Tuesday, 10th September 2024

ಪಾರ್ಶ್ವವಾಯುವಿನ ಕುರಿತು ಜಾಗೃತಿ ಮೂಡಿಸಲು ಫೋರ್ಟಿಸ್ ಆಸ್ಪತ್ರೆ ವತಿಯಿಂದ ಸೈಕ್ಲೋಥಾನ್‌

ಬೆಂಗಳೂರು: ಪಾರ್ಶ್ವಪಾಯುವಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಇಂದು “ಸ್ಟ್ರೋಕ್‌ ಜಾಗೃತಿ ಸೈಕ್ಲೋಥಾನ್‌”ನನ್ನು ಆಯೋಜಿಸಿತ್ತು. ಬೆಳಗ್ಗೆ 6 ಗಂಟೆಗೆ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್‌ ಆಸ್ಪತ್ರೆಯಿಂದ ಸೈಕ್ಲೋಥಾನ್‌ ಪ್ರಾರಂಭ ಗೊಂಡು ನಗರದ ನಾಲ್ಕು ಭಾಗಗಳಲ್ಲಿ ಟಚ್‌ ಪಾಯಿಂಟ್‌ನೊಂದಿಗೆ ಒಟ್ಟು 13 ಕಿಮೀ ಸೈಕಲ್‌ ಮೂಲಕ ರ್ಯಾಲಿ ನಡೆಸಲಾಯಿತು.

ಇದೇ ವೇಳೆ, ಪಾರ್ಶ್ವವಾಯುವಿನಿಂದ ಹಠಾತ್‌ ಆರೋಗ್ಯ ಸಮಸ್ಯೆ ಎದುರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಫೋರ್ಟಿಸ್‌ ಆಸ್ಪತ್ರೆ”ಕೋಡ್‌ ಫಾಸ್ಟ್‌” ನನ್ನು ಪರಿಚಯಿಸಲಾಯಿತು. ಈ ಕೋಡ್‌ ಫಾಸ್ಟ್‌ ಮೂಲಕ, ಪಾರ್ಶ್ವವಾಯುವಿನಿಂದ ಗಂಭೀರವಾಗಿ ಸಮಸ್ಯೆಗೆ ಒಳಗಾಗುವವರಿಗೆ ಶೀಘ್ರವೇ ಚಿಕಿತ್ಸೆ ಕೊಡುವುದು ಇದರ ಉದ್ದೇಶವಾಗಿದೆ. ಕೆಲವರಿಗೆ ಪಾರ್ಶ್ವವಾಯು ಹೊಡೆದ ಕೂಡಲೇ ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು, ಕೈ, ಕಾಲು ಇತ್ಯಾದಿ ಅಂಗಗಳ ಸ್ವಾಧೀನ ಕಳೆದುಕೊಂಡು ಬಿಡುತ್ತಾರೆ, ಅವರಿಗೆ ಶೀಘ್ರವೇ ಚಿಕಿತ್ಸೆ ನೀಡುವುದು ಅನಿವಾರ್ಯವಾದ್ದರಿಂದ ಈ ಕೋಡ್‌ಫಾಸ್ಟ್‌ ಮೂಲಕ ಈ ಚಿಕಿತ್ಸೆ ಕೊಡುವುದು ಮೂಲ ಉದ್ದೇಶವಾಗಿದೆ.

