Wednesday, 11th December 2024

ಕನ್ಯಾಕುಮಾರಿಯಲ್ಲಿ ಬ್ರೇಕ್ಸ್ ಇಂಡಿಯಾ ಯಾತ್ರಾಗೆ ಚಾಲನೆ

ಬೆoಗಳೂರು: ದೇಶದ ಮುಂಚೂಣಿಯ ಬ್ರೇಕಿಂಗ್ ವ್ಯವಸ್ಥೆಗಳ ಉತ್ಪಾದಕರು ಮತ್ತು ಪೂರೈಕೆದಾರರು ಹಾಗೂ ಅಧಿಕೃತ ಬಿಡಿಭಾಗಗಳ ಮಾರಾಟ ಕ್ಷೇತ್ರದಲ್ಲಿ ಖ್ಯಾತನಾಮರಾಗಿರುವ ಬ್ರೇಕ್ಸ್ ಇಂಡಿಯಾ, ಈಗ 13 ರಾಜ್ಯಗಳಲ್ಲಿ, 90 ನಗರಗಳ ಮೂಲಕ 17,000 ಕಿಲೋಮೀಟರ್‌ಗಳಷ್ಟು ದೂರ ಕ್ರಮಿಸಲಿರುವ ಭಾರತದ ಎಲ್ಲೆಡೆ ಗ್ರಾಹಕರನ್ನು ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮ – ಬ್ರೇಕ್ಸ್ ಇಂಡಿಯಾ ಭಾರತ್ ಯಾತ್ರಾಗೆ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಿದೆ. ಇದರ ಉದ್ದೇಶ ಸರಳವಾಗಿದೆ. ಆಟೋ ಗ್ಯಾರೇಜ್‌ಗಳು ಮತ್ತು ರಿಟೇಲರ್‌ಗಳ ಸಮುದಾಯದಲ್ಲಿ ಅಸಾಧಾರಣ ಬಿಡಿಭಾಗಗಳ ಮಾರಾಟ ಸೇವೆಗಳು, ಸಮಯಕ್ಕೆ ಸರಿಯಾಗಿ ಉತ್ಪನ್ನಗಳ ಲಭ್ಯತೆ, ಅಧಿಕೃತ ಬ್ರಾಂಡೆಡ್ ಉತ್ಪನ್ನಗಳ ಅಗತ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ.

ಈ ಸಂದರ್ಭದಲ್ಲಿ ಫ್ರಿಕ್ಷನ್ ಎಂಡ್ ಆಫ್ಟರ್ ಮಾರ್ಕೆಟ್ ವ್ಯವಹಾರ ವಿಭಾಗದ ಹಿರಿಯ ಉಪಾಧ್ಯಕ್ಷ ಸುಜಿತ್ ನಾಯಕ್ ಅವರು ಮಾತನಾಡಿ, “ನಮ್ಮ ಮೊಬೈಲ್ ತರಬೇತು ಕೇಂದ್ರ ವಿಸ್ತರಣೆಯಾಗಿರುವ ಬ್ರೇಕ್ಸ್ ಇಂಡಿಯಾ ಯಾತ್ರಾ, ನಾವು ಕೈಗೊಂಡಿರುವ ಅತ್ಯಂತ ದೊಡ್ಡ ಪ್ಯಾನ್ ಇಂಡಿಯಾ ನೇರ ಮಾರುಕಟ್ಟೆ ಉಪಕ್ರಮವಾಗಿದೆ. ನಾವು ಸಾದರಪಡಿಸುವ ಅಧಿಕೃತ ಬಿಡಿಭಾಗಗಳು ಮತ್ತು ದ್ರವಗಳ ಕುರಿತ ಅರಿವಿನೊಂದಿಗೆ ನಮ್ಮ ಗೌರವಯುತ ಗ್ರಾಹಕರಿಗೆ ಇದು ಲಾಭದಾಯಕವಾಗಲಿದೆ. ಮೆಕ್ಯಾನಿಕ್‌ಗಳಿಗೆ ಮನೆ ಬಾಗಿಲಲ್ಲೇ ತರಬೇತಿ ಮತ್ತು ಪ್ರಾಮಾಣೀಕರಣ(ಸರ್ಟಿಫಿಕೇಷನ್) ನೀಡುವ ನಮ್ಮ ಮೊಬೈಲ್ ತರಬೇತು ಕೇಂದ್ರಗಳೊAದಿಗೆ ಈ ಪ್ರಯಾಣವನ್ನು 5 ವರ್ಷಗಳ ಹಿಂದೆ ಆರಂಭಿಸಿದ್ದೆವು. ‘ಸುರಕ್ಷಿತ ಸಂಚಾರಕ್ಕಾಗಿ ಪಾಲುದಾರರು’ ಎಂಬ ನಮ್ಮ ಘೋಷವಾಕ್ಯದಂತೆ ಗ್ರಾಹಕರ ಸುರಕ್ಷತೆ ನಮ್ಮ ಅಗ್ರ ಆದ್ಯತೆಯ ವಿಷಯವಾಗಿದೆ. ಅವರಿಗೆ ನಾವು ಗುಣಮಟ್ಟದ ಮತ್ತು ಅಧಿಕೃತ ಉತ್ಪನ್ನಗಳನ್ನು ನಾವು ಸಾದರಪಡಿಸುವ ಖಾತ್ರಿ ಮಾಡಿಕೊಳ್ಳಲು ನಾವು ಶ್ರಮಿಸುವೆವು” ಎಂದರು.

