Saturday, 14th December 2024

ಪ್ರಪ್ರಥಮ ಅವಳಿ ಸಿಲಿಂಡರ್ ಆಲ್ಟ್ರೋಜ್ iCNGದ ಬುಕ್ಕಿಂಗ್ಸ್ ತೆರೆದ ಟಾಟಾ ಮೋಟರ್ಸ್

ಬೆಂಗಳೂರು: ಸಿಎನ್‌ಜಿ ಮಾರುಕಟ್ಟೆಯನ್ನು ಕ್ರಾಂತಿಗೊಳಿಸುವ ಸಲುವಾಗಿ ಟಾಟಾ ಮೋಟರ್ಸ್, ಭಾರತದಪ್ರಪ್ರಥಮ ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನದ ಆಲ್ಟ್ರೋಜ್ iCNGಅನ್ನು ಇಷ್ಟರಲ್ಲೇ ಪರಿಚಯಿಸಲಿದೆ. ಭಾರತದ ಅತ್ಯಂತ ಸುರಕ್ಷಿತ ಪ್ರೀಮಿಯಮ್ ಬ್ಯಾಚ್‌ಬ್ಯಾಕ್ ಆದ ಟಾಟಾ ಆಲ್ಟ್ರೋಜ್ ಇಂದಿನಿಂದ, ತನ್ನ ಅತ್ಯಂತ ನಿರೀಕ್ಷಿತ ಅವತಾರವಾದ iCNG ಅವತಾರದಲ್ಲಿ ಬುಕಿಂಗ್ಸ್‌ಗೆ ತೆರೆದಿದೆ. ಈ ವಾಹನದೊಂದಿಗೆ, ಪೆಟ್ರೋಲ್ ಹಾಗೂ ಡೀಸಲ್ ಕಾರುಗಳಂತೆಯೇ, ಭಾರತದ ಸಿಎನ್‌ಜಿ ಕಾರುಗಳ ಸ್ವೀಕೃತಿಯನ್ನು ಹೆಚ್ಚಿಸುವುದು ಟಾಟಾ ಮೋಟರ್ಸ್‌ನ ಗುರಿಯಾಗಿದೆ.

ಆಲ್ಟ್ರೋಜ್ iCNGಯನ್ನು ಜನವರಿ 2023ರಲ್ಲಿ ನಡೆದ ಆಟೋ ಎಕ್ಸ್‌ಪೋ 2023ದಲ್ಲಿ ಅನಾವರಣಗೊಳಿಸಲಾಗಿತ್ತು ಮತ್ತು ಭಾರತದ ಪ್ರಪ್ರಥಮ ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನಕ್ಕಾಗಿ ಅದು ಗ್ರಾಹಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಅವಳಿ ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವು ಕ್ರಾಂತಿಕಾರಿ ತಂತ್ರಜ್ಞಾನವಾಗಿದ್ದು ಸಿಎನ್‌ಜಿ ಮಾಲೀಕರುಗಳಿಗೆ ವಾಸ್ತವವಾಗಿ ಬಳಸಿಕೊಳ್ಳಬಹುದಾದ ಬೂಟ್ ಸ್ಪೇಸ್ ತರುತ್ತದೆ. ಈ ಅಂಶವು ಪ್ರಸ್ತುತ ಎಲ್ಲಾ ಸಿಎನ್‌ಜಿ ಕಾರುಗಳಲ್ಲೂ ಲಭ್ಯವಿಲ್ಲ. ಈಗ ಗ್ರಾಹಕರು ಆಲ್ಟ್ರೋಜ್ iCNGಯನ್ನು ರೂ. 21,000ದಲ್ಲಿ ಬುಕ್ ಮಾಡಬಹುದು. ಮೇ 2023ರಿಂದ ಡೆಲಿವರಿಗಳು ಆರಂಭವಾಗಲಿದ್ದು, ಆಲ್ಟ್ರೋಜ್ iCNG ಟಾಟಾ ಮೋಟರ್ಸ್‌ನ ಯಶಸ್ವೀ ಮಲ್ಟಿ ಪವರ್‌ಟ್ರೇನ್ ತಂತ್ರಕ್ಕೆ ಬಲಿಷ್ಟ ಪುರಾವೆಯಾಗಿ ಆಲ್ಟ್ರೋಜ್ ಶ್ರೇಣಿಯಲ್ಲಿ ಈಗ ಇದನ್ನು ನಾಲ್ಕನೇ ಪವರ್‌ಟ್ರೇನ್ ಆಯ್ಕೆಯನ್ನಾಗಿ ಮಾಡಿದೆ.

