ಬೆಂಗಳೂರು: ದೇಶದಲ್ಲಿ ವಿದ್ಯುತ್ ವಾಹನಗಳ(ಇವಿ) ಬಳಕೆಯನ್ನು ಪ್ರೋತ್ಸಾಹಿಸುವ ತನ್ನ ಪ್ರಯತ್ನದ ಭಾಗವಾಗಿ, ಭಾರತದ ಮುಂಚೂಣಿ ಆಟೋಮೋಟಿವ್ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್, ತನ್ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲ್‌ಗಳಿಗೆ ಇವಿ ಡೀಲರ್ ಹಣಕಾಸು ನೆರವು ಒದಗಿಸುವುದಕ್ಕಾಗಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ತನ್ನ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದನ್ನು ಘೋಷಿಸಿದೆ.
ಈ ಯೋಜನೆಯಡಿ, ಐಸಿಐಸಿಐ ಬ್ಯಾಂಕ್, ಟಾಟಾ ಮೋಟರ್ಸ್‌ನ ಅಧಿಕೃತ ಪ್ಯಾಸೆಂಜರ್ ಇವಿ ಡೀಲರ್‌ಗಳಿಗೆ ಬಂಡವಾಳ ಹಣಕಾಸು ನೆರವು ಒದಗಿಸಲಿದೆ. ಈ ಬಂಡವಾಳ ಹಣಕಾಸು ನೆರವು, ಡೀಸಲ್ ಮತ್ತು ಪೆಟ್ರೋಲ್ ಮಾಡಲ್‌ಗಳಿಗೆ ಬ್ಯಾಂಕ್ ಒದಗಿಸುವ ಹಣಕಾಸು ನೆರವಿಗೆ ಹೆಚ್ಚುವರಿ ಯಾಗಿ ಸಿಗಲಿದೆ. ಈ ಸೌಲಭ್ಯಡಿ, ಇವಿ ಡೀಲ್‌ಗಳು ಪರಿವರ್ತಿಸಬಹುದಾದ ಮರುಪಾವತಿ ಅವಧಿಗಳ ಆಯ್ಕೆ ಮಾಡಿಕೊಳ್ಳಬಹುದು.
ಈ ಸಹಭಾಗಿತ್ವದ ಒಪ್ಪಂದಕ್ಕೆ, ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶೈಲೇಶ್ ಚಂದ್ರ ಹಾಗೂ ಐಸಿಐಸಿಐ ಬ್ಯಾಂಕ್ ಲಿ.,ನ ಕಾರ್ಯಕಾರೀ ನಿರ್ದೇಶಕ ಶ್ರೀ ರಾಕೇಶ್ ಝಾ ಸಹಿ ಹಾಕಿದರು.
ಈ ಸಹಭಾಗಿತ್ವದ ಬಗ್ಗೆ ಮಾತನಾಡುತ್ತಾ, ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿ.,ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಶೈಲೇಶ್ ಚಂದ್ರ “ದೇಶದ ಇವಿ ವಾಹನಗಳ ಅಗ್ರಸಂಸ್ಥೆಯಾಗಿ, ಅವುಗಳ ಯಶಸ್ವೀ ಅಳವಡಿಕೆಯ ಬಾಧ್ಯತೆಯನ್ನೂ ಹೊರುತ್ತೇವೆ. ಸಂಪೂರ್ಣವಾಗಿ ವಿದ್ಯುತ್ತೀಕರಣಗೊಂಡ ಹಸಿರು ಸಂಚಾರವನ್ನು ಪ್ರೋತ್ಸಾಹಿಸುವ ನಮ್ಮ ಸಾಧನೆಯ ಗುರಿಯನ್ನು ತಲುಪುವ ನಿಟ್ಟಿನಲ್ಲಿ, ನಾವು ನಮ್ಮ ಅಧಿಕೃತ ಪ್ಯಾಸೆಂಜರ್ ವಿದ್ಯುತ್ ವಾಹನ ಡೀಲ್‌ಗಳಿಗೆ ವಿಶಿಷ್ಟವಾದ ಹಣಕಾಸು ಯೋಜನೆಯ ನೆರವು ಒದಗಿಸುವ ಸಲುವಾಗಿ ಐಸಿಐಸಿಐ ಬ್ಯಾಂಕ್‌ನೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ಹರ್ಷಿಸುತ್ತೇವೆ.
