Thursday, 12th September 2024

ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ: ಹಿರಿಯ ನಟ ಅನಂತ್ ನಾಗ್

ಬೆಂಗಳೂರು: ಬ್ರಿಟಿಷರ ಕಾಲದಿಂದಲೂ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ. ಬ್ರಿಟಿಷರು ತಮಿಳುನಾಡಿಗೆ ಹೆಚ್ಚು ನೀರು ಸಿಗುವಂತಹ ಅವ್ಯವಸ್ಥೆ ಮಾಡಿದ್ದರು. ಕಳೆದ ಅನೇಕ ವರ್ಷಗಳಲ್ಲಿ ಈ ವಿವಾದ ಹೆಚ್ಚಾಗುತ್ತಲೇ ಬಂದಿದೆ. ಕರ್ನಾಟಕ ಇದೀಗ ಕಠಿಣ ನಿಲುವು ತೆಗದುಕೊಳ್ಳಬೇಕಾಗಿದೆ ಎಂದು ಹಿರಿಯ ನಟ ಅನಂತ್ ನಾಗ್ ಹೇಳಿದ್ದಾರೆ.
ಕಾವೇರಿ ಬಿಕ್ಕಟ್ಟಿನ ಸಂಬಂಧ ವಿಡಿಯೊಂದರಲ್ಲಿ ಮಾತನಾಡಿರುವ ಅನಂತ್ ನಾಗ್, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯದ ಶಾಸಕರು, ಸಂಸದರು ಒಗ್ಗಟ್ಟಾಗಿ ನಿಂತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಳೆ ಕಡಿಮೆ ಇದ್ದ ಸಂದರ್ಭದಲ್ಲಿ ಎಂದಿನಂತೆ ತಮಿಳುನಾಡು ಕಾವೇರಿ ವಿವಾದ ಆರಂಭಿಸಿದೆ. ಇದನ್ನು ಸುಮಾರು 60 ವರ್ಷದಿಂದ ನೋಡಿಕೊಂಡು ಬಂದಿದ್ದೇವೆ. ಅಲ್ಲಿ ಅಧಿಕಾರಕ್ಕೆ ಬರುವುದು ಕೇವಲ ಡಿಎಂಕೆ ಸರ್ಕಾರಗಳೇ. ಕರ್ನಾಟಕ ಸರಿಯಾಗಿ ಕಾವೇರಿ ನೀರು ಬಿಡುತ್ತಿಲ್ಲ ಎನ್ನುವ ಭಾವನೆಯನ್ನು ಅಲ್ಲಿನ ಜನರಿಗೆ ತಂದಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕ ಎಂದರೆ ಪಾಕಿಸ್ತಾನ, ಶ್ರೀಲಂಕಾ ಅಂದುಕೊಂಡಿದ್ದಾರೆ. ಯುದ್ಧಕ್ಕೆ ನಿಂತುಕೊಂಡಂತೆ ಅವರ ನಡೆಯಿದೆ. ನಮ್ಮವರು ಅಷ್ಟೇ ಬಲದಿಂದ ಹೋಗಿ ಪ್ರತಿನಿಧಿಸಿದ್ದು ಕೇಳಿ ಬರುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ನಮ್ಮ ಎಲ್ಲ ಶಾಸಕರು, ಸಂಸದರು ಒಗ್ಗಟ್ಟಿನಿಂದ ನಿಂತುಕೊಂಡು ಈ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಈ ಕುರಿತು ದಿಟ್ಟ ನಿಲುವು ತಾಳಬೇಕು ಎಂದು ಅನಂತನಾಗ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *