ಬೆಂಗಳೂರು: ಬಿಸ್ಲೆರಿ ಸಂಸ್ಥೆಯು “ಗುಜರಾತ್ ಟೈಟಾನ್ಸ್”ನ ಜೊತೆಗೆ ಹೈಡ್ರೇಷನ್ ಪಾಲುದಾರಿಕೆ ಹೊಂದುವುದಾಗಿ ಘೊಷಿಸಿದೆ.
ಈ ಕುರಿತು ಮಾತನಡಿದ ಬಿಸ್ಲೆರಿ ವೈಸ್ ಚೇರ್‌ಮನ್ ಜಯಂತಿ ಚೌಹಾಣ್, ಐಪಿಎಲ್‌ನಲ್ಲಿ ಪ್ರಮುಖ ತಂಡವಾಗಿರುವ ಗುಜರಾತ್ ಟೈಟಾನ್ಸ್ ಜೊತೆಗೆ ಹೈಡ್ರೇಷನ್ ಪಾಲುದಾರಿಕೆ ಹೊಂದುವ ಅಭಿಲಾಷೆ ಇತ್ತು. ಕಳೆದ ೫೦ ವರ್ಷಗಳ ಸತತ ಇತಿಹಾಸ ಹೊಂದಿ ರುವ ಬಿಸ್ಲೆರಿ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇಂದಿನ ಯುವಕರಿಗೆ ಕ್ರಿಟೆಡ್ ಮೇಲೆ ಹೆಚ್ಚು ಅಭಿಮಾನ ಹೊಂದಿದ್ದಾರೆ. ಯುವಕರ ಆರೋಗ್ಯವನ್ನು ವೃದ್ಧಿಸಲು ಕುಡಿಯುವ ನೀರು ಹೆಚ್ಚು ಪ್ರಾಮುಖ್ಯತೆ ಹೊಂದಿ ರುತ್ತದೆ. ಹೀಗಾಗಿ ನಮ್ಮ ಸಂಸ್ಥೆಯು ಗುಜರಾತ್ ಟೈಟಾನ್‌ನೊಂದಿಗ ಸಹಭಾಗಿತ್ವ ಪಡೆ ಯುವ ಮೂಲಕ ಜನರನ್ನು ತಲುಪುವ ಉದ್ದೇಶ ಹೊಂದಿದ್ದೇವೆ.
ಗುಜರಾತ್ ಟೈಟಾನ್ಸ್ ಸಿಒಒ ಅರವಿಂದರ್ ಸಿಂಗ್ ಮಾತನಾಡಿ, “ಮುಂದಿನ ಮೂರು ಋತುಗಳಿಗೆ ಬಿಸ್ಲೆರಿಯನ್ನು ನಮ್ಮ ಜಲ ಸಂಚಯನ ಪಾಲುದಾರ ಎಂದು ಘೋಷಿಸಲು ನಮಗೆ ಅಪಾರ ಸಂತೋಷವನ್ನು ನೀಡುತ್ತದೆ. ನಾವಿಬ್ಬರೂ ನಮ್ಮ ಆಯಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಗಾಗಿ ಶ್ರಮಿಸುತ್ತೇವೆ ಮತ್ತು ದೀರ್ಘ ಮತ್ತು ಪರಸ್ಪರ ಲಾಭದಾಯಕ ಸಂಬಂಧವನ್ನು ಎದುರು ನೋಡು ತ್ತೇವೆ ಎಂದರು.