ಬೆಂಗಳೂರು: ಶಿಕ್ಷಣ ಇಲಾಖೆ ದಿವಾಳಿಯಾಗಿದೆ. ಅಪ್ರಯೋಜಕ ಶಿಕ್ಷಣ ಸಚಿವರಿಂದ ಶಿಕ್ಷಣ ಕ್ಷೇತ್ರ ಅಧ್ವಾನ ಸ್ಥಿತಿಯಲ್ಲಿದೆ ಎಂದು ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ದೇಶಕ್ಕೆ ಮಾದರಿಯಾಗಬೇಕಿದ್ದ ರಾಜ್ಯದ ಶಿಕ್ಷಣ ಇಲಾಖೆಯನ್ನ ವಿವಾದಿತ ಕೇಂದ್ರ ವನ್ನಾಗಿಸಿದ ಕೀರ್ತಿ ಶಿಕ್ಷಣ ಸಚಿವ ಬಿಸಿ ನಾಗೇಶ್ ಗೆ ಸಲ್ಲಬೇಕು. ಪಠ್ಯ ಪುಸ್ತಕ ಪರಿಷ್ಕರ ಣೆಯ ಹೆಸರಿನಲ್ಲಿ ನಾಡಿನ ಸಾಂಸ್ಕೃತಿಕ ನಾಯಕರಿಗೆ ಅಪಮಾನ ಮಾಡಿ ದೇಶದ ಎದುರು ಮಾನ ಕಳೆಯುವಂತೆ ಮಾಡಿದ್ದು ಸಾಲದಾಗಿಲ್ಲ. ಇಲ್ಲಿಯವರೆಗೂ ಪರಿಷ್ಕರಣೆಯ ಬಗ್ಗೆ ಬಂದಿರುವ ಆಕ್ಷೇಪಗಳಿಗೆ ಉತ್ತರ ನೀಡುವ ಎದೆಗಾರಿಕೆಯೂ ಇಲ್ಲ. ದಿನಕ್ಕೊಂದು ಅವಾಂತರಗಳು, ಹಗರಣಗಳು ಧಾರಾವಾಹಿಯಂತೆ ಇಲಾಖೆಯಲ್ಲಿ ಕಂತುಗಳಲ್ಲಿ ಬರುತ್ತಿವೆ. ಈಗ ಇಡೀ ಇಲಾಖೆ ಭಿಕ್ಷೆ ಬೇಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಇಂತಹ ಅಪ್ರಯೋಜಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಂದ ಇಡೀ ಶಿಕ್ಷಣ ಇಲಾಖೆ ಅಧ್ವಾನದ ಕೂಪವಾಗಿದೆ.
ಶಾಲೆಗಳು ಪ್ರಾರಂಭವಾಗುವ ಮುನ್ನ ಪೂರ್ವಯೋಜಿತ ತಯಾರಿಗಳೊಂದಿಗೆ ಪ್ರಾರಂಭಿ ಸಲಾಗುತ್ತೆ. ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು, ಶಿಥಿಲಗೊಂಡಿರುವ ಕೊಠಡಿಗಳ ದುರಸ್ಥಿಗೆ ಹಣ ಬಿಡುಗಡೆ, ಶಾಲಾ ಮಕ್ಕಳಿಗೆ ಶೂಗಳನ್ನ ನೀಡುವುದು ಸೇರಿದಂತೆ ಮೂಲ ಸೌಕರ್ಯಗಳ ತಯಾರಿಗಳೊಂದಿಗೆ ಪ್ರಾರಂಭ ಮಾಡಲಾಗುತ್ತೆ. ಆದ್ರೆ ಶಿಕ್ಷಣ ಇಲಾಖೆ ಹಾಗೂ ಸಚಿವರು ಕೇವಲ ಪಠ್ಯ ಪರಿಷ್ಕರಣೆ ನೆಪದಲ್ಲಿಯೇ ಕಾಲ ಕಳೆಯುತ್ತಿವೆ.
