Saturday, 14th December 2024

ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೆ ಶೆಟ್ಟರ್‌ಗೆ ಬಿ ಫಾರಂ

ಬೆಂಗಳೂರು: ಬಿಜೆಪಿಗೆ ರಾಜೀನಾಮೆ ನೀಡಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೆ ಬಿ ಫಾರಂ ನೀಡಿದೆ.

ಮುಂದಿನ ವಿಧಾನ ಸಭೆ ಚುನಾವಣೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕಿಳಿಯಲಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವವನ್ನು ಪಡೆದಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆಯಾದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ. ಇದರಿಂದ ಒಂದಷ್ಟು ಜನರಿಗೆ ಶಾಕ್‌ ಆಗಿದೆ. ಸ್ವಾಭಿಮಾ ನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ವಿರುದ್ಧ ಮನದಾಳದ ಮಾತುಗಳ ನ್ನಾಡುತ್ತ ಜಗದೀಶ್ ಶೆಟ್ಟರ್ ಕೆಂಡಾ ಮಂಡಲರಾಗಿದ್ದಾರೆ.

ನಾನು ಮೋದಿ, ಅಮಿತ್‌ ಷಾ, ಜೆಪಿ ನಡ್ಡಾ ಅವರನ್ನು ಟೀಕೆ ಮಾಡುತ್ತಿಲ್ಲ. ಪಕ್ಷದಿಂದ ಹೊರ ಹಾಕಲು ಷಡ್ಯಂತ್ರ ನಡೆಯಿತು. ಮತ್ತೊಂದು ಬಾರಿ ಗೆದ್ದರೆ ಲಿಂಗಾಯತ ನಾಯಕನಾಗುವೆ. ಬಿಜೆಪಿಯ ಯಶಸ್ಸು ಕೆಲವು ವ್ಯಕ್ತಿಗಳಿಗೆ ಕೇಂದ್ರಿಕೃತವಾಗಿದೆ. ವ್ಯವಸ್ಥಿತವಾಗಿ ನನ್ನನ್ನು ಹೊರ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.