Monday, 16th September 2024

Crime News: ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಬಾಲೆಯರ ವೇಶ್ಯಾವಾಟಿಕೆ

bangalore crime news

ಬೆಂಗಳೂರು: ಬಾಂಗ್ಲಾದೇಶದಿಂದ (Bangladesh) ಎಳೆಯ ವಯಸ್ಸಿನ ಹುಡುಗಿಯರನ್ನು (Minors) ಕರೆತಂದು ವೇಶ್ಯಾವಾಟಿಕೆ (prostitution arrests) ನಡೆಸುತ್ತಿದ್ದ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬೆಂಗಳೂರಿನ ಹೊಂಗಸಂದ್ರ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದಾಗ ಬಾಂಗ್ಲಾದೇಶದ ಇಬ್ಬರು ಬಾಲಕಿಯರು ವೇಶ್ಯಾವಾಟಿಕೆಗೆ ಬಳಕೆಯಾಗುತ್ತಿರುವುದು (Crime news) ಗೊತ್ತಾಗಿದೆ.

ಬಾಲಕಿಯರನ್ನು ಸಿಸಿಬಿ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಕರಣದ ಸಂಬಂಧ ಮೂವರು ವ್ಯಕ್ತಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಸಿಬ್ಬಂದಿ ಈ ದಾಳಿ ನಡೆಸಿದೆ. ಬಂಧಿತರಲ್ಲಿ ಇಬ್ಬರು ಒರಿಸ್ಸಾದವರಾಗಿದ್ದು, ಮತ್ತೊಬ್ಬ ಸ್ಥಳೀಯ ಎಂದು ತಿಳಿದುಬಂದಿದೆ. ಸೂರಜ್‌ ಸಾಹಜಿ, ಸುಬ್ರಹ್ಮಣ್ಯ ಹಾಗೂ ಕರಿಷ್ಮಾ ಶೇಖ್‌ ಎಂಬವರು ಬಂಧಿತ ಆರೋಪಿಗಳು.

ಇದರಲ್ಲಿ ಸುಬ್ರಹ್ಮಣ್ಯ ಎಂಬಾತ ಸ್ಥಳೀಯನಾಗಿದ್ದು, ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತ ಅಪ್ರಾಪ್ತ ಹುಡುಗಿಯರು ಬೇಕು ಎಂದು ಬುಕ್‌ ಮಾಡಿದ್ದ. ಇನ್ನಿಬ್ಬರು ಆರೋಪಿಗಳು ಈ ಬಾಲಕಿಯರನ್ನು ಆತನ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದುಬಂದಿದೆ. ಈ ವಿಷಯ ತಿಳಿದ ಪೊಲೀಸರು ಏಕಾಏಕಿ ದಾಳಿ ಮಾಡಿದ್ದಾರೆ. ವಿಚಾರಣೆ ನಡೆಸಿದಾಗ ಬಾಲಕಿಯರು ಬಾಂಗ್ಲಾದೇಶದವರು ಎಂದು ಗೊತ್ತಾಗಿದ್ದು, ಹೊಂಗಸಂದ್ರದ ಬಾಡಿಗೆ ಮನೆಯಲ್ಲಿಟ್ಟು ವೇಶ್ಯಾವಟಿಕೆ ನಡೆಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.

 

 

Leave a Reply

Your email address will not be published. Required fields are marked *