Friday, 13th December 2024

ಅಮೆಜಾ಼ನ್ ಇಂಡಿಯಾ ಹಬ್ಬದ ಋತು: ಗ್ರಾಹಕರ ಪ್ಯಾಕೇಜ್‌ಗಳ ಅಂತರ ನಗರ ಸಾಗಣೆಗೆ ಶಕ್ತಿ

• ಕಳೆದ ೨ ವರ್ಷಗಳಲ್ಲಿ ದೇಶಾದ್ಯಂತ ಭಾರತೀಯ ರೈಲ್ವೆ ಗ್ರಾಹಕರ ಪ್ಯಾಕೇಜ್‌ಗಳನ್ನು ಹೊತ್ತೊಯ್ಯುತ್ತಿದ್ದು ಧಾರವಾಡ, ಮೈಸೂರು ಮತ್ತು ಬೆಳಗಾವಿ ನಗರಗಳಲ್ಲಿ ೧-ದಿನ ಮತ್ತು ೨-ದಿನ ಪೂರೈಕೆ ಸಾಧ್ಯವಾಗಿಸಿದೆ

ಬೆಂಗಳೂರು: ಅಮೆಜಾ಼ನ್ ಇಂಡಿಯಾ ಇಂದು ಭಾರತೀಯ ರೈಲ್ವೆಯೊಂದಿಗೆ ತನ್ನ ಕಾರ್ಯಾಚರಣೆಯ ಸಕ್ರಿಯತೆಯನ್ನು ಮತ್ತಷ್ಟು ಸದೃಢಗೊಳಿಸಿರುವುದನ್ನು ಪ್ರಕಟಿಸಿದ್ದು ೩೨೫ಕ್ಕೂ ಹೆಚ್ಚು ಅಂತರ-ನಗರ ಸಾರಿಗೆ ಮಾರ್ಗಗಳನ್ನು ಗ್ರಾಹಕರ ಪ್ಯಾಕೇಜ್‌ಗಳ ಸಾಗಣೆಗೆ ಪ್ರಾರಂಭಿಸಿದೆ.

ಇದು ೨೦೧೯ರಲ್ಲಿ ಭಾರತೀಯ ರೈಲ್ವೆಯೊಂದಿಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದ ದಿನದಿಂದ ೫ ಪಟ್ಟು ಹೆಚ್ಚಳವಾಗಿದೆ ಮತ್ತು ಕಂಪನಿಗೆ ದೇಶದ ಆಂತರಿಕ ಪ್ರದೇಶಗಳಲ್ಲಿ ೧-ದಿನ ಮತ್ತು ೨-ದಿನದ ಪೂರೈಕೆಯ ಭರವಸೆಯನ್ನು ಸಾಧ್ಯವಾಗಿಸುವಲ್ಲಿ ಮುಂಚೂಣಿಯಲ್ಲಿದೆ. ಈ ವಿಸ್ತರಣೆಯಿಂದ ಅಮೆಜಾ಼ನ್ ಇಂಡಿಯಾ ಈಗ ಕರ್ನಾಟಕದ ನಗರಗಳಾದ ಹುಬ್ಬಳ್ಳಿ, ಮೈಸೂರು, ಮಂಗಳೂರು ಇತ್ಯಾದಿಗಳಿಗೆ ಗ್ರಾಹಕರ ಪ್ಯಾಕೇಜ್‌ಗಳನ್ನು ಹೊತ್ತೊಯ್ಯಲಿದೆ.

ಈ ವಿಸ್ತರಣೆ ಕುರಿತು ಭಾರತದ ಅಮೆಜಾ಼ನ್ ಟ್ರಾನ್ಸ್ಪೊರ್ಟೇಷನ್‌ನ ನಿರ್ದೇಶಕ ವೆಂಕಟೇಶ್ ತಿವಾರಿ, “ಅಮೆಜಾ಼ನ್‌ನಲ್ಲಿ ನಾವು ನಮ್ಮ ಗ್ರಾಹಕರಿಗೆ ಅವರು ದೇಶದ ಉದ್ದಗಲಕ್ಕೂ ಎಲ್ಲಿಯೇ ಇರಲಿ ವೇಗದ ಮತ್ತು ಅನುಕೂಲಕರ ಶಾಪಿಂಗ್ ಅನುಭವ ನೀಡಲು ಆದ್ಯತೆ ನೀಡಿದೆ. ಭಾರತೀಯ ರೈಲ್ವೆಯೊಂದಿಗೆ ಕೆಲಸ ಮಾಡುವುದು ನಮ್ಮ ಬದ್ಧತೆಯನ್ನು ಮತ್ತಷ್ಟು ವಿಸ್ತರಿಸಿದ್ದು ನಮ್ಮ ಗ್ರಾಹಕರಿಗೆ ಧಾರವಾಡ ಮತ್ತು ಬೆಳಗಾವಿಯಂತಹ ನಗರಗಳಿಗೆ ೧ ಅಥವಾ ೨ ದಿನಗಳಲ್ಲಿ ವೇಗದ ಪೂರೈಕೆ ನೀಡಬಹುದಾಗಿದೆ. ನಾವು ಭಾರತದ ರೈಲ್ವೆಯೊಂದಿಗೆ ಸಕ್ರಿಯವಾಗಿರುವುದನ್ನು ಮುಂದುವರಿಸುತ್ತೇವೆ ಮತ್ತು ಅವರು ನಿರ್ಮಿಸಿದ ಸದೃಢ ಜಾಲ ಮತ್ತು ಮೂಲಸೌಕರ್ಯದಿಂದ ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತೇವೆ” ಎಂದರು.

