Monday, 4th November 2024

ಇಂದಿನಿಂದ ಬೆಂಗಳೂರಿನಲ್ಲಿ G20 ಶೃಂಗಸಭೆ

ಬೆಂಗಳೂರು: 2023ರ G20 ಶೃಂಗಸಭೆಯ ಸಾರಥ್ಯವನ್ನು ಭಾರತ ವಹಿಸಿದ್ದು, ಇಂದಿ ನಿಂದ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮೂರು ದಿನಗಳ‌ ಕಾಲ‌ ಆಯೋಜಿ ಸಲಾದ ಶೃಂಗಸಭೆ ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್‌ ಶೈರ್ ಹೋಟೆಲ್‌ ನಲ್ಲಿ ನಡೆಯಲಿದೆ.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಯೋಜಿ ಸಿರುವ ಈ ಸಭೆಯಲ್ಲಿ ಕೇಂದ್ರೀಯ ಬ್ಯಾಂಕ್​ಗಳ ನಿಯೋಗಿಗಳು, ಹಣಕಾಸು ನಿಯೋಗಿ ಗಳು ಭಾಗಿಯಾಗಲಿದ್ದಾರೆ.

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಹಾಗೂ ಆರ್​ಬಿಐ ಡೆಪ್ಯುಟಿ ಗವರ್ನರ್ ಡಾ.ಮೈಕೆಲ್ ಡಿ. ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿ20 ರಾಷ್ಟ್ರಗಳ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು, ಕೇಂದ್ರೀಯ ಬ್ಯಾಂಕ್​ಗಳ ಡೆಪ್ಯುಟಿ ಗವರ್ನರ್​ಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.