Saturday, 14th December 2024

ಕೇರಳ-ಬೆಂಗಳೂರು ಖಾಸಗಿ ಬಸ್‌ಗಳ ಪ್ರಯಾಣ ದರ ಹೆಚ್ಚಳ

ಬೆಂಗಳೂರು: ಕೇರಳ ಮತ್ತು ಬೆಂಗಳೂರು ಮಧ್ಯೆ ಸಂಚರಿಸುವ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಕನಿಷ್ಠ 150ರಿಂದ 250 ರೂ. ವರೆಗೂ ಟಿಕೆಟ್ ದರವನ್ನು ಏರಿಕೆ ಮಾಡಲಾಗಿದೆ. ಇದರಿಂದ ಸಹಜವಾಗಿಯೇ ಪ್ರಯಾಣಿಕರ ಜೇಬಿಗೆ ಹೊರೆ ಬಿದ್ದಿದೆ.

ಎರ್ನಾಕುಲಂ-ಬೆಂಗಳೂರು ಜನಪ್ರಿಯ ಹಾಗೂ ಹೆಚ್ಚು ದಟ್ಟಣೆಯ ರೂಟ್ ಆಗಿದ್ದು, ಈ ಮಾರ್ಗವಾಗಿ ಪ್ರಯಾಣಿಸುವ ಪ್ರಯಾ ಣಿಕರಿಗೆ ಬಸ್ ದರ ದುಬಾರಿಯಾಗಿದೆ. 1350 ರೂ. ಇದ್ದ ದರವನ್ನು ಈಗ 1,500 ರೂ.ಗೆ ಏರಿಕೆ ಮಾಡಲಾಗಿದೆ. ಕರ್ನಾಟಕ ಅಂತಾ ರಾಜ್ಯ ಬಸ್ ನಿರ್ವಾಹಕರ ಸಂಘಟನೆಯು ಈ ದರವನ್ನು ಹೆಚ್ಚಿಸಿದೆ.

ಕೇರಳ ಸರ್ಕಾರವು, ಕೇರಳ ಹೊರತಾಗಿ ನೋಂದಣಿ ಮಾಡಿಕೊಂಡಿರುವ ವಾಹನಗಳ ಮೇಲೆ ವೆಹಿಕಲ್ ಟ್ಯಾಕ್ಸ್ ಪರಿಚಯಿಸಿದೆ. ಈ ತೆರಿಗೆ ನ.1ರಿಂದ ಜಾರಿಗೆ ಬಂದಿದೆ. ಈ ತೆರಿಗೆ ಭಾರವನ್ನು ಖಾಸಗಿ ಬಸ್ ನಿರ್ವಾಹಕರು ಇದೀಗ ಪ್ರಯಾಣಿಕರಿಗೆ ವರ್ಗಾಯಿಸಿ ದ್ದಾರೆ. ಹಾಗಾಗಿ, ಬಸ್ ದರ ಹೆಚ್ಚಿಸಿದ್ದಾರೆ.

ತೆರಿಗೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಬಸ್ ನಿರ್ವಾಹಕರು ಪ್ರತಿ ತ್ರೈಮಾಸಿಕವಾಗಿ, ಪ್ರತಿ ಸೀಟಿಗೆ 4 ಸಾವಿರ ರೂ. ತೆರಿಗೆ ನೀಡ ಬೇಕಾಗುತ್ತದೆ. ಅಂದರೆ, 36 ಸೀಟ್‌ಗಳಿರುವ ಬಸ್‌ ಕನಿಷ್ಠ 1.44 ಲಕ್ಷ ರೂ. ತೆರಿಗೆಯನ್ನು ಪಾವತಿಸಬೇಕು.