ಬ್ರೇಕ್ಸ್ ಇಂಡಿಯಾ ವ್ಯಾನನ್ನು ಸಂಸ್ಥೆಯ ಚೆನ್ನೆöÊನ ಕೇಂದ್ರ ಕಚೇರಿಯಲ್ಲಿ ಇದೇ ವಾರ ಅನಾವರಣಗೊಳಿಸಲಾಯಿತು. ಕಾಶ್ಮೀರಕ್ಕೆ ಇದರ ಪ್ರಯಾಣಕ್ಕೆ ಕನ್ಯಾಕುಮಾರಿಯಲ್ಲಿ ಚಾಲನೆ ನೀಡಲಾಯಿತು. ಈ ಪ್ರಯಾಣ ಮದುರೈ, ಬೆಂಗಳೂರು, ಹೈದರಾಬಾದ್, ನಾಗ್‌ಪುರ್, ಝಾನ್ಸಿ, ಇಂದೋರ್, ಜೈಪುರ್, ಗುರುಗ್ರಾಮ್, ಚಂಡೀಘರ್ ಮುಂತಾದ ಹಲವು ನಗರಗಳಲ್ಲಿ ಸಾಗಿ ಕಾಶ್ಮೀರದಲ್ಲಿ ಮುಕ್ತಾಯವಾಗಲಿದೆ. ಬ್ರೇಕ್ಸ್ ಇಂಡಿಯಾ ಈ ಹಿಂದೆ, ಕ್ವಿಕ್ ಬ್ರೇಕ್ ಸರ್ವೀಸ್(ಕ್ಯುಬಿಎಸ್) ಮತ್ತು ಆಥರೈಸ್ಡ್ ಸರ್ವೀಸಸ್ ಸೆಂರ‍್ಸ್(ಎಎಸ್‌ಸಿಎಸ್)ನAತಹ ಉಪಕ್ರಮಗಳನ್ನು ಆರಂಭಿಸಿದ್ದು, ಈ ರೋಡ್‌ಶೋ ಸಂದರ್ಭದಲ್ಲಿ ಇವುಗಳ ಮೇಲೆಯೂ ಗಮನ ಹರಿಸಲಾಗುವುದು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಸಂಸ್ಥೆಯ ಪ್ರಸ್ತುತ ಮತ್ತು ನೂತನವಾಗಿ ಬಿಡುಗಡೆ ಮಾಡಿದ ಉತ್ಪನ್ನಗಳ ಶ್ರೇಣಿಗಳನ್ನು ಕೂಡ ತಂಡ ಪ್ರದರ್ಶಿಸ ಲಿದೆ. ಫ್ರಿಕ್ಷನ್, ಬಿಡಿಭಾಗಗಳು, ದ್ರವಗಳು, ಅಲ್ಲದೇ ಈಗ ಟಿವಿಎಸ್ – ಗರ್ಲಿಂಗ್, ಟಿವಿಎಸ್-ಅಪಾಷೆ, ಟಿವಿಎಸ್-ಸ್ಪಿçಂಟರ್ ಮತ್ತು ರೇವಿಯ ಬ್ರಾಂಡ್‌ಗಳ ಅಡಿಯಲ್ಲಿ ಫ್ಲುಯಿಡ್ಸ್ ಮತ್ತು ಇಂಜಿನ್ ಆಯಿಲ್‌ಗಳ ಕ್ಷೇತ್ರಕ್ಕೆ ಸಂಸ್ಥೆ ವಿಸ್ತರಿಸಿಕೊಂಡಿದೆ. ಇಂತಹ ಉತ್ಪನ್ನಗಳ ವೈವಿಧ್ಯತೆಯಿಂದ ಅಧಿಕೃತ ಬಿಡಿಭಾಗ ಗಳ ಕ್ಷೇತ್ರದಲ್ಲಿ ನಂಬಿಕಾರ್ಹ ಹೆಸರಾಗಿ ಬ್ರೇಕ್ಸ್ ಇಂಡಿಯಾ ಕ್ಷಿಪ್ರಗತಿಯಲ್ಲಿ ಬೆಳೆದಿದೆ.