Monday, 9th December 2024

Crime News: ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ದಂಪತಿ ಆರೆಸ್ಟ್

crime news bangalore

ಬೆಂಗಳೂರು: ಇವೆಂಟ್ ಮ್ಯಾನೇಜ್ಮೆಂಟ್ ಕೆಲಸ ಕೊಡಿಸುವ ನೆಪದಲ್ಲಿ ಯುವತಿಯರನ್ನು ಕರೆತಂದು ಹೈಟೆಕ್ ವೇಶ್ಯಾವಾಟಿಕೆ ದಂಧೆ (Bangalore Crime News) ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿ ಪೊಲೀಸರು (CCB police) ಬಂಧಿಸಿದ್ದಾರೆ. ಪಟ್ಟೆಗಾರ ಪಾಳ್ಯ ನಿವಾಸಿಗಳಾದ ಪ್ರಕಾಶ್, ಪಾರಿಜಾತ ಬಂಧಿತ ದಂಪತಿ.

ಇವರು ರಾಕೇಶ್, ಪೂಜಾ ಎಂದು ಹೆಸರು ಬದಲಿಸಿಕೊಂಡು ದಂಧೆ ನಡೆಸುತ್ತಿದ್ದರು. ಉದ್ಯೋಗ ಕೊಡಿಸುವ ನೆಪದಲ್ಲಿ ಉತ್ತರ ಕರ್ನಾಟಕದ ಬಡ ಹೆಣ್ಣು ಮಕ್ಕಳನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೆಲಸ ಕೊಡಿಸದೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು.

ತಮಿಳುನಾಡು, ಪಾಂಡಿಚೇರಿ ರೆಸಾರ್ಟ್‌ಗಳಲ್ಲಿ ದಂಧೆ ನಡೆಸುತ್ತಿದ್ದರು. ಮದುವೆ ಇವೆಂಟ್ ಮ್ಯಾನೇಜ್ಮೆಂಟ್ ಹೆಸರಲ್ಲಿ ಪ್ರತಿ ವಾರ ಬೆಂಗಳೂರಿನಿಂದ ತಮಿಳುನಾಡಿಗೆ ಯುವತಿಯರನ್ನು ಕರೆದೊಯ್ದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಶ್ರೀಮಂತರು, ಉದ್ಯಮಿಗಳು, ರೆಸಾರ್ಟ್‌ಗಳಿಗೆ ಭೇಟಿ ನೀಡುತ್ತಿದ್ದವರ ಬಳಿಗೆ ಹೆಣ್ಣು ಮಕ್ಕಳನ್ನು ಕಳಿಸುತ್ತಿದ್ದರು. ಒಬ್ಬರಿಗೆ 25 ರಿಂದ 50 ಸಾವಿರ ರೂ.ವರೆಗೆ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಆರೋಪಿ ದಂಪತಿಯನ್ನು ಬಂಧಿಸಲಾಗಿದೆ.

ಪ್ರೇಯಸಿ ಕೈಕೊಟ್ಟ ಸಿಟ್ಟಿಗೆ ಆಕೆಯ ಖಾಸಗಿ ಫೋಟೋ ಪಬ್ಲಿಕ್‌ ಮಾಡಿದ ವಿಕೃತಪ್ರೇಮಿ

ಬೆಂಗಳೂರು: ಪ್ರೀತಿಸಿ ಕೈಕೊಟ್ಟ ಯುವತಿಯ ತೇಜೋವಧೆ ಮಾಡಲು ಉದ್ದೇಶಿಸಿದ ವಿಕೃತಪ್ರೇಮಿಯೊಬ್ಬ, ಆಕೆಯ ಜೊತೆಗೆ ತಾನು ಇದ್ದ ಖಾಸಗಿ ಫೊಟೋಗಳನ್ನು ಪಬ್ಲಿಕ್‌ ಮಾಡಿದ ಘಟನೆ ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಂಜುನಾಥ ನಗರದಲ್ಲಿ ಘಟನೆ ನಡೆದಿದೆ. ಯುವತಿ ಜೊತೆಗಿದ್ದ ಖಾಸಗಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ದರ್ಶನ್ ಎಂಬಾತ ವಿಕೃತಿ ಮೆರೆದಿದ್ದ. ಸದ್ಯ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್​ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

ಬಾಗಲಗುಂಟೆಯ ಫರ್ನಿಚರ್ ಅಂಗಡಿಯಲ್ಲಿ ಯುವತಿ ಸೇಲ್ಸ್ ಕೆಲಸ ಮಾಡುತ್ತಿದ್ದಳು. ನನ್ನ ಪ್ರೀತಿ ಮಾಡಿಲ್ಲ ಅಂದರೆ ನಿನ್ನ ಜೀವನ ಹಾಳು ಮಾಡುತ್ತೇನೆಂದು ಆರೋಪಿ ದರ್ಶನ್​ ಬೆದರಿಕೆ ಕೂಡ ಹಾಕಿದ್ದ. ವಾಟ್ಸಾಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಖಾಸಗಿ ಫೋಟೋ ಹಾಕಿ ಮಾನಹಾನಿ ಮತ್ತು ತೇಜೋವಧೆಗೆ ಮುಂದಾಗಿದ್ದ.

ಇದನ್ನೂ ಓದಿ: Crime News: ತಿರುಪತಿ ಪ್ರವಾಸ ಮಿಸ್ಟರಿ! 3 ಸ್ನೇಹಿತರಲ್ಲಿ ಒಬ್ಬ ನಾಪತ್ತೆ, ಒಬ್ಬ ಆತ್ಮಹತ್ಯೆ, ಏನಿದು ನಿಗೂಢ?