ಬೆಂಗಳೂರು: ಭುಜದ ಮೂಳೆ ಮತ್ತು ಸ್ನಾಯುಗಳಲ್ಲಿ ಸವೆತ ಉಂಟಾಗಿ ಸ್ನಾಯುರಜ್ಜು ( ಸ್ನಾಯುವನ್ನು ಎಲುಬಿಗೆ ಭದ್ರವಾಗಿ ಬಂಧಿಸಿದ ತಂತು) ಗಾಯದಿಂದ ಬಳಲುತ್ತಿದ್ದ ೪೪ ವರ್ಷದ ವ್ಯಕ್ತಿಗೆ “ಗೋವಿನ ಸ್ನಾಯುರಜ್ಜು ಇಂಪ್ಲಾಂಟ್” (ಬಯೋಇಂಡಕ್ಟಿವ್ ಬೋವಿನ್ ಕಾಲಜನ್) ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ವೈದ್ಯರು ನಡೆಸಿದ್ದಾರೆ. ಇದು ರಾಜ್ಯದಲ್ಲಿ ಮೊದಲ ಬಾರಿಗೆ ಗೋವಿನ ಕಾಲಿನ ಹಿಂಭಾಗದಲ್ಲಿರುವ ಸ್ನಾಯುರಜ್ಜು ಬಳಸಿಕೊಂಡು ನಡೆಸಿದ ಶಸ್ತ್ರಚಿಕಿತ್ಸೆಯಾಗಿದೆ.
ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಘು ನಾಗರಾಜ್ ಅವರ ತಂಡ ಈ ಯಶಸ್ವಿ ಚಿಕಿತ್ಸೆ ನಡೆಸಿದ್ದಾರೆ, ಈ ಕುರಿತು ಮಾತನಾಡಿದ ಅವರು, ೪೪ ವರ್ಷದ ಐಟಿ ಉದ್ಯಮಿ ಹಾಗೂ ಕ್ರಿಕೆಟಿಗರಾದ ಎಂ ಕೇಶವ್ (ಹೆಸರು ಬದಲಿಸಲಾಗಿದೆ) ಹಲವು ತಿಂಗಳಿನಿಂದ ಭುಜದ ಮೂಳೆ ನೋವು ಅನುಭವಿಸುತ್ತಾ ಇದ್ದ ಕಾರಣ ಫೋರ್ಟಿಸ್ ಆಸ್ಪತ್ರೆಗೆ ದಾಖಲಾದರು. ಅವರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ ಭುಜದ ಸ್ನಾಯುರಜ್ಜು ವಿನ ಗಾಯವಿರುವುದು ಬೆಳಕಿಗೆ ಬಂತು. ಇವರಿಗೆ ಬಯೋಇಂಡಕ್ಟಿವ್ ಬೋವಿನ್ ಕಾಲಜನ್ ಅಳವಡಿಕೆ ಮಾಡುವುದು ಸೂಕ್ತವೆಂದು ನಿರ್ಧರಿಸ ಲಾಯಿತು.
ಸಾಮಾನ್ಯವಾಗಿ ೫೦ ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಭುಜುದ ನೋವು ಹಾಗೂ ಸ್ನಾಯುಗಳ ಸೆಳೆತ ಕಂಡು ಬರುತ್ತದೆ. ಈ ರೀತಿಯ ಪ್ರಕರಣಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವುದು ಕಷ್ಟಸಾಧ್ಯ. ಆದರೆ, ಈ ಸ್ನಾಯುರಜ್ಜು ಗಾಯವಾದವರಿಗೆ ಎಮ್ಮೆ, ಹಸುಗಳ ಅಕ್ಸಿಲ್ ಸ್ನಾಯುರಜ್ಜು (ಕಾಲಿನ ಹಿಂಭಾಗದಲ್ಲಿ ರುವ ಸ್ನಾಯುರಜ್ಜು) ನಿಂದ ಪಡೆದ ಇಂಪ್ಲಾಂಟ್‌ನನ್ನು ಬಳಸಿಕೊಂಡು ಶಸ್ತ್ರಚಿಕಿತ್ಸೆ ನಡೆಸಬಹುದು. ಇದನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಮೊದಲ ಬಾರಿಗೆ ನಮ್ಮ ವೈದ್ಯರ ತಂಡ ನಡೆಸಿ, ಯಶಸ್ವಿಯಾಗಿದೆ.
