ಬೆಂಗಳೂರು: ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭವಾಗಲು ದಿನಗಣನೆ ಆರಂಭವಾಗಿದೆ. ಈ ರಿಯಾಲಿಟಿ ಶೋ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಯಾರೆಲ್ಲ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಬಿಗ್ಬಾಸ್ ಕನ್ನಡ ಯಾವಾಗ ಆರಂಭವಾಗಲಿದೆ? ಈ ಬಾರಿ ಯಾವ ಸೀರಿಯಲ್ ಆಕ್ಟರ್ ಭಾಗಿಯಾಗಲಿದ್ದಾರೆ? ಯಾವ ಕಾಮಿಡಿಯನ್ ಭಾಗಿಯಾಗ ಲಿದ್ದಾರೆ. ಯಾವ ರೈತನಿಗೆ ಸ್ಪರ್ಧಿಸಲು ಅವಕಾಶ ದೊರಕಲಿದೆ? ಹೀಗೆ ಪ್ರೇಕ್ಷಕರಲ್ಲಿ ಸಾಕಷ್ಟು ಪ್ರಶ್ನೆಗಳು ಇರಬಹುದು. ಕಲರ್ಸ್ ಕನ್ನಡವು ಈ ಕಾರ್ಯ ಕ್ರಮದ ಕುರಿತು ಕೊನೆತನಕ ಗೌಪ್ಯತೆ ಕಾಪಾಡಿಕೊಳ್ಳುವ ಕಾರಣ ಕೆಲವು ಪ್ರಶ್ನೆಗಳಿಗೆ ಸದ್ಯ ಉತ್ತರ ದೊರಕದು. ಕಿಚ್ಚ ಸುದೀಪ್ ನಡೆಸಿಕೊಡುವ ಈ ಬಿಗ್ಬಾಸ್ ಕನ್ನಡ ಸೀಸನ್ 11ರ ಕುರಿತಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಸೆಪ್ಟೆಂಬರ್ 3ನೇ ವಾರ ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದೆ. ಬಲ್ಲ ಮೂಲಗಳ ಪ್ರಕಾರ ಈ ಬಾರಿಯೂ ಕಿಚ್ಚ ಸುದೀಪ್ ದೊಡ್ಮನೆಗೆ ಬಾಸ್ ಆಗಿರಲಿದ್ದಾರೆ.
ಮತ ಚಲಾಯಿಸಲು ಎರಡು ಆಯ್ಕೆಗಳು ಇವೆ. ಈ ಶೋ ಆರಂಭವಾದ ಬಳಿಕ ಚಾನೆಲ್ ನೀಡುವ ಸಂಖ್ಯೆಗೆ ಮಿಸ್ ಕಾಲ್ ನೀಡಬಹುದು. ಜಿಯೋ ಸಿನಿಮಾ ಆಪ್ನಲ್ಲಿ ಮತ ಚಲಾಯಿಸಲು ಅವಕಾಶವಿರುತ್ತದೆ.
ಬಿಗ್ಬಾಸ್ ಕನ್ನಡದಲ್ಲಿ ಪಾಲ್ಗೊಳ್ಳಲು ಮುಕ್ತ ಕರೆ ಅಥವಾ ಆಹ್ವಾನ ಇರುವುದಿಲ್ಲ. ಕಲರ್ಸ್ ಕನ್ನಡ ವಾಹಿನಿಯವರೇ ಒಂದಿಷ್ಟು ಜನರನ್ನು ಸಂಪರ್ಕಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರುತ್ತಾರೆ. ಕಿನ್ನರಿ ನಟಿ ಜ್ಯೋತಿ ಪೂರ್ವಜ್ಗೂ ಇದೇ ರೀತಿ ಆಹ್ವಾನ ಹೋಗಿತ್ತು. ನಾನು ಬಿಬಿಕೆ 11 ಆಫರ್ ನಿರಾಕರಿಸಿದ್ದೇನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು.
ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ದೊರಕುತ್ತದೆ. ಭಾಗವಹಿಸಿದವರಿಗೂ ದಿನಕ್ಕೆ, ವಾರಕ್ಕೆ ಇಂತಿಷ್ಟು ಮೊತ್ತ ನಿಗದಿಯಾಗಿರುತ್ತದೆ. ಇದೇ ಸಮಯ ದಲ್ಲಿ ಇಂತಹ ಪ್ರಮುಖ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ದೊಡ್ಡಮಟ್ಟದ ಪ್ರಚಾರ ದೊರಕುತ್ತದೆ. ಮುಂದೆ ಅವರಿಗೆ ಸಿನಿಮಾ, ಸೀರಿಯಲ್ಗಳಲ್ಲಿ ಅವಕಾಶ ಹೆಚ್ಚುತ್ತದೆ.