Thursday, 3rd October 2024

ಪವರ್ ಸ್ಟಾರ್ ಹೆಸರಿನಲ್ಲಿ `ಫ್ಲವರ್ ಶೋ’: ಮುನಿರತ್ನ

Munirathna

ಬೆಂಗಳೂರು : ಲಾಲ್ ಬಾಗ್ ನಲ್ಲಿ ಈ ಬಾರಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ `ಫ್ಲವರ್ ಶೋ’ ನಡೆಯಲಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು.

ಲಾಲ್ ಬಾಗ್ ನ ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಜನಪ್ರಿಯತೆಗಳಿಸಿದ್ದ ಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಫ್ಲವರ್ ಶೋಗೆ ದಿ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಆಗಸ್ಟ್ 5 ರಿಂದ ಆಗಸ್ಟ್ 15 ರವರೆಗೆ ಫ್ಲವರ್ ಶೋ ಆಯೋಜಿಸಲಾಗುವುದು. ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಫ್ಲವರ್ ಶೋ ಉದ್ಘಾಟಿಸಲಿದ್ದಾರೆ. ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಫ್ಲವರ್ ಶೋ ಆಯೋಜಿಸಲಾಗುತ್ತದೆ.

ಈ ಬಾರಿಯ ಫ್ಲವರ್ ಶೋ ನಲ್ಲಿ ಡಾ. ರಾಜಕುಮಾರ್ ಅವರ ಗಾಜನೂರಿನ ಮನೆಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.