ಶಾಲೆಗಳು ಪ್ರಾರಂಭವಾಗಿ ಒಂದುವರೆ ತಿಂಗಳುಗಳು ಕಳೆಯುತ್ತಿವೆ. ಇಲ್ಲಿವರೆಗೂ ಪಠ್ಯ ಪುಸ್ತಕಗಳನ್ನ ಶಾಲೆಗಳಿಗೆ ತಲುಪಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಇನ್ನೊಂದೆಡೆ ಪಠ್ಯ ಪರಿಷ್ಕರಣೆ ನೆಪದಲ್ಲಿ ಆಗಿರುವ ಪ್ರಮಾದಗಳಿಗೆ ತೇಪೆ ಹಚ್ಚಿ, ಮರು ಮುದ್ರಣ ಮಾಡಿಸುತ್ತೇವೆಂದು ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಈಗಾಗಲೇ ಕೆಲವು ಶಾಲೆಗಳಿಗೆ ತಲುಪಿರುವ ಪಠ್ಯ ಪುಸ್ತಕಗಳ ಕತೆ ಗಳೇನು? ಹೊಸದಾಗಿ ಮುದ್ರಣವಾಗುವ ಪುಸ್ತಕಗಳನ್ನ ಸರಬರಾಜು ಯಾವಾಗ ಮಾಡಲಾಗುತ್ತೆ? ಮುದ್ರಣ-ಮರು ಮುದ್ರಣದ ಹೆಸರಿನಲ್ಲಿ ನೂರಾರು ಕೋಟಿ ಖರ್ಚು ಮಾಡಿ ಜನರ ತೆರಿಗೆ ಹಣವನ್ನ ದುರಪಯೋಗ ಮಾಡುತ್ತಿರುವುದು ಯಾಕೆ? ಒಬ್ಬ ಟ್ರೋಲರ್ ಅಂತಹ ಅವಿವೇಕಿ ಮಾಡಿದ ತಪ್ಪಿಗೆ ಜನರ ಹಣ ಪೋಲು ಮಾಡುತ್ತಿದೆ ಈ ಸರ್ಕಾರ.
ರಾಜ್ಯದಲ್ಲಿ 75,675 ಶಾಲೆಗಳ ಕೊಠಡಿಗಳನ್ನ ದುರಸ್ಥಿ ಮಾಡಬೇಕಾಗಿದ್ದು, 2,682 ಕೋಟಿ ಹಣ ವ್ಯಯ ಮಾಡಬೇಕಿದೆ ಎಂದು ಶಿಕ್ಷಣ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾಪನೆ ಸಲ್ಲಿಸಿದೆ. ಸಾವಿರಾರು ಶಾಲೆಗಳು ಶಿಥಿಲಗೊಂಡಿರುವ ಮಾಹಿತಿ ಮೊದಲೇ ಇದ್ದರು ಶಿಕ್ಷಣ ಇಲಾಖೆ ಶಾಲೆಗಳು ಪ್ರಾರಂಭವಾಗುವ ಮುನ್ನವೇ ಎಚ್ಚೆತ್ತುಕೊಂಡು ಕ್ರಿಯಾ ಯೋಜನೆ ಯಾಕೆ ರೂಪಿಸಲಿಲ್ಲ? 40% ಕಮಿಷನ್ ವ್ಯವಹಾರದ ಮಾತುಕತೆ ಇನ್ನೂ ಮುಗಿದಿರಲಿಲ್ವಾ? ಶಿಕ್ಷಣ ಸಚಿವರು ಟ್ರೋಲರ್ ನ ಸಮರ್ಥನೆಯಲ್ಲೇ ಕಾಲ ದೂಡಿದ್ರಾ? ಇಂತಹ ಬೇಜವಾಬ್ದಾರಿ ಶಿಕ್ಷಣ ಸಚಿವರಿಂದ ಹಾಗೂ ಕೆಲವು ಅಧಿಕಾರಿ ಗಳಿಂದ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಬಿಗಿ ಹಿಡಿದು ಅಭ್ಯಾಸ ಮಾಡುವಂತಾಗಿದೆ.
