Friday, 13th December 2024

ಬಳ್ಳಾರಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತರ ಶಾಕ್

ಳ್ಳಾರಿ: ಬಳ್ಳಾರಿಯಲ್ಲಿ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೊಕಾಯುಕ್ತರು ಬಿಗ್ ಶಾಕ್ ಕೊಟ್ಟಿದ್ದಾರೆ. ಬಳ್ಳಾರಿ ನಗರ ಹಾಗೂ ಕಂಪ್ಲಿ ಪಟ್ಟಣದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಹಲವು ಕಚೇರಿಗಳ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಬಳ್ಳಾರಿ ಮೈನ್ಸ್ ಅಂಡ್ ಜಿಯೋಲಾಜಿ ಇಲಾಖೆಯಲ್ಲಿ ಹಿರಿಯ ಭೂ ವಿಜ್ಞಾನಿಯಾಗಿರುವ ಚಂದ್ರ ಶೇಖರ್ ಹೀರೇಮಾನಿ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಂದ್ರಶೇಖರ್ ಕೆಲಸ ಮಾಡುವ ಮೈನ್ಸ್ ಅಂಡ್ ಜಿಯೋಲಜಿ ಇಲಾಖೆ ಕಚೇರಿ ಹಾಗೂ ಅವರ ಮನೆ ಮೇಲೆ ಏಕಕಾಲ ದಲ್ಲಿ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ಅಲ್ಲದೇ ಚಂದ್ರಶೇಖರ್ ಅವರ ಹೊಸಪೇಟೆ ಮನೆಯ ಮೇಲೆ ಹಾಗೂ ಕಂಪ್ಲಿ ಪಟ್ಟಣದಲ್ಲಿ ಮಾರುತಿ ಎನ್ನುವರ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ಮಾರುತಿ ಗಂಗಾಗವತಿಯಲ್ಲಿ ಡಿಆರ್ ಎಫ್ ಒ ಆಗಿ ಕೆಲಸ ಮಾಡುತ್ತಿದ್ದು ಕಂಪ್ಲಿಯಲ್ಲಿ ಮನೆ ಹೊಂದಿದ್ದಾರೆ.

ಇಬ್ಬರು ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರದ ಆರೋಪ ಹಿನ್ನೆಲೆ ಲೊಕಾಯುಕ್ತರು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ. ಬಳ್ಳಾರಿ ಲೊಕಾಯುಕ್ತ ಎಸ್ಪಿ ಶಶಿಧರ್ ನೇತೃತ್ವದಲ್ಲಿ ಮೂರು ತಂಡಗಳಿಂದ ಈ ಭ್ರಷ್ಟರ ಭೇಟೆ ನಡೆದಿದೆ ಎಂದು ತಿಳಿದು ಬಂದಿದೆ.