Saturday, 14th December 2024

ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ

ಬೆಂಗಳೂರು: ಜಾಮೂನು ಕೊಟ್ಟು ನಂತರ ವಿಷ ಕೊಡುವುದು ಕಾಂಗ್ರೆಸ್ ಪಕ್ಷದಲ್ಲಿ ಎಂದು ಶಾಸಕ ಡಾಕ್ಟರ್ ಅಶ್ವತ್ ನಾರಾಯಣ್ ಅವರು ಶಾಸಕ ಎಸ್ ಟಿ ಸೋಮಶೇಖರ್ ’ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಬೇರೆ ಪಕ್ಷದ ನಾಯಕರು ಆಗಮಿಸುವಾಗ ಮೊದಲು ಜಾಮೂನು ಕೊಡುತ್ತಾರೆ ಅದಾದ ನಂತರ ವಿಷ ಕೊಡುತ್ತಾರೆ ಎಂದು ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಸ್ವ ಪಕ್ಷದ ವಿರುದ್ಧವೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.

ಎಸ್ ಟಿ ಸೋಮಶೇಖರ್ ಅವರಿಗೆ ಪಕ್ಷ ಎಲ್ಲಾ ಕೊಟ್ಟಿದೆ. ಯಾರನ್ನು ಅಗೌರವದಿಂದ ನಡೆಸಿಕೊಳ್ಳಲ್ಲ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂಬ ಸೋಮಶೇಖರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು ಸೋಮಶೇಖರ್ ಯಾವ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

ಸೋಮಶೇಖರ್ ಗೆ ಬಿಜೆಪಿ ಎಲ್ಲಾ ರೀತಿಯಿಂದ ಸ್ಥಾನಮಾನ ಕೊಟ್ಟು ಗೌರವಿಸಿದೆ. ಒಂದು ದಿನವೂ ಬಿಜೆಪಿ ಪಕ್ಷ ಕಡೆಗಣಿಸಿಲ್ಲ. ಕಾಂಗ್ರೆಸ್ ನಲ್ಲಿ ಜಾಮೀನು ವಿಷ ಕೊಡುವುದು. ಶಾಸಕ ಎಸ್ ಟಿ ಸೋಮಶೇಖರ್ ಹೆಗಲ ಮೇಲೆ ಯಾವುದೇ ರೀತಿಯಾದಂತಹ ಭಾರ ಹೊರೆಸಿಲ್ಲ. ಏನೇ ಮಾತು ಹೇಳಿದರೂ ಸೋಮ ಶೇಖರ್ ಅವರು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.