ನಮ್ಮ ಡೀಲರ್ ಕಾರ್ಯಜಾಲವು, ನಮ್ಮ ಮೂಲ ಆಧಾರ ಸ್ತಂಭಗಳ ಭಾಗವಾಗಿದ್ದು, ಅವರುಗಳ ನಿರಂತರ ಪ್ರಯತ್ನಗಳ ಮೂಲಕ ನಾವು ಭಾರತದ ವಿದ್ಯುತ್ತೀಕರಣದ ಅಲೆಯ ಮೇಲೆ ಸವಾರಿ ಮಾಡುತ್ತಿದ್ದೇವೆ. ಈ ಸಹಭಾಗಿತ್ವದ ಮೂಲಕ, ನಾವು ಇವಿಗಳನ್ನು ಇನ್ನಷ್ಟು ಸುಲಭವಾಗಿ ಕೈಗೆಟುಕು ವಂತೆ ಮಾಡಿ ವಿದ್ಯುತ್ ವಾಹನದ ಖರೀದಿಯು ನಮ್ಮ ಗ್ರಾಹಕರಿಗೆ ಒಂದು ತಡೆರಹಿತ ಖರೀದಿ ಪ್ರಕ್ರಿಯೆ ಹಾಗೂ ಸ್ಮರಣೀಯ ಅನುಭವವನ್ನಾಗಿ ಮಾಡಲಿದ್ದೇವೆ ಎಂಬ ವಿಶ್ವಾಸ ನಮಗಿದೆ.”ಎಂದು ಹೇಳಿದರು.
ಈ ಸಹಭಾಗಿತ್ವದ ಬಗ್ಗೆ ಮಾತನಾಡುತ್ತಾ, ಐಸಿಐಸಿಐ ಬ್ಯಾಂಕ್‌ನ ಕಾರ್ಯಕಾರೀ ನಿರ್ದೇಶಕ ಶ್ರೀ ರಾಕೇಶ್ ಝಾ, “ವಿದ್ಯುತ್ ವಾಹನ ಉದ್ದಿಮೆಯು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಪರಿಸರ ಸ್ನೇಹಿಯಾದ ವಿದ್ಯುತ್ ವಾಹನಗಳಿಗೆ ಗ್ರಾಹಕರ ಬೇಡಿಕೆ ಹಚ್ಚಾಗತ್ತಿದೆ. ಇವಿಗಳ ಪರಿಚವ, ಆಟೋ ಮೊಬೈಲ್ ಕ್ಷತ್ರದಲ್ಲಿ ಏರ್ಪಟ್ಟಿರವ ಮಹತ್ತರವಾದ ಆವಿಷ್ಕಾರಗಳ ಪೈಕಿ ಒಂದಾಗದೆ. ವಿನೂತನವಾದ ತಾಂತ್ರಿಕ ಉಪಕ್ರಮಗಳನ್ನು ಬೆಂಬಲಿಸಿರುವ ಪರಂಪರೆ ಹೊಂದಿದೆ ಐಸಿಐಸಿಐ ಬ್ಯಾಂಕ್. ಈ ಸಿದ್ಧಾಂತಕ್ಕೆ ಅನುಗುಣವಾಗಿ, ದೇಶದ ಮುಂಚೂಣಿ ಆಟೋಮೋಟಿವ್ ಸಂಸ್ಥೆಯ ಅಧಿಕೃತ ಡೀಲರ್ಗ ಳಿಗಾಗಿ ವಿದ್ಯುತ್ ವಾಹನ ಹಣಕಾಸು ನೆರವಿನ ಯೋಜನೆಯನ್ನು ಒದಗಿಸುವ ಸಲುವಾಗಿ ಟಾಟಾ ಮೋಟರ್ಸ್‌ನೊಂದಿಗೆ ಸಹಭಾಗಿತ್ವ ಏರ್ಪಡಿಸಿ ಕೊಳ್ಳುತ್ತಿರುವುದಕ್ಕ ನಮಗೆ ಸಂತೋಷವಾಗುತ್ತಿದೆ. ದೀರ್ಘಕಾಲ ಉಳಿಯುವಂತಹ ಭಾರತದ ಪಯಣದೆಣೆಗೆ ನಮ್ಮ ನಿರಂತರ ಪಾಲ್ಗೊಳ್ಳುವಿಕೆ ಯನ್ನು ಇದು ಪ್ರತಿಬಿಂಬಿಸುತ್ತದೆ.”ಎಂದರು.
ತನ್ನ ವಿಶಿಷ್ಟ ಹಾಗೂ ವಿನೂತನವಾದ ಪ್ರಯತ್ನಗಳೊಂದಿಗೆ ಟಾಟಾ ಮೋಟರ್ಸ್ ಭಾರತೀಯ ಆಟೋಮೋಟಿವ್ ಮಾರುಕಟ್ಟೆಯನ್ನು ಮುನ್ನಡೆಸು ತ್ತಿದ್ದು ಪ್ರಸ್ತುತ ಇಂದಿನವರೆಗೆ ವೈಯಕ್ತಿಕ ಹಾಗೂ ಫ್ಲೀಟ್ ವರ್ಗಗಳಲ್ಲಿ 57,000ಗಿಂತ ಹೆಚ್ಚಿನ ಇವಿಗಳನ್ನು ಉತ್ಪಾದಿಸಿ 85.8% ಮಾರುಕಟ್ಟೆ ಪಾಲಿನೊಂದಿಗೆ ಭಾರತದಲ್ಲಿ ಇ-ಸಂಚಾರ ಅಲೆಯನ್ನು ಕೂಡ ಮುನ್ನಡೆಸುತ್ತಿದೆ.