ಅಮೆಜಾ಼ನ್ ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಭಾರತೀಯ ರೈಲ್ವೆಯೊಂದಿಗೆ ಕಾರ್ಯ ನಿರ್ವಹಿಸುವ ಮೊದಲ ಕಂಪನಿ ಯಾಗಿದ್ದು ರೈಲು ಮೂಲಕ ೨೦೧೯ರಲ್ಲಿ ವೇಗದ ಸಾರಿಗೆಯನ್ನು ನಿರ್ಮಿಸಿದೆ ಮತ್ತು ಅಂದಿನಿ೦ದಲೂ ಈ ಜಾಲದ ಮೂಲಕ ಪ್ಯಾಕೇಜ್‌ಗಳ ಸಾಗಣೆಯನ್ನು ಹೆಚ್ಚಿಸುತ್ತಿದೆ.

ಅಂದಿನಿ೦ದಲೂ ಅಮೆಜಾ಼ನ್ ಇಂಡಿಯಾ ಭಾರತೀಯ ರೈಲ್ವೆಯೊಂದಿಗೆ ತನ್ನ ಜಾಲವನ್ನು ವೇಗ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಪರಿಹಾರವನ್ನು ಅಖಿಲ ಭಾರತ ವ್ಯಾಪ್ತಿಯೊಂದಿಗೆ ನೀಡುತ್ತಿದೆ. ೨೦೨೦ರಲ್ಲಿ ಈ ಸಾಂಕ್ರಾಮಿಕ ಪ್ರೇರಿತ ಲಾಕ್‌ಡೌನ್ ಅವಧಿಯಲ್ಲಿ ಕಂಪನಿಯು ಭಾರತೀಯ ರೈಲ್ವೆಯೊಂದಿಗೆ ಅತ್ಯಂತ ಆದ್ಯತೆಯ ಉತ್ಪನ್ನಗಳ ಅಂತರ ನಗರ ಚಲನೆಗೆ `ಕೋವಿಡ್-೧೯ ಪಾರ್ಸಲ್ ಸ್ಪೆಷಲ್ ಟ್ರೆöÊನ್ಸ್’ ಒದಗಿಸಿತ್ತು.

ಈ ವಿಸ್ತರಣೆಯು ಗ್ರಾಹಕರ ಭರವಸೆಗಳನ್ನು ಪೂರೈಸುವ ಮತ್ತು ಈ ಹಬ್ಬದ ಋತುವಿನಲ್ಲಿ ವೇಗ ಹಾಗೂ ವಿಶ್ವಾಸಾರ್ಹ ಪೂರೈಕೆಗಳನ್ನು ಒದಗಿಸಲು ಪೂರಕವಾಗಿದೆ. ಅಮೆಜಾ಼ನ್ ಇಂಡಿಯಾ ಎಲ್ಲ ಶೇ.೧೦೦ರಷ್ಟು ಸರ್ವೀಸ್ ಮಾಡಬಹುದಾದ ಪಿನ್ ಕೋಡ್‌ಗಳಿಗೆ ಪೂರೈಕೆ ಮಾಡುತ್ತದೆ ಅವುಗಳಲ್ಲಿ ಶೇ.೯೭ಕ್ಕಿಂತ ಹೆಚ್ಚು ಪಿನ್ ಕೋಡ್‌ಗಳಲ್ಲಿ ಆರ್ಡರ್ ಮಾಡಿದ ೨ ದಿನಗಳ ಒಳಗಡೆ ಡೆಲಿವರಿ ಪಡೆಯಲು ಶಕ್ತರಾಗುತ್ತಾರೆ. ಕಂಪನಿಯು ದೇಶಾದ್ಯಂತ ೧-ದಿನ ಪೂರೈಕೆ ವಿಸ್ತರಿಸಲು ವೇಗಕ್ಕೆ ಹೂಡಿಕೆ ಮಾಡುವುದನ್ನು ಮುಂದುವರಿಸಿದೆ.