Wednesday, 11th December 2024

ಶೀಘ್ರವೇ ಪೆಟ್ರೋಲ್, ಡೀಸೆಲ್ ಬೆಲೆ 10 ರೂ. ಅಗ್ಗ

ಬೆಂಗಳೂರು: ವಾಹನ ಸವಾರರಿಗೆ ತೈಲ ಕಂಪನಿಗಳು ಸಿಹಿಸುದ್ದಿಯೊಂದನ್ನು ನೀಡಿದ್ದು, ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 10 ರೂ. ವರೆಗೆ ಅಗ್ಗವಾಗಲಿದೆ.

ಸರ್ಕಾರಿ ಇಂಧನ ಚಿಲ್ಲರೆ ವ್ಯಾಪಾರಿಗಳು ಏಪ್ರಿಲ್ 2022 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈಗ ಕಂಪನಿಗಳು ಬೆಲೆ ಪರಿಶೀಲನೆಯನ್ನು ಸೂಚಿಸಿವೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಪ್ರತಿ ಲೀಟರಿಗೆ 10 ರೂ.ಗಳ ಲಾಭಾಂಶ ಹೊಂದಿರ ಬಹುದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಅದನ್ನು ಈಗ ಗ್ರಾಹಕರಿಗೆ ವರ್ಗಾಯಿಸಬಹುದು ಎನ್ನಲಾಗಿದೆ.

2023-24ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮೂರು ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಬಲವಾದ ಲಾಭವನ್ನು ಗಳಿಸಿವೆ ಎಂದು ಮೂಲಗಳು ಸೂಚಿಸಿವೆ. 2022-23ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 4917% ಹೆಚ್ಚಳವಾಗಿದೆ.