಾರ್ಕ್‌ನಲ್ಲಿ 12 ನೇ ಆವೃತ್ತಿಯ ” ನಿಮ್ಮ ಉದ್ಯಾನವನದಲ್ಲಿ ಹಬ್ಬ”ವನ್ನು ಆಚರಿಸಲು ಆತ್ಮೀಯವಾಗಿ ಎಲ್ಲರನ್ನು ಆಹ್ವಾನಿಸುತ್ತಿದೆ. ಈ ಆಚರಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಅನೇಕ ಚಟುವಟಿಕೆಗಳು, ಮನರಂಜನೆ ಮತ್ತು ಅರ್ಥಪೂರ್ಣ ಸಮುದಾಯ ಸಂವಹನ ವಿರಲಿದ್ದು, ಸಂತಸಮಯ ದಿನವನ್ನು ಕಳೆಯಬಹುದು.

ವಿಜಯನಗರ ಆವೃತ್ತಿಯು ಕಬ್ಬನ್ ರೀಡ್ಸ್ ಸಹಯೋಗದೊಂದಿಗೆ, ಓದುವ ಅಧಿವೇಶನ ಮತ್ತು ಬಿಎಲ್‌ಆರ್ ಆರ್ಟ್ ಕಲೆಕ್ಟಿವ್ ಆಯೋಜಿಸುವ ಸೃಜನಶೀಲ ಕಲಾ ಕಾರ್ಯಾಗಾರಗಳು ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ. ಅಷ್ಟೇ ಅಲ್ಲದೇ, ಆಗಮಿಸುವ ಸಾರ್ವಜನಿಕರಿಗೆ ಥಿಕೆಟ್ ಟೇಲ್ಸ್ ತಂಡದಿಂದ ಉದ್ಯಾನವನದ ಮಾರ್ಗದರ್ಶನ ಸಿಗಲಿದ್ದು, ಪ್ರಕೃತಿ ನಡಿಗೆಯೊಂದಿಗೆ ಉದ್ಯಾನದ ಶಾಂತಿಯುತ ವಾತಾವರಣವನ್ನು ಆನಂದಿಸ ಬಹುದು. ಹೆಚ್ಚುವರಿಯಾಗಿ, ತ್ವರಿತಾ ಆರ್ಟ್ಸ್ ಕಲೆಕ್ಟಿವ್ ಆಯೋಜಿಸಿದ, ಯಕ್ಷಗಾನ ಕಾರ್ಯಾಗಾರವಿರಲಿದ್ದು, ಕರಾವಳಿ ಕರ್ನಾಟಕದ ಸಾಂಪ್ರದಾಯಿಕ ಜಾನಪದ ಕಲೆಯನ್ನು ಕಣ್ತುಂಬಿಕೊಳ್ಳಬಹುದು.

ಮನರಂಜನಾ ಸಂಜೆಯನ್ನು ಕಳೆಯಲು ಆಸಕ್ತಿ ಇರುವವರಿಗೆ ವೆಸ್ನೆಸ್ ಬೈ ವೆಸ್ಟ್‌ಸೈಡ್ ವತಿಯಿಂದ ಜುಂಬಾ ಸೆಷನ್‌ಗಳನ್ನು ಸಹ ಆಯೋಜಿಸಲಾಗಿದೆ. ಜೊತೆಗೆ, ಸುಮಧುರ ಸಂಜೆಯನ್ನು ಖ್ಯಾತ ಹಿನ್ನೆಲೆ ಗಾಯಕ ಮತ್ತು ನಟ ಚಿನ್ಮಯಿ ಅಥ್ರೇಯಸ್ ಒಳಗೊಂಡ ತಂಡದಿಂದ ಮೋಡಿಮಾಡುವ ಸಂಗೀತ ಕಚೇರಿಯನ್ನು ಆನಂದಿಸಬಹುದು.

ವೇಳಾಪಟ್ಟಿ:
ದಿನಾಂಕ ಭಾನುವಾರ, 29ನೇ ಸೆಪ್ಟೆಂಬರ್‌ 2024
ಸಮಯ 4:00 PM – 8:00 PM
ಸ್ಥಳ ಸುಭಾಷ್ ಚಂದ್ರ ಬೋಸ್ ಪಾರ್ಕ್, ವಿಜಯನಗರ, ಬೆಂಗಳೂರು

ಅನ್‌ಬಾಕ್ಸಿಂಗ್‌ ಬೆಂಗಳೂರು ಪ್ರತಿಷ್ಠಾನವು ಲಾಭದಾಯಕವಲ್ಲದ ವೇದಿಕೆಯಾಗಿದ್ದು ಅದು ಜನರಿಗೆ ಬೆಂಗಳೂರಿನ ಕ್ರಿಯಾತ್ಮಕ ರೂಪಾಂತರವನ್ನು ಹೊಸತನ, ಆಳವಾದ ರೀತಿಯಲ್ಲಿ ಅನ್ವೇಷಿಸಲು ಮತ್ತು ಅನುಭವಿಸಲು ಸಹಾಯ ಮಾಡುತ್ತದೆ. ಅನ್‌ಬಾಕ್ಸಿಂಗ್‌ ಬೆಂಗಳೂರು ಅವರ ” ನಿಮ್ಮ ಉದ್ಯಾನವನದಲ್ಲಿ ಹಬ್ಬ”ವನ್ನು 30ನೇ ನವೆಂಬರ್‌ ನಿಂದ 15ನೇ ಡಿಸೆಂಬರ್ 2024 ರವರೆಗೆ ನಡೆಯುವ ಬೆಂಗಳೂರಿನ ಅತಿದೊಡ್ಡ ನಗರ ಉತ್ಸವವಾದ ಬೆಂಗಳೂರು ಹಬ್ಬಕ್ಕೆ ಕಾರಣವಾಗುವ ಘಟನೆಗಳ ಸರಣಿಯಾಗಿದೆ.