Tuesday, 10th December 2024

Crime News: ಪ್ರೇಯಸಿ ಕೈಕೊಟ್ಟ ಸಿಟ್ಟಿಗೆ ಆಕೆಯ ಖಾಸಗಿ ಫೋಟೋ ಪಬ್ಲಿಕ್‌ ಮಾಡಿದ ವಿಕೃತಪ್ರೇಮಿ

crime news

ಬೆಂಗಳೂರು: ಪ್ರೀತಿಸಿ ಕೈಕೊಟ್ಟ ಯುವತಿಯ ತೇಜೋವಧೆ ಮಾಡಲು ಉದ್ದೇಶಿಸಿದ ವಿಕೃತಪ್ರೇಮಿಯೊಬ್ಬ, ಆಕೆಯ ಜೊತೆಗೆ ತಾನು ಇದ್ದ ಖಾಸಗಿ ಫೊಟೋಗಳನ್ನು ಪಬ್ಲಿಕ್‌ ಮಾಡಿದ ಘಟನೆ (Bangalore Crime news) ವರದಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮಂಜುನಾಥ ನಗರದಲ್ಲಿ ಘಟನೆ ನಡೆದಿದೆ. ಯುವತಿ ಜೊತೆಗಿದ್ದ ಖಾಸಗಿ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ದರ್ಶನ್ ಎಂಬಾತ ವಿಕೃತಿ ಮೆರೆದಿದ್ದ. ಸದ್ಯ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದರ್ಶನ್​ಗಾಗಿ ಪೊಲೀಸರ ಶೋಧ ನಡೆಸಿದ್ದಾರೆ.

ಬಾಗಲಗುಂಟೆಯ ಫರ್ನಿಚರ್ ಅಂಗಡಿಯಲ್ಲಿ ಯುವತಿ ಸೇಲ್ಸ್ ಕೆಲಸ ಮಾಡುತ್ತಿದ್ದಳು. ನನ್ನ ಪ್ರೀತಿ ಮಾಡಿಲ್ಲ ಅಂದರೆ ನಿನ್ನ ಜೀವನ ಹಾಳು ಮಾಡುತ್ತೇನೆಂದು ಆರೋಪಿ ದರ್ಶನ್​ ಬೆದರಿಕೆ ಕೂಡ ಹಾಕಿದ್ದ. ವಾಟ್ಸಾಪ್ ಸ್ಟೇಟಸ್ ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿನಲ್ಲಿ ಖಾಸಗಿ ಫೋಟೋ ಹಾಕಿ ಮಾನಹಾನಿ ಮತ್ತು ತೇಜೋವಧೆಗೆ ಮುಂದಾಗಿದ್ದ.

ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಈ ಬಗ್ಗೆ ದೂರು ದಾಖಲಾಗಿದೆ. ನಕಲಿ ಖಾತೆ ಕುರಿತಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಫೋಟೋ, ಹೆಸರು, ಹುದ್ದೆ, ಸಂಸ್ಥೆಯ ಹೆಸರು ದುರ್ಬಳಕೆ ಮಾಡಿಕೊಂಡು ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದೆ. ಈ ಬಗ್ಗೆ ಗಮನಕ್ಕೆ ಬಂದ ಕೂಡಲೇ ಖಾತೆಯನ್ನು ಡಿಲೀಟ್ ಮಾಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: Assault Case: ಬೆಂಗಳೂರಿನ ನಡು ರಸ್ತೆಯಲ್ಲೇ ವ್ಯಕ್ತಿಯ ಬಟ್ಟೆ ಬಿಚ್ಚಿಸಿ ಹಲ್ಲೆ; ವಿಡಿಯೊ ವೈರಲ್‌