Wednesday, 9th October 2024

Tumkur News: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಕಷ್ಟ

ತುಮಕೂರು: ಕೊನೆಯವರೆಗೆ ಒಳ್ಳೆಯ ಮನುಷ್ಯರಾಗಿ ಉಳಿಯುವುದು ಬಹಳ ಕಷ್ಟ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಸಮತಾ ಬಳಗದ ವತಿಯಿಂದ  ಹಮ್ಮಿಕೊಂಡಿದ್ದ ಜಿಎಂಎಸ್ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ ವ್ಯವಸ್ಥೆಗೆ 5 ಸಾವಿರ ವರ್ಷ ಅಂತ ಹೇಳುತ್ತೇವೆ. ಜಿಎಂಎಸ್ ಹೇಳುವಂತೆ ನಮ್ಮ ಹಳ್ಳಿಯಲ್ಲಿ ಜಾತೀಯತೆಯ ಅನುಭವವಾಗಿಲ್ಲ. ಇಂದು ಯುನಿವರ್ಸಿಟಿಗಳಲ್ಲಿ ಜಾತೀಯತೆ ಇದೆ. ದೊಡ್ಡ ದೊಡ್ಡ ಕಚೇರಿಗಳಲ್ಲಿದೆ. ಅದನ್ನು ಅನುಭವಿಸಿದವರು ಜಿಎಂಎಸ್. ಅವರಿಗೆ ಅದು ಕಂಡಿದೆ ಎಂದರು. 

ನಾನು ಶಿವರಾಮ ಕಾರಂತರ ದೊಡ್ಡ ಅಭಿಮಾನಿ. ಅವರು ಕೊನೆಯ ದಿನಗಳಲ್ಲಿ ಅವರ ವಿಚಾರಗಳನ್ನು, ಆಚಾರ ಗಳನ್ನು ನೋಡಿದಾಗ ನನಗೆ ಬಹಳ ಬೇಸರವಾಯಿತು ಎಂದರು. 

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಪ್ರೊಫೆಸರ್ ಜಿ.ಎಂ.ಶ್ರೀನಿವಾಸಯ್ಯ ಅವರ ಬದುಕನ್ನು ನೋಡಿದರೆ ದೊಡ್ಡ ಆಲದ ಮರದ ಕೆಳಗೆ ಕೂತ ದೊಡ್ಡಗುರುವಿನ ಸ್ಥಾನದಲ್ಲಿದ್ದರು. ಅವರ ಜತೆ ಆ ಧ್ಯಾನಲೋಕದಲ್ಲಿ ನಾವೆಲ್ಲ ಇದ್ದೇವೆ. ಸಾವಿರಾರು ಜನ ಇದ್ದರು. ನನ್ನ ಪತ್ನಿಯ ಜತೆಗೂ ಅಷ್ಟೊಂದು ದೀರ್ಘವಾಗಿ ಬದುಕಲು ಆಗಿಲ್ಲ.ಆದರೆ ಪ್ರೊ.ಜೆಎಂಎಸ್ ಜತೆಯಲ್ಲಿ ಬದುಕಿದ್ದೇನೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಚರಕ ಆಸ್ಪತ್ರೆಯ ಡಾ.ಬಸವರಾಜು ಮಾತನಾಡಿ, ಪ್ರಾಮಾಣಿಕವಾಗಿ, ಸರಳವಾಗಿ, ಈ ಸಮಾಜದ ಹಿತವನ್ನು ಕಾಪಾಡುವಂತಹ, ಎಲ್ಲಾ ಜನರ ಸಮಾನತೆಯನ್ನು ಬಯಸುವಂತಹ ಮನಸ್ಸುಗಳು ಕ್ಷೀಣಿಸುತ್ತಿರುವ ಈ ಕ್ಷಣದಲ್ಲಿ ಇರುವ ಬೆರಳೆಣಿಕೆಯ ಅಂತಹ ವ್ಯಕ್ತಿತ್ವಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು. 

ಈ ಸಂದರ್ಭದಲ್ಲಿ ಎಸ್.ಎ.ಖಾನ್, ಸಾಹಿತಿ ನಾಗರಾಜಶೆಟ್ಟಿ, ಡಾ.ಅರುಂಧತಿ, ಡಾ.ರವಿಕುಮಾರ್ ನೀಹ, ಪತ್ರಕರ್ತ ಕುಚ್ಚಂಗಿ ಪ್ರಸನ್ನ, ನಟ ಎಸ್.ಹನುಮಂತೇಗೌಡ, ವೈ.ಕೆ.ಬಾಲಕೃಷ್ಣ, ಸುಪ್ರೀಂ ಸುಬ್ಬಣ್ಣ, ಸಿ.ಕೆ.ಉಮಾಪತಿ, ಗಂಗಲಕ್ಷಿö್ಮ, ಜಿಎಂಎಸ್ ಕುಟುಂಬದವರು ಮಾತನಾಡಿದರು. ಎಚ್.ವಿ.ಮಂಜುನಾಥ್ ನಿರೂಪಿಸಿದರು. 

ಇದನ್ನೂ ಓದಿ: Tumkur News: ಶ್ರೀ ವಿದ್ಯಾಪೀಠ ಮತ್ತು ಸುಮತಿ ಶಿಕ್ಷಣ ಸಂಸ್ಥೆಗಳು ತಿಪಟೂರು ಹಾಗೂ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