Friday, 1st December 2023

ಹಿಟ್‌ ರನ್‌ ಜಾಯಮಾನ ನನ್ನದಲ್ಲ: ಮಾಜಿ ಸಿಎಂ ಹೆಚ್.ಡಿ.ಕೆ ತಿರುಗೇಟು

ಬೆಂಗಳೂರು: ಹಿಟ್‌ ರನ್‌ ಜಾಯಮಾನ ನನ್ನದಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಹೆಚ್.ಡಿ.ಕೆ ಹೇಳಿದ್ದಾರೆ.

ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತ ನಾನು ಹಿಟ್ ಆಂಡ್ ರನ್ ಹೇಳಿಕೆ ನೀಡುವ ಜಾಯಮಾನದ ವನಲ್ಲ. ಹುಡುಗಾಟಕ್ಕಾಗಿ ನಾನು ಸರ್ಕಾರದವರು ಆರೋಪ ಮಾಡುತ್ತಿಲ್ಲ ಎಂದು ತಿಳಿಸಿದರು.

ಹಿಟ್ ಅಂಡ್ ರನ್ ಇದ್ರೆ ಅದು ಕಾಂಗ್ರೆಸ್ ಎಂದ ಹೆಚ್‍ಡಿ ಕುಮಾರಸ್ವಾಮಿ ಈ ಹಿಂದೆ ಕಾಂಗ್ರೆಸ್ ನಾಯಕರು ಸಾಕಷ್ಟು ಆರೋಪ ಮಾಡಿದ್ದರು. ಆರೋಪಕ್ಕೆ ಒಂದು ದಾಖಲೆ ಆದರೂ ಬಿಡುಗಡೆ ಮಾಡಿದ್ರಾ ? ಈಗ ನಿಮ್ಮ ಸರ್ಕಾರ ಇದೆ ಏಕೆ ದಾಖಲೆ ಬಿಡುಗಡೆ ಮಾಡಿಲ್ಲ? ಎಂದು ಕುಮಾರಸ್ವಾಮಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸು. ವೃಥಾ ಆರೋಪಗಳನ್ನು ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ವೈಎಸ್‍ಟಿ ಟ್ಯಾಕ್ಸ್ ಏಕೆ ಉಪಸ್ಥಿತ ರಿದ್ದರು ಎಂದು ಪ್ರಶ್ನಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಹಿಂದೆ ಪೆನ್‍ಡ್ರೈವ್ ತೋರಿಸಿದ್ದರು. ಅದನ್ನು ಸಾಬೀತು ಮಾಡಿದರೆ ಎಂದು ಪ್ರಶ್ನಿಸಿದ ಅವರು ಪೆನ್‍ಡ್ರೈವ್ ಇದ್ದರಲ್ಲವೇ ಹೊರಗೆ ಬಿಡುವುದು ಎಂದರು.

Leave a Reply

Your email address will not be published. Required fields are marked *

error: Content is protected !!