Wednesday, 6th November 2024

ಇಬ್ಬಲೂರು ಬಳಿ ಲಾರಿ ಮರಕ್ಕೆ ಡಿಕ್ಕಿ: 4 ಕಿ.ಮೀ ಸಂಚಾರ ದಟ್ಟಣೆ

ಬೆಂಗಳೂರು: ಬೆಂಗಳೂರಿನ ಇಬ್ಬಲೂರು ಬಳಿ ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಮರ ರಸ್ತೆಗೆ ಉರುಳಿದೆ. ಇದರ ಪರಿಣಾಮ 4 ಕಿಲೋ ಮೀಟರ್‌ ಹೆಚ್ಚು ದೂರ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಈಗಾಗಲೇ ಟ್ರಾಫಿಕ್‌ ಜಾಮ್‌ನಿಂದ ಸಿಲಿಕಾನ್‌ ಸಿಟಿ ಬೆಂಗಳೂರಿನ ಜನ ಬೇಸತ್ತು ಹೋಗಿದ್ದಾರೆ.

ಅದರಲ್ಲೂ ಇಂತಹ ಭೀಕರ ಅಪಘಾತಗಳು ಸಂಭವಿಸಿದರೆ ವಾಹನ ಸವಾರರ ಆಕ್ರೋಶ ಮುಗಿಲು ಮಟ್ಟುವುದಂತೂ ತಪ್ಪದ್ದಲ್ಲ.

ಹೀಗೆಯೆ ಇಬ್ಬಲೂರು ಬಳಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಉರುಳಿದ ಪರಿಣಾಮ ವಾಹನ ಸವಾರರಿಗೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಸಿಲ್ಕ್ ಬೋರ್ಡ್‌ನಿಂದ ಇಬ್ಬುಲೂರು ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಬದಲಿ ರಸ್ತೆ ಮಾರ್ಗದಲ್ಲಿ ಚಲಿಸುವಂತೆ ಟ್ರಾಫಿಕ್‌ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಬೆಳಗ್ಗೆ 8ಗಂಟಿಯಿಂದಲೂ ಬೆಂಗಳೂರು, ಬೊಮ್ಮನಹಳ್ಳಿ, ಕೋರಮಂಗಲ, ಎಚ್‌ಎಸ್‌ಆರ್‌, ಮಡಿವಾಳದಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಹೈರಣಾಗಿದ್ದಾರೆ. ಅಲ್ಲದೆ ವಾಹನ ಸವಾರರು ಸಂಚಾರ ಪೊಲೀಸರ ವಿರುದ್ಧ ಕೆಂಡಕಾರು ತ್ತಿದ್ದಾರೆ. ಸುಮಾರು 3 ಗಂಟೆಗಳ ಕಾಲ ಟ್ರಾಫ್‌ ಜಾಮ್‌ ಆಗಿದ್ದು, ಇದರಿಂದ ಬೇಸತ್ತ ಸ್ಥಳೀಯರು ಕೂಡ ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.