ಬೆಂಗಳೂರು: ʻʻಶಾರುಖ್ ಅವರ ಟಿಫಿನ್‌ನಲ್ಲಿ ಏನಿದೆ?” ಎಂಬ ಪ್ರಶ್ನೆಯೊಂದು ಕಳೆದ ಕೆಲವು ದಿನಗಳಿಂದ ಅಂತರ್ಜಾಲದಲ್ಲಿ ಅಬ್ಬರಿಸುತ್ತಿದೆ.
ಬಾಲಿವುಡ್‌ನ ಕಿಂಗ್ ಸೆಟ್‌ಗಳಿಗೆ ತಮ್ಮದೇ ಆದ ಟಿಫಿನ್ ಅನ್ನು ಒಯ್ಯುತ್ತಾರೆ ಎಂಬುದು ಅವರ ಅಭಿಮಾನಿಗಳಿಗೆ ತಿಳಿದ ವಿಷಯವೆ. ಆದಾಗ್ಯೂ, ಅವರು ಟಿಫಿನ್‌ನಲ್ಲಿ ಏನು ತರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ! ಫರಾ ಖಾನ್ ಕುಂದರ್, ತಾರುಕ್ ರೈನಾ, ಸ್ಟಾರ್ ಚೆಫ್ ಸಂಜ್ಯೋತ್ ಖೀರ್, ಜನಪ್ರಿಯ ನೃತ್ಯ ಸಂಯೋಜಕ ಶೆಹಜಾನ್ ಖಾನ್ ಮತ್ತು ಪ್ರಭಾವಿ ಆರ್ಯನ್ ಕಟಾರಿಯಾ ಅವರಂತಹ ಫಿಲ್ಮ್ ಪೇಜ್‌ಗಳಿಂದ ಫ್ಯಾನ್ ಪೇಜ್‌ಗಳು ಮತ್ತು ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮವು “ಶಾರುಖ್ ಅವರ ಟಿಫಿನ್‌ನಲ್ಲಿ ಏನಿದೆ” ಎಂದು ತಿಳಿದುಕೊಳ್ಳುವ ತಮ್ಮ ಆಳವಾದ ಆಸೆಯನ್ನು ಹಂಚಿಕೊಂಡಿ ದ್ದಾರೆ.
ಈ ಸಂಭಾಷಣೆಯು ಸಾಮಾಜಿಕ ಮಾಧ್ಯಮದಾದ್ಯಂತ 9 ಮಿಲಿಯನ್ ವೀಕ್ಷಣೆಗಳೊಂದಿಗೆ ಎಲ್ಲರ ಕುತೂಹಲವನ್ನು ಕೆಣಕಿದ. ಅವರ ಅಭಿಮಾನಿಗಳು ಸಹ ಶಾರುಖ್‌ಖಾನ್ ಅವರ ಟಿಫನ್‌ನಲ್ಲಿ ಏನಿದೆ ಎಂಬ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು, ಇದೀಗ ಈ ವಿಷಯ ಬಹಿರಂಗ ಪಡಿಸಲು ವೇದಿಕೆ ಸಿದ್ಧವಾಗಿದೆ.
ಅಂತರ್ಜಾಲವು ಸಲಾಡ್‌ಗಳಿಂದ ಬಿರಿಯಾನಿಯವರೆಗೆ ಹುಚ್ಚುಚ್ಚಾಗಿ ಊಹಿಸುತ್ತಲೇ ಇದ್ದಾಗ, ಎಸ್‌ಆರ್‌ಕೆ ಅಂತಿಮವಾಗಿ ಅನೇಕ ಭಾರತೀಯರಂತೆ, ಅವರು ತಮ್ಮ ಟಿಫಿನ್ ಅನ್ನು ಸಿಹಿಯಾದ ಟಿಪ್ಪಣಿಯಲ್ಲಿ ಮುಗಿಸಲು ಇಷ್ಟಪಡುತ್ತಾರೆ ಮತ್ತು ಅವರ ನೆಚ್ಚಿನ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಕುಕೀ ಯನ್ನು ತಮ್ಮ ಟಿಫಿನ್‌ನಲ್ಲಿ ಒಯ್ಯುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಕರಗಿದ ಚೋಕೊ ಕ್ರೀಮ್‌ನಿಂದ ತುಂಬಿದ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಊಟದ ನಂತರದ ಸಿಹಿತಿಂಡಿಯ ರುಚಿಯಾಗಿದೆ.