ಸೈಕ್ಲೋಥಾನ್‌ನನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಹೃದಯ ಶಸ್ತ್ರಚಿಕಿತ್ಸಕ ವಿವೇಕ್ ಜವಳಿ, ಹೃದಯಾಘಾತವಾದ ಕೂಡಲೇ ಗೋಲ್ಡನ್‌ ಹವರ್‌ ನಲ್ಲಿ ಹೇಗೆ ಚಿಕಿತ್ಸೆ ನೀಡುವುದು ಅನಿವಾರ್ಯವೋ ಹಾಗೆಯೇ, ಸ್ಟ್ರೋಕ್‌ ಹೊಡೆದವರಿಗೂ ಕೂಡ ಗೋಲ್ಡನ್‌ ಹವರ್‌ ಇರಲಿದ್ದು, ಆ ಅವಧಿಯೊಳಗೆ ಚಿಕಿತ್ಸೆ ನೀಡುವುದು ಅವಶ್ಯಕ. ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಸ್ಟ್ರೋಕ್‌ ಆದವರಿಗೆ ಕೂಡಲೇ ಚಿಕಿತ್ಸೆ ನೀಡಲು ಕೋಡ್‌ಫಾಸ್ಟ್‌ನನ್ನು ಪರಿಚಯಿಸಿದ್ದು, ಇದರಲ್ಲಿ ಕ್ಯಾಥ್‌ಲ್ಯಾಬ್‌, ಸಿಟಿ ಮತ್ತು ನ್ಯೂರೋಇಂಟರ್‌ವೆನ್ಷನಲಿಸ್ಟ್‌ನನ್ನು ಒಳಗೊಂಡಿರುವ ಸ್ಮಾರ್ಟ್ ಸ್ಟ್ರೋಕ್ ಘಟಕವನ್ನು ಸಹ ಹೊಂದಿರಲಿದೆ. ಇಲ್ಲಿ ದಾಖಲಾದವರಿಗೆ ಶೀಘ್ರವೇ ಚಿಕಿತ್ಸೆ ದೊರೆಯಲಿದೆ. ಇತ್ತೀಚಿನ ದಿನಗಳಲ್ಲಿ ಪಾರ್ಶ್ವವಾಯು ಸಾಮಾನ್ಯವಾಗಿದ್ದು, ಜನರಲ್ಲಿ ಅರಿವು ಮೂಡಿಸಲು ಈ ಸೈಕ್ಲೋಥಾನ್‌ನನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಫೋರ್ಟಿಸ್ ಆಸ್ಪತ್ರೆ ನರವಿಜ್ಞಾನ ನಿರ್ದೇಶಕ ಡಾ ಗುರುಪ್ರಸಾದ್ ಹೊಸೂರಕರ್, ಭಾರತದಲ್ಲಿ ವಾರ್ಷಿಕವಾಗಿ ಪ್ರತಿ 40 ಸೆಕೆಂಡ್‌ಗೆ ಒಬ್ಬರಿಗೆ ಪಾರ್ಶ್ವ ವಾಯು ಹೊಡೆಯುತ್ತಿದ್ದು, ಸುಮಾರು 1,85,000 ಪಾರ್ಶ್ವವಾಯು ಪ್ರಕರಣಗಳು ವರದಿಯಾಗುತ್ತವೆ. ಹೀಗಾಗಿ ಪ್ರತಿಯೊಬ್ಬರಿಗೂ ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಇರಬೇಕು, ಈ ರೋಗವು ಅಧಿಕ ರಕ್ತದೊತ್ತಡ, ಬೊಜ್ಜು, OSA, ಇದರಿಂದ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ಧೂಮಪಾನ ಮತ್ತು ಮದ್ಯ ಪಾನವನ್ನು ತ್ಯಜಿಸುವುದು, ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ವಿಶ್ರಾಂತಿ ವ್ಯಾಯಾಮಗಳು, ಒತ್ತಡ ನಿರ್ವಹಣೆ ಸೇರಿದಂತೆ ಜೀವನ ಶೈಲಿಯ ಬದಲಾವಣೆ ಅವಶ್ಯಕ ಎಂದರು.

ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ, “ಸೈಕ್ಲೋಥಾನ್‌ನ ಯಶಸ್ಸಿನ ಬಗ್ಗೆ ಪ್ರತಿಬಿಂಬಿಸುತ್ತಾ, ಗಂಭೀರವಾದ ಆರೋಗ್ಯ ಪರಿಸ್ಥಿತಿಗಳ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಸಮುದಾಯವು ಒಂದಾಗುವುದು ಅವಶ್ಯಕ. ಫೋರ್ಟಿಸ್ ಆಸ್ಪತ್ರೆ ಬನ್ನೇರುಘಟ್ಟದಲ್ಲಿ, ನಮ್ಮ ರಾಷ್ಟ್ರದಲ್ಲಿ ತಡೆಗಟ್ಟಬಹುದಾದ ಇನ್ನೂ ಮಹತ್ವದ ಆರೋಗ್ಯ ಸವಾಲಾಗಿರುವ ಪಾರ್ಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ನಾವು ಸಮರ್ಪಿತ ರಾಗಿದ್ದೇವೆ.

ಸೈಕ್ಲೋಥಾನ್‌ನಂತಹ ಉಪಕ್ರಮಗಳು ಮತ್ತು ‘ಕೋಡ್ ಫಾಸ್ಟ್’ ಪರಿಚಯದ ಮೂಲಕ, ತಡೆಗಟ್ಟುವ ಕ್ರಮಗಳು, ಸ್ಟ್ರೋಕ್‌ಗಳ ಸೂಚಕಗಳು ಮತ್ತು ತ್ವರಿತ ಕ್ರಮಕ್ಕಾಗಿ ಜ್ಞಾನವನ್ನು ಹೊಂದಿರುವ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವುದು ನಮ್ಮ ಗುರಿಯಾಗಿದೆ. ಈ ಅರ್ಥಪೂರ್ಣ ಆರೋಗ್ಯ ರಕ್ಷಣೆಯ ಪ್ರಯತ್ನಗಳನ್ನು ಮುನ್ನಡೆಸುವಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಿಕೆ ಮತ್ತು ಸಹಯೋಗದ ಬೆಂಬಲಕ್ಕಾಗಿ ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸು ತ್ತೇವೆ ಎಂದರು.

Leave a Reply

Your email address will not be published. Required fields are marked *