ಬೆಂಗಳೂರು: ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಗೆ ಹೃದಯ ವೈಫಲ್ಯ, ಶ್ವಾಸಕೋಶದ ಸೋಂಕು ಇರುವುದು ತಿಳಿದುಬಂದ ಕಾರಣ ಕೂಡಲೇ ಅವರಿಗೆ ಫೋರ್ಟಿಸ್ ಆಸ್ಪತ್ರೆಯ ವೈದ್ಯರ ತಂಡ ಸೂಕ್ತ ಚಿಕಿತ್ಸೆ ನೀಡಿದೆ.
ಕನ್ನಿಂಗ್‌ಹ್ಯಾಮ್ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸನ್ ಸಲಹೆಗಾರ ಡಾ. ನಾಸಿರುದ್ದೀನ್ ಜಿ. ಅವರ ತಂಡ ಶಿವರಾಜ್ ಎಂಬ ವ್ಯಕ್ತಿಗೆ ಅವರಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಡಾ. ನಾಸಿರುದ್ದೀನ್ ಜಿ., ಶಿವರಾಜ್ ಅವರು ಸಾಮಾನ್ಯ ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹತ್ತಿರದ ಕ್ಲಿನಿಕ್‌ಗೆ ತೆರಳಿ ಚಿಕಿತ್ಸೆ ಪಡೆಯಲು ಮುಂದಾದರು. ಆದರೆ ಅವರಿಗೆ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರು ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು.
ಶಿವರಾಜ್ ಅವರನ್ನು ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಹೃದಯ ವೈಫಲ್ಯ ಹಾಗೂ ಶ್ವಾಸಕೋಶದ ಸೋಂಕು ಇರುವುದು ತಿಳಿದು ಬಂತು. ಇದರಿಂದಲೇ ಅವರಿಗೆ ಉಸಿರಾಟ ಮಾಡಲು ಕಷ್ಟವಾಗುತ್ತಿರುವ ಕಾರಣ ಕೂಡಲೇ ಅವರನ್ನು ಐಸಿಯುಗೆ ದಾಖಲಿಸಲಾಯಿತು.
ಪರಿಣಿತ ವೈದ್ಯರ ತಂಡದೊಂದಿಗೆ ಹದಗೆಡುತ್ತಿರುವ ಹೃದಯ ವೈಫಲ್ಯ ಹಾಗೂ ನ್ಯುಮೋನಿಯಾವನ್ನು ನಿರ್ವಹಿಸಿದರು. ರೋಗಿಯೂ ಈ ಮೊದಲು ಯಾವುದೇ ಲಂಗ್ಸ್ ಸಂಬಂಧಿತ ಕಾಯಿಲೆಗೆ ಒಳಗಾಗದ ಕಾರಣ ಅವರಿಗೆ ನೀಡಿದ ಚಿಕಿತ್ಸೆ ವೇಗವಾಗಿ ಫಲನೀಡಿತು. ಸ್ಟೆರಾಯ್ಡ್ ಆಧಾರಿತ ಚಿಕಿತ್ಸೆಯಿಂದ ಅವರು ವೇಗವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವಿವರಿಸಿದರು.