Friday, 13th December 2024

Designer Velvet Gown Fashion: ಸೆಲೆಬ್ರಿಟಿ ಲುಕ್‌‌‌ಗೆ ಸಾಥ್‌ ನೀಡುವ ವೆಲ್ವೆಟ್‌ ಡಿಸೈನರ್‌ ಗೌನ್‌

Designer Velvet Gown Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗ್ರ್ಯಾಂಡ್‌ ಡಿಸೈನರ್‌ ಸೆಲೆಬ್ರಿಟಿ ವೆಲ್ವೆಟ್‌ ಗೌನ್‌ಗಳು (Designer Velvet Gown Fashion) ಇದೀಗ ಫ್ಯಾಷನ್‌ (Fashion) ಪ್ರಿಯ ಯುವತಿಯರನ್ನು ಸೆಳೆದಿವೆ. ಸೆಲೆಬ್ರಿಟಿ ಲುಕ್‌ ನೀಡುತ್ತಿವೆ. ಮಹಿಳೆಯರಿಗೆ ಮಾತ್ರವಲ್ಲ, ಈ ಜನರೇಷನ್‌ನ ಹುಡುಗಿಯರಿಗೂ ಇಷ್ಟವಾಗುವಂತಹ ವೈವಿಧ್ಯಮಯ ವಿನ್ಯಾಸದಲ್ಲಿ ಆಗಮಿಸಿವೆ. ಇದೀಗ ವೆಲ್ವೆಟ್‌ ಗೌನ್‌ಗಳಲ್ಲಿ ನಾನಾ ಬಗೆಯವು ಬಂದಿವೆ. ಅವುಗಳಲ್ಲಿ ವೆಲ್ವೆಟ್‌ ಫ್ಯಾಬ್ರಿಕ್‌ ಮೇಲೆ ಡಿಸೈನ್‌ ಮಾಡಿದ ಗ್ರ್ಯಾಂಡ್‌ ಗೌನ್‌ ಹೆಚ್ಚು ಮಾರಾಟವಾಗುತ್ತಿವೆ. ಹ್ಯಾಂಡ್‌ಮೇಡ್‌ (Handmade) ಗೋಲ್ಡನ್‌ ಹಾಗೂ ಸಿಲ್ವರ್‌ ಥ್ರೆಡ್‌ನ ಎಂಬ್ರಾಯ್ಡರಿ ವರ್ಕ್‌ (Embroidery work) ಇರುವಂತಹ ವೆಲ್ವೆಟ್‌ ಗೌನ್‌ಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

ಚಿತ್ರಕೃಪೆ: ಪಿಕ್ಸೆಲ್‌

ಇನ್ನು, ಭಾರಿ ಡಿಸೈನ್‌ನ ವೆಲ್ವೆಟ್‌ ಗೌನ್‌ಗಳಲ್ಲಿ ಬ್ರೈಡಲ್‌ ಕೆಟಗರಿಯವು ಅತಿ ಹೆಚ್ಚು ಟ್ರೆಂಡಿಯಾಗಿವೆ ಹಾಗೂ ಟಾಪ್‌ ಲಿಸ್ಟ್‌ನಲ್ಲಿವೆ ಎನ್ನುತ್ತಾರೆ ಡಿಸೈನರ್‌ ಜಿಗರ್‌. ಅವರ ಪ್ರಕಾರ, ಬಹುತೇಕ ವೆಲ್ವೆಟ್‌ ಗೌನ್‌ಗಳು ಡಿಸೈನರ್‌ವೇರ್‌ಗಳಾಗಿರುತ್ತವೆ ಹಾಗೂ ಗ್ರ್ಯಾಂಡ್‌ ವಿನ್ಯಾಸ ಹೊಂದಿರುತ್ತವೆ.

ಈ ಸುದ್ದಿಯನ್ನೂ ಓದಿ | Kannada New Movie: ನಟ ಲಿಖಿತ್ ಶೆಟ್ಟಿ ಅಭಿನಯದ ‘ಫುಲ್ ಮೀಲ್ಸ್ʼ ಚಿತ್ರದ ಪೋಸ್ಟರ್‌ ರಿಲೀಸ್‌

