Monday, 14th October 2024

Bengaluru Power Cut: ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್‌ ಇಲ್ಲ

bengaluru power cut

ಬೆಂಗಳೂರು: ಬೆಂಗಳೂರು ನಗರದ 66/11 ಕೆ.ವಿ ಸುಬ್ರಮಣ್ಯಪುರ ಉಪಕೇಂದ್ರದಲ್ಲಿ ನಿರ್ವಹಣಾ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು (Bengaluru Power Cut) ನಗರದ ಹಲವೆಡೆ ಸೆ.18 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಜಯನಗರ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ತಿಳಿಸಿದ್ದಾರೆ.

ವಿದ್ಯುತ್‌ ವ್ಯತ್ಯಯವಾಗುವ ಸ್ಥಳಗಳು

ಗಬ್ಬಲಾಳ, ಉತ್ತರಹಳ್ಳಿ, ಇಸ್ರೋ ಲೇಔಟ್‌ ಕೈಗಾರಿಕಾ ಪ್ರದೇಶ, ಆದರ್ಶ ಅಪಾರ್ಟಮೆಂಟ್‌ 1 ಮತ್ತು 2. ಮಂತ್ರಿ ಟ್ರಾನ್ಕ್ವಿಲ್‌ ಅಪಾರ್ಟ್‌ಮೆಂಟ್‌, ಮಾರುತಿ ಲೇಔಟ್‌, ಭಾರತ್‌ ಲೇಔಟ್‌, ದೊಡ್ಡಕಲ್ಲಸಂದ್ರ ಕೈಗಾರಿಕಾ ಪ್ರದೇಶ, ವಿಠ್ಠಲ ನಗರ, ಯಾದಳಾಂ ನಗರ, ಮಾರುತಿ ನಗರ ಹಾಗೂ ಸುತ್ತಮತ್ತಲಿನ ಪ್ರದೇಶಗಳು.

ವಿಲ್ಸನ್‌ ಗಾರ್ಡನ್‌ ನಾಗ ಕಲಬುರಗಿ ಜೈಲಿಗೆ ಶಿಪ್ಟ್‌, ಕೋರ್ಟ್‌ ಅಸ್ತು

ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್‌ (Actor Darshan) ಜೊತೆಗೆ ಸಿಗರೇಟ್‌ ಪಾರ್ಟಿ ಮಾಡಿದ್ದ ಕುಖ್ಯಾತ ರೌಡಿ ನಾಗರಾಜ್‌ ಅಲಿಯಾಸ್‌ ವಿಲ್ಸನ್‌ ಗಾರ್ಡನ್‌ ನಾಗ (Wilson Garden Naga) ಸೇರಿದಂತೆ 20 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಸೆಷನ್ಸ್‌ ನ್ಯಾಯಾಲಯವು (Court News) ಮಂಗಳವಾರ ಅನುಮತಿ ನೀಡಿದೆ.

ನ್ಯಾಯಾಲಯದ ಆದೇಶ ಪ್ರತಿ ಬುಧವಾರ ಪೊಲೀಸರ ಕೈ ಸೇರಲಿದ್ದು, ಬಳಿಕ ರೌಡಿ ನಾಗ ಸೇರಿದಂತೆ 20 ಮಂದಿ ವಿಚಾರಣಾಧೀನ ಕೈದಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಪೊಲೀಸರು ಸ್ಥಳಾಂತರಿಸಲಿದ್ದಾರೆ. ನಾಗನನ್ನು ಕಲಬುರಗಿ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಲೆ ಆರೋಪಿ ನಟ ದರ್ಶನ್‌, ರೌಡಿ ವಿಲ್ಸನ್‌ ಗಾರ್ಡನ್‌ ನಾಗ ಹಾಗೂ ಆತನ ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡಿರುವ ಫೋಟೋ ಹಾಗೂ ವಿಡಿಯೋಗಳು ಲೀಕ್‌ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ನಗರ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಸೇರಿದಂತೆ 10 ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಿದ್ದರು.

ಈ ನಡುವೆ ರೌಡಿ ನಾಗ ಸೇರಿದಂತೆ 20 ಮಂದಿ ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಅನುಮತಿ ಕೋರಿ ನಗರ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯವು ಅನುಮತಿ ನೀಡಿ ಆದೇಶಿಸಿದೆ.

ಇದನ್ನೂ ಓದಿ: Tata Power and Tata Motors: ವಿದ್ಯುತ್ ವಾಣಿಜ್ಯ ವಾಹನಗಳಿಗಾಗಿ 200 ಫಾಸ್ಟ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಎಂಓಯು ಗೆ ಸಹಿ ಹಾಕಿದ ಟಾಟಾ ಪವರ್ ರಿನೀವೇಬಲ್ ಎನರ್ಜಿ ಮತ್ತು ಟಾಟಾ ಮೋಟಾರ್ಸ್