Friday, 13th December 2024

Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

Bengaluru power cut

ಬೆಂಗಳೂರು: ನಗರದ 66/11 ಕೆವಿ ಆರ್‌ಎಂವಿ ಎಂಯುಎಸ್ಎಸ್ ಉಪಕೇಂದ್ರದಲ್ಲಿ ಅರ್ಧ ವಾರ್ಷಿಕ ನಿರ್ವಹಣಾ ಕಾರ್ಯ (Maintenance Work) ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಸೆ.14 ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಬೆಂಗಳೂರು ಉತ್ತರ ವೃತ್ತದ ಅಧೀಕ್ಷಕ ಎಂಜಿನಿಯರ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Invest Karnataka: ನಿಡೆಕ್ ಕಾರ್ಪೊರೇಷನ್‌ನಿಂದ ಹೆಚ್ಚುವರಿ 150 ಕೋಟಿ ರೂ. ಹೂಡಿಕೆಯ ವಿಸ್ತರಣೆ; ಎಂ.ಬಿ. ಪಾಟೀಲ್‌

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ನಗರದ ರಾಮಯ್ಯ ಆಸ್ಪತ್ರೆ, ಪೈಪ್‌ಲೈನ್‌ ರಸ್ತೆ, ಎ.ಜಿ.ಎಸ್. ಲೇಔಟ್‌, ಸದಾಶಿವ ನಗರ ಪೋಲಿಸ್‌ ಠಾಣೆ, ಎಲ್.ಜಿ. ಹಳ್ಳಿ, ಆರ್.ಎಂ.ವಿ 2ನೇ ಹಂತ, ಬಿ.ಇ.ಎಲ್‌ ರಸ್ತೆ, ಎಂ.ಎಸ್. ಆರ್‌ ನಗರ, ಜಲದರ್ಶಿನಿ ಲೇಔಟ್‌, ಎಂ.ಎಸ್.ಆರ್. ನಗರ, ರಾಮಯ್ಯ ಬಾಯ್ಸ್‌ ಹಾಸ್ಟೆಲ್‌, ಎ.ಕೆ. ಕಾಲೋನಿ, ಕಾಫಿ ಡೇ, ಪಿಜಾ ಹಟ್‌, ಸೀನಪ್ಪ ಲೇ ಔಟ್‌, ಇಸ್ರೋ, ಡಾಲರ್ಸ್‌ ಕಾಲೋನಿ, ಚಿಕ್ಕ ಮಾರನಹಳ್ಳಿ, ಗೌರಿ ಅಪಾರ್ಟ್‌ಮೆಂಟ್‌, ಎನ್.ಎಸ್.ಹಳ್ಳಿ, ಯೆಜಮನ್ನಪ್ಪ ಲೇಔಟ್, ಯುಎಎಸ್ ಲೇಔಟ್, ಎನ್‌ಟಿಐ ಲೇಔಟ್, ವಿನಾಯಕ ಲೇಔಟ್, ಟೀಚರ್ಸ್ ಕಾಲೋನಿ, ವಿಎಸ್‌ಎನ್‌ಎಲ್, ಪೋಸ್ಟಲ್ ಲೇಔಟ್, ಜಡ್ಜಸ್ ಲೇಔಟ್, ಎನ್‌ಜಿಇಎಫ್ ಲೇಔಟ್, ಅಮರಜ್ಯೋತಿ ಲೇಔಟ್, ಹನುಮಯ್ಯ ಲೇಔಟ್, ಕೊಲ್ತೇಪಾಟೀಲ್ ದೊಡ್ಮನೆ, ಬಸವಲ್ಲಾಸ್ ಮುಖ್ಯರಸ್ತೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಈ ಸುದ್ದಿಯನ್ನೂ ಓದಿ | Bengaluru News: ಪ್ರತ್ಯೇಕ ಬಸ್‌ ಪಥಕ್ಕೆ ಆಗ್ರಹ; 28,995 ಮಂದಿಯ ಸಹಿಯುಳ್ಳ ಸಾರ್ವಜನಿಕರ ಅಹವಾಲು ಸಲ್ಲಿಸಿದ ಗ್ರೀನ್‌ಪೀಸ್‌ ಇಂಡಿಯಾ

ವಿದ್ಯುತ್ ಸಂಬಂಧಿತ ದೂರುಗಳಿಗಾಗಿ ಬೆ.ವಿ.ಕಂ ಸಹಾಯವಾಣಿ ಸಂಖ್ಯೆ ‘1912’ ಸಂಪರ್ಕಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.