ಬೆಂಗಳೂರು: ಕೆ.ಕೆ. ಗಿರಿಧರ್ ರಾಜು ಅವರಿಗೆ ಸಂಖ್ಯಾ ಜ್ಯೋತಿಷ್ಯ ವೇದಿಕ್ ವಾಸ್ತುಶಾಸ್ತ್ರ( ವೇದಿಕ್ ವಾಸ್ತು, ಜ್ಯೋತಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ)ದ ಕ್ಷೇತ್ರದಲ್ಲಿ ಅವರ ಅಸಾಧಾರಣ ಕೊಡುಗೆ, ಬದ್ಧತೆ ಮತ್ತು ಸಾಧನೆಗಳಿಗೆ ಗೌರವ ಡಾಕ್ಟೊರೇಟ್(ಡಾಕ್ಟೊರೇಟ್ ಆಫ್ ಲೆಟರ್ಸ್) ಅನ್ನು ಮಲೇಷಿಯಾದಲ್ಲಿ ನಡೆದ ಸಮ್ಮೇಳನದಲ್ಲಿ ಕಿಂಗ್ಡಂ ಆಫ ಟೊಂಗಾದ ಕಾಮನ್ ವೆಲ್ತ್ ವೊಕೇಷನಲ್ ಯೂನಿವರ್ಸಿಟಿ ಪ್ರದಾನ ಮಾಡಿದ್ದು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಾರ್ಚ್ 26, 2023ರಂದು ಮಲೇಷಿಯಾದ ಕೌಲಾಂಪುರದಲ್ಲಿ ನಡೆದಿದ್ದು ಈ ಸಂದರ್ಭದಲ್ಲಿ ಮಲೇಷಿಯಾದ ಮಾಜಿ ಶಿಕ್ಷಣ ಸಚಿವ ಡಾ.ಮಸ್ ಝ್ಲೀ ಮಲಿಕ್ ಅವರು ಮುಖ್ಯ ಅತಿಥಿಯಾಗಿದ್ದರು. ಶ್ರೀ ರಾಜು ಮತ್ತು ಅವರ ಬಂಧುಮಿತ್ರರು ಹಾಗೂ ಸಹೋದ್ಯೋಗಿಗಳಿಗೆ ಇದು ಹೆಮ್ಮೆಯ ಕ್ಷಣವಾಗಿತ್ತು.
ವಾಸ್ತು ಎನ್ನುವುದು ಶ್ರೇಷ್ಠ ಸುಯೋಗ ವಾಚಕರೆನಿಸಿಕೊಂಡ ವ್ಯಕ್ತಿಯ ಹಿಂದಿನ ಕಥೆಯಾಗಿದ್ದು ಕೆ.ಕೆ. ಗಿರಿಧರ್ ರಾಜು, ವಾಸ್ತು ತಜ್ಞರು, ಜ್ಯೋತಿಷ್ಯರು ಮತ್ತು ಸಂಖ್ಯಾಶಾಸ್ತ್ರಜ್ಞರು.
ವಾಸ್ತು ಗಿರಿಧರ್ ಕಳೆದ ಮೂರು ದಶಕಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ! ಅವರು ಕೇಂದ್ರ ಸಚಿವರು, ಮುಖ್ಯ ಮಂತ್ರಿಗಳು, ಉದ್ಯಮಿಗಳು, ದೇವಾಲಯದ ಆಡಳಿತ ಮಂಡಳಿಗಳು, ಆಶ್ರಮಗಳು ಅಲ್ಲದೆ ಹೋಟೆಲ್, ಉತ್ಪಾದನೆ, ರೀಟೇಲ್, ಶಾಲೆಗಳು ಇತ್ಯಾದಿ ಅಸಂಖ್ಯ ಉದ್ಯಮಗಳನ್ನು ಒಳಗೊಂಡ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗ್ರಾಹಕರನ್ನು ನಿರ್ವಹಿಸಿದ್ದಾರೆ.
ಆಧ್ಯಾತ್ಮಿಕ ಸಂಕೇತವೆಂದರೆ ನಿರ್ದಿಷ್ಟವಾಗಿ ಏನು ಮತ್ತು ಅದು ಎಲ್ಲ ಸಮಯದಲ್ಲೂ ಹೇಗೆ ಕೆಲಸ ಮಾಡುತ್ತದೆ? ಇದು ವಾಸ್ತವವಾಗಿ ನಿಸರ್ಗದ ನಿಯಮ ಆಧರಿಸದ ನಿಯಮವಾಗಿದೆ ಮತ್ತು ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲದಿರುವುದರಿಂದ ಅವು ವಿಫಲವಾಗುವ ಅಥವಾ ಫಲ ನೀಡದೇ ಇರಲು ಸಾಧ್ಯವೇ ಇಲ್ಲ ಎಂದು ವಾಸ್ತು ಗಿರಿಧರ್ ಹೇಳುತ್ತಾರೆ.
ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ ಎಂದು ಅವರು ಹೇಳುತ್ತಾರೆ ಮತ್ತು ಇದು ಅವರ ವಿಸ್ತಾರ ಮತ್ತು ಆಳವಾದ ಜ್ಞಾನ; ವಾಸ್ತು ವಿಜ್ಞಾನದ ತಿಳಿವಳಿಕೆ ಮತ್ತಿತರೆ ಶಾಸ್ತ್ರಗಳು ಮತ್ತು ಪ್ರಾಚೀನ ಭಾರತದ ಗ್ರಂಥಗಳಿಂದ ಪಡೆಯಲಾದ ಜ್ಞಾನದಿಂದ ಪಡೆಯಲಾಗಿದೆ.