ಮೇಲಿನವುಗಳ ಜೊತೆಗೆ, ಆಲ್ಟ್ರೋಜ್ iCNG ಈ ಕೆಳಗಿನವುಗಳನ್ನೂ ಒದಗಿಸಲಿದ

• ದೊಡ್ಡದಾದ ಬಳಸಿಕೊಳ್ಳಬಹುದಾದ ಬೂಟ್ ಸ್ಪೇಸ್ ಖಾತರಿಪಡಿಸುವ ಸಲುವಾಗಿ ಲಗ್ಗೇಜ್ ಏರಿಯಾದ ಕೆಳಗೆ, 60 ಲೀಟರ್‌ಗಳ ಒಟ್ಟೂ ನೀರಿನ ಸಾಮರ್ಥ್ಯವಿರುವ (ಪ್ರತಿಯೊಂದು ಸಿಲಿಂಡರ್ 30 ಲೀಟರ್ ಸಾಮರ್ಥ್ಯ ಹೊಂದಿದೆ) ವಿನೂತನವಾದ ಅವಳಿ ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
• ಸಿಂಗಲ್ ಅಡ್ವಾನ್ಸ್ಡ್ ECU – ಪೆಟ್ರೋಲ್ ಮೋಡ್‌ನಿಂದ ಸಿಎನ್‌ಜಿಗೆ ಬದಲಾಗುವಾಗ ಅಥವಾ ಸಿಎನ್‌ಜಿಯಿಂದ ಪೆಟ್ರೋಲ್ ಮೋಡ್‌ಗೆ ಬದಲಾಗುವಾಗ ತಡೆರಹಿತ ಹಾಗೂ ಜಿಗಿತವಿಲ್ಲದ ಚಾಲನಾ ಅನುಭವ ಖಾತರಿಪಡಿಸುತ್ತದೆ.
• ಸಿಎನ್‌ಜಿ ಮೋಡ್‌ನಲ್ಲಿ ನೇರ ಸ್ಟಾರ್ಟ್ – ತೊಂಡರೆಯಿಲ್ಲದ ಅನುಭವ ಖಾತರಿಪಡಿಸಲು ಮತ್ತು ಫ್ಯುಯೆಲ್ ಮೋಡ್‌ಗೆ ಬದಲಾಯಿಸಿಕೊಳ್ಳುವಾಗ ಚಿಂತೆಮುಕ್ತವಾಗಿರಲು, ಆಲ್ಟ್ರೋಜ್ iCNG ಸಿಎನ್‌ಜಿಯಲ್ಲೇ ನೇರವಾಗಿ ಸ್ಟಾರ್ಟ್ ಆಗುತ್ತದೆ.
• ಹೆಚ್ಚುವರಿ ಸುರಕ್ಷತಾ ಅಂಶಗಳು – ಥರ್ಮಲ್(ಶಾಖ) ಸಂದರ್ಭ ರಕ್ಷಣೆ, ಗ್ಯಾಸ್ ಸೋರಿಕೆ ಪತ್ತೆಹಚ್ಚುವಿಕೆ, ಮತ್ತು ಮೈಕ್ರೋ ಸ್ವಿಚ್, ಕಾರನ್ನು ರೀಫ್ಯುಯೆಲ್ ಮಾಡಿಕೊಳ್ಳುವ ಸಮಯದಲ್ಲಿ ಅದು ಅಫ್ ಆಗಿರುವುದನ್ನು ಖಾತರಿಪಡಿಸುತ್ತದೆ.
• 3 ವರ್ಷ/ 100,000 ಕಿ.ಮೀ ಸಾಮಾನ್ಯ ವಾರಂಟಿಯೊಂದಿಗೆ ಸಂಪೂರ್ಣ ಮನಸ್ಸಿಗೆ ನೆಮ್ಮದಿ

ಆಲ್ಟ್ರೋಜ್ iCNG, ನಾಲ್ಕು ವೈವಿಧ್ಯಗಳಲ್ಲಿ ಲಭ್ಯವಿರುತ್ತದೆ – XE, XM+, XZ ಮತ್ತು XZ+ ಮತ್ತು ನಾಲ್ಕು ಬಣ್ಣ ಆಯ್ಕೆಗಳಲ್ಲಿ- ಒಪೆರಾ ಬ್ಲೂ, ಡೌನ್‌ಟೌನ್ ರೆರ್ಡ್, ಆರ್ಕೇಡ್ ಗ್ರ್ ಮತ್ತು ಅವೆನ್ಯೂ ವೈಟ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಆಲ್ಟ್ರೋಜ್ iCNG, ಲೆದರೆಟ್ ಸೀಟುಗಳು, iRA ಸಂಪರ್ಕಗೊಂಡ ಕಾರ್ ತಂತ್ರಜ್ಞಾನ, ಕ್ರೂಸ್ ಕಂಟ್ರೋಲ್ ಮತ್ತು ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್ ಮುಂತಾದ ಮಹತ್ವಾಕಾಂಕ್ಷೆಯ ಅಂಶಗಳನ್ನೂ ಒಳಗೊಂಡಿದೆ.