ಚಾಲ್ತಿಯಲ್ಲಿರುವ ವೆಲ್ವೆಟ್‌ ಡಿಸೈನರ್‌ ಗೌನ್‌ಗಳು

ಅಸ್ಸೆಮ್ಮಿಟ್ರಿಕಲ್‌ ವೆಲ್ವೆಟ್‌ ಗೌನ್‌, ಹ್ಯಾಂಡ್‌ಮೇಡ್‌ ಗೋಲ್ಡನ್‌ ವರ್ಕ್‌, ಸಿಲ್ವರ್‌ ವರ್ಕ್‌, ಮಿರರ್‌ ವರ್ಕ್‌, ಅನಾರ್ಕಲಿ ಸ್ಟೈಲ್‌, ಬಾಡಿಕಾನ್‌, ಫ್ಲೋರ್‌ ಲೆಂಥ್‌ಸ್ಟೈಲ್‌, ಟೂ ಪೀಸ್‌, ಸಿಕ್ವೀನ್ಸ್, ಪಾರ್ಟಿವೇರ್‌, ಸೈಡ್‌ & ಫ್ರಂಟ್‌ ಒಪನ್‌, ಎಂಬ್ರಾಯ್ಡರಿ ಸೇರಿದಂತೆ ನಾನಾ ಬಗೆಯವು ಈ ಫೆಸ್ಟಿವ್‌ ಹಾಗೂ ವೆಡ್ಡಿಂಗ್‌ ಕಲೆಕ್ಷನ್‌ನಲ್ಲಿ ಎಂಟ್ರಿ ನೀಡಿವೆ.

ಇಂಡೋ-ವೆಸ್ಟರ್ನ್‌ ವೆಲ್ವೆಟ್‌ ಗೌನ್‌

ಪಾರ್ಟಿವೇರ್‌ ವೆಲ್ವೆಟ್‌ ಗೌನ್‌ ಕೆಟಗರಿಯಲ್ಲಿ ಇಂಡೋ-ವೆಸ್ಟರ್ನ್ ಡಿಸೈನರ್‌ ವೆಲ್ವೆಟ್‌ ಗೌನ್ ಕೆಟಗರಿಯಲ್ಲಿ, ಇದೀಗ ಇಂಡೋ-ವೆಸ್ಟರ್ನ್‌ ಲುಕ್‌ ನೀಡುವಂತಹ ಸ್ಲೀಕ್‌ ಲುಕ್‌ ನೀಡುವ ಸೈಡ್‌ ಸ್ಲಿಟ್‌ , ಸೆಂಟರ್‌ ಸ್ಲಿಟ್‌ನ ಗ್ಲಾಮರಸ್‌ ಲುಕ್‌ ನೀಡುವಂತಹ ಸಾಫ್ಟ್‌ ವೆಲ್ವೆಟ್‌ ಗೌನ್‌ಗಳು ಯುವತಿಯರನ್ನು ಆಕರ್ಷಿಸುತ್ತಿವೆ.

ಈ ಸುದ್ದಿಯನ್ನೂ ಓದಿ | Vastu Tips: ಪರ್ಫ್ಯೂಮ್‌ ಗಿಫ್ಟ್‌ ಕೊಡಬಾರದು; ಅದಕ್ಕೂ ಒಂದು ಕಾರಣವಿದೆ ಗೊತ್ತಾ?

ಗ್ರ್ಯಾಂಡ್‌ ವೆಲ್ವೆಟ್‌ ಗೌನ್‌ ಆಯ್ಕೆಗೆ 3 ಟಿಪ್ಸ್

ತುಂಬಾ ಭಾರವಿರುವ ವೆಲ್ವೆಟ್‌ ಲೆಹೆಂಗಾ ಆಯ್ಕೆ ಬೇಡ. ಲೈಟ್‌ವೈಟ್‌ಗೆ ಆದ್ಯತೆ ನೀಡಿ.
ಡಿಸೈನರ್‌ ಗ್ರ್ಯಾಂಡ್‌ ಲೆಹೆಂಗಾಗಳು ವಿನ್ಯಾಸದ ಆಧಾರದ ಮೇಲೆ ಬೆಲೆ ಹೊಂದಿರುತ್ತವೆ.
ಬ್ರೈಡಲ್‌ ಹಾಗೂ ಪಾರ್ಟಿವೇರ್‌ ಕೆಟಗರಿಯಲ್ಲಿ ಅತ್ಯುತ್ತಮ ಡಿಸೈನ್‌ನವು ದೊರೆಯುತ್ತವೆ.

(ಲೇಖಕಿ, ಫ್ಯಾಷನ್‌ ಪತ್ರಕರ್ತೆ)