Tuesday, 16th April 2024

ಝೀಬ್ರಾ ಕ್ರಾಸ್​’ನಲ್ಲೇ ರಸ್ತೆ ದಾಟಬೇಕು..ಇಲ್ಲದಿದ್ದರೆ ಫೈನ್‌ ಗ್ಯಾರಂಟಿ…!

ಬೆಂಗಳೂರು: ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವ, ಸಿಗ್ನಲ್​ ಜಂಪ್​ ಮಾಡುವ ವಾಹನ ಸವಾರರಿಗೆ ಮಾತ್ರ ಟ್ರಾಫಿಕ್​ ಪೊಲೀಸರು ದಂಡ ವಸೂಲಿ ಮಾಡ್ತಿದ್ರು. ಇನ್ಮುಂದೆ ರಸ್ತೆ ದಾಟೋ ಪಾದಚಾರಿಗಳಿಗೂ ಫೈನ್​ ಬೀಳುತ್ತೆ..

ಝೀಬ್ರಾ ಕ್ರಾಸ್​, ಪಾದಚಾರಿಗಳು ರಸ್ತೆ ದಾಟಲೆಂದೇ ಇರುವ ವ್ಯವಸ್ಥೆ. ಸಾಮಾನ್ಯವಾಗಿ ಚಾರಿ ನಿಯಮಗಳನ್ನ ಉಲ್ಲಂಘಿಸುವ ವಾಹನ ಸವಾರರಿಗೆ ಮಾತ್ರ ಸಂಚಾರಿ ಪೊಲೀಸರು ಫೈನ್ ಹಾಕ್ತಿದ್ದರು. ಇನ್ಮುಂದೆ ಪಾದಚಾರಿ ಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಪ್ಲಾನ್ ಮಾಡಿದ್ದಾರೆ.

ಝೀಬ್ರಾ ಕ್ರಾಸ್ ಬಿಟ್ಟು ಎಲ್ಲೆಂದರಲ್ಲಿ ರಸ್ತೆ ಕ್ರಾಸ್ ಮಾಡುವ ಪಾದಚಾರಿಗಳಿಗೂ ಫೈನ್ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಸಿದ್ಧತೆ ಮಾಡಿಕೊಂಡಿ ದ್ದಾರೆ.

ಕಳೆದ ವರ್ಷ ಝೀಬ್ರಾ ಕ್ರಾಸ್ ಬಿಟ್ಟು ಬೇರೆಡೆ ರಸ್ತೆ ದಾಟುತ್ತಿದ್ದ 69 ಪಾದಚಾರಿಗಳು ಅಪಘಾತಗಳಿಗೆ ಬಲಿ ಯಾಗಿದ್ದಾರೆ. ಹೀಗಾಗಿ ಸಂಚಾರಿ ಪೊಲೀಸರು ಝೀಬ್ರಾ ಕ್ರಾಸ್ ಬಿಟ್ಟು ಎಲ್ಲಂದರಲ್ಲಿ ರಸ್ತೆ ದಾಟುವ ಪಾದಚಾರಿ ಗಳಿಗೆ 10 ರೂಪಾಯಿ ದಂಡ ವಿಧಿಸುವ ಯೋಜನೆಯನ್ನ ಜಾರಿ ಮಾಡಲು ಮುಂದಾಗಿದ್ದಾರೆ. ಆದರೆ, ನಗರದ ಎಷ್ಟೋ ರಸ್ತೆಗಳಲ್ಲಿ ಸರಿಯಾದ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆನೇ ಇಲ್ಲ. ಪಾದಚಾರಿ ಮಾರ್ಗಗಳು ಕೂಡ ಸರಿಯಾಗಿಲ್ಲ.

error: Content is protected !!