Thursday, 28th March 2024

ಬಾಟ್ಲಾ ಹೌಸ್ ಶೂಟೌಟ್ ನಲ್ಲಿ ಟೆರೆರಿಸ್ಟ್ ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರಂತೆ

ಕಾಂಗ್ರೆಸ್ ವಿರುದ್ಧ ಪ್ರಹ್ಲಾದ ಜೋಶಿ ವಾಗ್ದಾಳಿ

ಬೆಂಗಳೂರು: ರಾಜಸ್ಥಾನದಲ್ಲಿ‌ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೊವನ್ನು ಹರಿಬಿಟ್ಟು ಕೊಲೆಗಡುಕ ಬಿಜೆಪಿ ಯವನು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ‌ ಇಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾರೀ ತಿರುಗೇಟು ನೀಡಿದ್ದಾರೆ. ಬಾಟ್ಲಾ ಹೌಸ್ ಶೂಟ್ ಔಟ್ ಪ್ರಕರಣವನ್ನು ನೆನಪಿಸಿರುವ ಅವರು ನೇರವಾಗಿ ಸೋನಿಯಾ ಗಾಂಧಿ ಮೇಲೆ ವಾಗ್ದಾಳಿ ಮಾಡಿದ್ದಾರೆ.

ಭಯೋತ್ಪಾದಕ ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರಂತೆ

ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಲ್ಹಾದ್ ಜೋಷಿ ಭಾಷಣ ಮಾಡಿದರು.‌ ಬಿಜೆಪಿಗೆ ಭಯೋತ್ಪಾದಕರ ಜೊತೆ ನಂಟಿದೆ ಎಂದು ಕಾಂಗ್ರೆಸ್ ಆರೋಪ ಮಾಡ್ತಾ ಇರೋದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ ಅವರು ಈ ಹಿಂದೆ ಸೋನಿಯಾ ಗಾಂಧಿ ಅಧಿಕಾರದಲ್ಲಿ ಇದ್ದಾಗ, ಮನಮೋಹನ್ ಸಿಂಗ್ ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ರು. ಅಧಿಕಾರ ನಡೆಸುತ್ತಾ ಇದ್ದದ್ದು ಸೋನಿಯಾ ಗಾಂಧಿ.

ಆ ಸಮಯದಲ್ಲಿ ಬಾಟ್ಲಾ ಹೌಸ್ ನಲ್ಲಿ ಭಯೋತ್ಪಾದಕರ ಮೇಲೆ‌ ಶೂಟ್ ಔಟ್ ಆದಾಗ ಒಬ್ಬ ಭಯೋತ್ಪಾದಕ ಸತ್ತು ಹೋಗಿದ್ದ. ಆಗ ಸೋನಿಯಾ ಗಾಂಧಿ ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ರಂತೆ. ಮಾತ್ರವಲ್ಲ ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೊ ತೆಗೆಸಿಕೊಂಡವರು. ಇಂತವರು ಇಂದು ಬಿಜೆಪಿ ಮೇಲೆ ಆರೋಪ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ಮಾಡಿದ್ರು.

ಅಷ್ಟೇ ಅಲ್ಲ, ಕಲಂ 370 ರದ್ದು ಮಾಡಿದ್ದು ಭಯೋತ್ಪಾದಕರ ನಿರ್ನಾಮಕ್ಕೆ ಕಾರಣ, ಇಂದು ದೇಶದಲ್ಲಿ ಭಯೋತ್ಪಾದನೆ ನಿರ್ನಾಮ‌ ಆಗಿದೆ. ಯಾರಾದರೂ ಒಳನುಸುಳಲು ಬಂದ್ರೆ ನಮ್ಮ ಸೈನಿಕರು ಗಡಿಯಲ್ಲೇ ಹೊಸಕಿ ಹಾಕ್ತಾರೆ ಎಂದ ಜೋಶಿ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಆರ್ಟಿಕಲ್370 ರದ್ದು ಮಾಡಿದ್ದೂ ಕೂಡ ಇಂದು ಭಯೋತ್ಪಾದನೆ‌ ನಿರ್ನಾಮ ಆಗೋಕೆ ಪ್ರಮುಖ ಕಾರಣ ಎಂದರು.

ವಿಷಯ ಡೈವರ್ಟ್ ಮಾಡಲು ಕಾಂಗ್ರೆಸ್ ತಂತ್ರ: ಈ ರೀತಿ ಆರೋಪ ಸುಳ್ಳುಗಳನ್ನು ಕಾಂಗ್ರೆಸ್ ಯಾಕೆ ಮಾಡ್ತಾ ಇದೆ ಅನ್ನೋ ದಕ್ಕೆ ಜೋಶಿ ಕಾರಣವನ್ನು ನೀಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡುವ ಜನಪರ ಕೆಲಸಗಳು, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಮಾಡುವ ಯೋಜನೆಗಳು ಜನರಿಗೆ ತಲುಪಬಾರದು ಎನ್ನುವ ಉದ್ದೇಶಕ್ಕೆ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು. ‌

ಕಾಂಗ್ರೆಸ್ ಸರ್ಕಾರ ಮಾಡಿದ್ದು ಸಾಲು ಸಾಲು ಹಗರಣ. ಇದೇ ವೇಳೆ ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾದರದ ಬಗ್ಗೆಯೂ ಪ್ರಸ್ತಾಪ ಮಾಡಿದ್ರು. ದೇಶದಲ್ಲಿ ‌ಕಾಂಗ್ರೆಸ್ ಸಾಲು ಸಾಲು ಹಗರಣ ಮಾಡಿತು.‌ ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣ ಸೇರಿದಂತೆ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ.‌ಆದ್ರೆ ಮೋದಿ‌ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದರು.‌

ಬಿಜೆಪಿ ಗ್ರಾಮೀಣ ಮಟ್ಟದ ಪಕ್ಷ: ಬಿಜೆಪಿ ಮೇಲೆ‌ ಈ ಮೊದಲು ಸಿಟಿ ಪಾರ್ಟಿ, ಉಳ್ಳವರ ಪಾರ್ಟಿ ಎಂದೆಲ್ಲಾ ಆರೋಪ‌ ಇತ್ತು. ಆದ್ರೆ ಇಂದು ಬಿಜೆಪಿ ಗ್ರಾಮೀಣ ಪಾರ್ಟಿ ಆಗಿದೆ ಮತ್ತು ಎಲ್ಲಾ ಗ್ರಾಮದಲ್ಲೂ ಬಿಜೆಪಿ ಪಾರ್ಟಿ ಇದೆ ಎಂದು ಪಕ್ಷದ ಸಂಘಟನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.‌

error: Content is protected !!