ಮಳೆಗಾಲ ಪ್ರಾರಂಭವಾಗಿರುವುದರಿಂದ ದುರಸ್ಥಿ ಇರುವ ಶಾಲೆಗಳ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಶಾಲೆಗಳ ಕೊಠಡಿ ಗಳು ಯಾವಾಗ ತಲೆಯ ಮೇಲೆ ಹೊತ್ತು ಬೀಳುತ್ತವೆ ಎಂದು ಶಾಲೆಯ ಮಕ್ಕಳು ಭಯಭೀತರಾಗಿದ್ದಾರೆ. ಇಂತಹ ದಯನೀಯ ಸ್ಥಿತಿಗೆ ಶಿಕ್ಷಣ ಇಲಾಖೆಯನ್ನ ದೂಡಲಾಗಿದೆ. ಕೂಡಲೇ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ತ್ವರಿತವಾಗಿ ಶಾಲೆಗಳಿಗೆ ಹಣ ಬಿಡು ಗಡೆ ಮಾಡಬೇಕೆಂದು ಒತ್ತಾಯಿಸುತ್ತೇನೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯ ಜಾರಿಗೆ ತಂದಿತ್ತು. ಯೋಜನೆಯಿಂದ 60 ರಿಂದ 70 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಯಾಗಿದ್ದರು. ಖಾಸಗೀ ಶಾಲೆಯ ಮಕ್ಕಳ ಹಾಗೆಯೇ ಸರ್ಕಾರಿ ಶಾಲೆಯಲ್ಲಿ ಕಲಿಯುವ ಲಕ್ಷಾಂತರ ಮಕ್ಕಳು ಕೂಡ ಶೂ ಧರಿಸಿಕೊಂಡೆ ಶಾಲೆಗೆ ಬರುತ್ತಿದ್ದರು. ಆದ್ರೆ ಈ ಸರ್ಕಾರ ಬಡವರ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಕೊಡಿಸದೇ ಇರೋವಷ್ಟು ದಾರಿದ್ರ್ಯ ಬಂದಿದೆ. 2019-20ನೇ ಸಾಲಿನ ಕೊನೆದಾಗಿ ಸರ್ಕಾರ ಈ ಯೋಜನೆಗೆ ಹಣ ಬಿಡುಗಡೆ ಮಾಡಿದ್ದು ಬಿಟ್ಟರೇ, 2020-21, 2021-22 ಮತ್ತು ಈ ವರ್ಷ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಭಾಗ್ಯಕ್ಕೆ ಹಣವೇ ಮೀಸಲಿ ಟ್ಟಿಲ್ಲ. ಕನಿಷ್ಠ ಅದರ ಬಗ್ಗೆ ಇಲ್ಲಿವರೆಗೆ ಚರ್ಚೆಯೂ ನಡೆಸಿಲ್ಲ, ಶಿಕ್ಷಣ ಇಲಾಖೆ ಈ ಮಟ್ಟದ ಆರ್ಥಿಕ ದಿವಾಳಿತನ ಎದುರಿಸು ತ್ತಿದ್ಯಾ? ರಾಷ್ಟ್ರೋತ್ತನ ಶಾಲೆಗಳಿಗೆ ವಿಶೇಷ ಒತ್ತು ನೀಡಿ ಪಠ್ಯ ಪುಸ್ತಕ ಖರೀದಿಗೆ,ಮೂಲ ಸೌಲಭ್ಯಗಳಿಗೆ ನೂರಾರು ಕೋಟಿ ಶೀಘ್ರವಾಗಿ ಬಿಡುಗಡೆ ಮಾಡುವ ಸರ್ಕಾರ ಬಡ ಮಕ್ಕಳ ಮೇಲೆ ಯಾಕೆ ಇಷ್ಟು ತಾತ್ಸರ? ಕೇವಲ ಸಂಘಪರಿವಾರವನ್ನ ಒಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತಿದೆ.
ಬಡ ಮಕ್ಕಳಿಗೆ ಶೂ ಕೊಡಲು ಯೋಗ್ಯತೆ ಇಲ್ಲದ ಮಂತ್ರಿಗಳು ಅಪ್ರಯೋಜಕರು. ದಿನಾಲೂ ಶಿಕ್ಷಣ ಇಲಾಖೆಯನ್ನ ವಿವಾದಿತ ಕೇಂದ್ರವನ್ನಾಗಿ ಮಾಡಿದ್ದಾರೆ. ಶಿಕ್ಷಣ ಇಲಾಖೆಯನ್ನ ನಿಭಾಯಿಸಲು ಶಕ್ತರಲ್ಲದ ಶಿಕ್ಷಣ ಸಚಿವ ಬಿಸಿ ನಾಗೇಶ್ ರಾಜೀನಾಮೆ ನೀಡಿಬೇಕೆಂದು ಒತ್ತಾಯಿಸುತ್ತೇನೆ.