ರೋಗಿಯ ವಯಸ್ಸು ೫೦ ವರ್ಷ ದಾಟದೇ ಇದ್ದರೂ, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ , ಅವರು ಸ್ನಾಯುರಜ್ಜು ಗಾಯಕ್ಕೆ ತುತ್ತಾಗಿದ್ದರು. ಅಸಾಧಾರಣ ನೋವಿನಿಂದಲೂ ಬಳಲುತ್ತಿದ್ದರು. ಮೊದಲಿಗೆ ಅವರಿಗೆ ಆವರ್ತಕ ಪಟ್ಟಿಯ ಸ್ನಾಯುರಜ್ಜುನನ್ನು ಸರಿಪಡಿಸಿ ಹೊಲಿಗೆ ಮೂಲಕ ಭುಜದ ಮೂಳೆಗೆ ಜೋಡಿಸಲಾಯಿತು. ನಂತರ ಸರಿಪಡಿಸಿದ ಸ್ನಾಯುರಜ್ಜು ಮೇಲೆ ಗೋವಿನ ಕಾಲಜನ್ ( ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಒದಗಿಸುವ ಪ್ರೋಟೀನ್) ಮಾಡಿದ ವಿಶೇಷ ಇಂಪ್ಲಾಂಟ್ ಅನ್ನು ಇರಿಸಿದ್ದೇವೆ, ಈ ದನದ ಕಾಲಜನ್ ಇಂಪ್ಲಾಂಟ್ ರೋಗಿಯ ಭುಜದಲ್ಲಿನ ಆತಿಥೇಯ ಅಂಗಾಂಶ ಗಳನ್ನು ವೇಗವಾಗಿ ಮತ್ತು ಉತ್ತಮವಾಗಿ ಪುನರುತ್ಪಾದಿಸಲು ಸಹಾಯ ಮಾಡುತ್ತದೆ, ಈ ಶಸ್ತ್ರಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮವಿಲ್ಲ. ಹೊಸ ಸ್ನಾಯುರಜ್ಜು ಬೆಳೆಯುವವರೆಗೆ ಮತ್ತು 6-8 ತಿಂಗಳುಗಳಲ್ಲಿ ಸಂಪೂರ್ಣವಾಗಿ ಕರಗುವವರೆಗೆ ಮಾತ್ರ ಇಂಪ್ಲಾಂಟ್ ದೇಹದಲ್ಲಿ ಇರುತ್ತದೆ. ಈ ಗೋವಿನ ಇಂಪ್ಲಾಂಟ್ ಭುಜದ ಗಾಯದ ರೋಗಿಗಳಿಗೆ, ವಿಶೇಷವಾಗಿ ಕ್ರೀಡಾ ವ್ಯಕ್ತಿಗಳಿಗೆ ಮತ್ತು ವಯಸ್ಸಾದವರಿಗೆ ವರವಾಗಿದೆ ಎಂದು ವಿವರಿಸಿದರು.
ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಮಾತನಾಡಿ, “ಬಯೋಇಂಡಕ್ಟಿವ್ ಬೋವೈನ್ ಕಾಲಜನ್ ಇಂಪ್ಲಾಂಟ್‌ಗಳ ಬಳಕೆಯು ಮೂಳೆ ಶಸ್ತ್ರಚಿಕಿತ್ಸೆಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಈ ಅದ್ಭುತ ಶಸ್ತ್ರಚಿಕಿತ್ಸೆಯು ಫೋರ್ಟಿಸ್ ಆಸ್ಪತ್ರೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ತಂಡದ ಪರಿಣತಿ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಆಸ್ಪತ್ರೆಯು ಆರೋಗ್ಯ ರಕ್ಷಣೆಯ ಆವಿಷ್ಕಾರದಲ್ಲಿ ಮುಂಚೂಣಿ ಯಲ್ಲಿದೆ. ಸುಧಾರಿತ ವೈದ್ಯಕೀಯ ವಿಧಾನಗಳು ಮತ್ತು ಸಹಾನುಭೂತಿಯ ಆರೈಕೆಯ ಮೂಲಕ ರೋಗಿಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ಶ್ರಮಿಸುತ್ತಿದೆ.