ಊಟದ ನಂತರ ಸಿಹಿತಿನಿಸು ತಿನ್ನುವ ಜನರ ಹಿಂಗಿತವನ್ನು ಅರಿತು, ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಟಿಫಿನ್ ಅನುಭವವನ್ನು ಹೆಚ್ಚಿಸಲು ಒಂದು ಅನನ್ಯ ಅವಕಾಶವನ್ನು ನೀಡಿದೆ. ಜನರು ಸಾಮಾನ್ಯವಾಗಿ ತಮ್ಮ ಊಟವನ್ನು ಮನೆಯಲ್ಲಿ ಅಥವಾ ರೆಸ್ಟೋರೆಂಟ್‌ಗಳಲ್ಲಿ ಸಿಹಿತಿನಿಸು/ ಸಿಹಿತಿಂಡಿಗಳೊಂದಿಗೆ ಕೊನೆಗೊಳಿಸುತ್ತಾರೆ ಎಂಬ ಒಳನೋಟದಿಂದ ತಿಳಿದುಬಂದಿದೆ. ಆದರೆ, ಈ ಅಭ್ಯಾಸವನ್ನು ಊಟದ ಬಾಕ್ಸ್ ತೆಗೆದುಕೊಂಡು ಹೋಗುವಾಗ ಮಾತ್ರ
ಸಿಹಿ ತಿನಿಸು ತಿನ್ನುವುದನ್ನು ಕಡೆಗಣಿಸುತ್ತಾರೆ.
ಹೀಗಾಗಿ ಸನ್‌ಫೀಸ್ಟ್ ಅವರು ಈ ವಿಶಿಷ್ಟ ಒಳನೋಟದೊಂದಿಗೆ, ಬ್ರ್ಯಾಂಡ್ ಶಾರುಖ್ ನಟಿಸಿದ “ಹರ್ ಟಿಫಿನ್ ಕಿ ಸ್ವೀಟ್ ಎಂಡಿಂಗ್” ವಿಡಿಯೋ ಅನ್ನು ಅನಾವರಣಗೊಳಿಸಿದೆ. ಈ ಅಭಿಯಾನದಲ್ಲಿ, ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಯಾವುದೇ ರೀತಿಯ ಟಿಫಿನ್‌ಗೆ ಕೊನೆಯ ಸಿಹಿ ತಿನಿಸಾಗಿ ಹೊಂದಿಕೊಳ್ಳ ಲಿದೆ.
ಪ್ರತಿ ಡಾರ್ಕ್ ಫ್ಯಾಂಟಸಿ ಕುಕಿಯು, ಮಧ್ಯಭಾಗದಲ್ಲಿ ಕರಗಿದ ಚೋಕೊ ಅನುಭವವನ್ನು ನೀಡುತ್ತದೆ ಮತ್ತು ಊಟದ ಬಾಕ್ಸ್‌ಗಳಲ್ಲಿ ಸುಲಭವಾಗಿ ಇಟ್ಟುಕೊಳ್ಳಲು ಪ್ರತ್ಯೇಕವಾಗಿ ಪ್ಯಾಕ್ ಮಾಡಲಾಗಿದ್ದು, ಪ್ರತಿ ಟಿಫಿನ್‌ನ ಅಂತ್ಯವನ್ನು ಸಿಹಿಗೊಳಿಸಲಿದೆ.
ಐಟಿಸಿಯ ಫುಡ್ಸ್ ವಿಭಾಗದ ಬಿಸ್ಕೆಟ್ಸ್ ಮತ್ತು ಕೇಕ್ಸ್ ಕ್ಲಸ್ಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲಿ ಹ್ಯಾರಿಸ್ ಶೇರ್ ಅವರು ತಮ್ಮ ಉತ್ಸಾಹವನ್ನು ಹಂಚಿಕೊಂಡರು, “ನಮ್ಮ ಇತ್ತೀಚಿನ ಅಭಿಯಾನವಾದ ‘ಹರ್ ಟಿಫಿನ್ ಕಿ ಸ್ವೀಟ್ ಎಂಡಿಂಗ್’ ಅನ್ನು ಶಾರುಖ್ ಖಾನ್ ಅವರೊಂದಿಗೆ ಅನಾವರಣ ಗೊಳಿಸಲು ನಮಗೆ ಸಂತಸವೆನಿಸುತ್ತದೆ. ಈ ಅಭಿಯಾನದ ಮೂಲಕ, ಜನರು ತಮ್ಮ ಟಿಫಿನ್‌ಗಳನ್ನು ಹೇಗೆ ವಿಶಿಷ್ಟಗೊಳಿಸಬಹುದು ಎಂಬುದನ್ನು ಮರು ವ್ಯಾಖ್ಯಾನಿಸುವ ಗುರಿಯನ್ನು ಹೊಂದಿದ್ದೇವೆ. ಅವರ ಟಿಫಿನ್ ಕ್ಷಣಗಳನ್ನು ಇನನ್ಷ್ಟು ಸಿಹಿಭರಿತಗೊಳಿಸು ನಾವು ಈ ಪ್ರಯತ್ನ ನಡೆಸಿದ್ದೇವೆ ಎಂದರು.
ಶ್ರೀ ದಾಮೋದರನ್. ಎಂ, ಅಧ್ಯಕ್ಷರು ಮತ್ತು ಕಚೇರಿಯ ಮುಖ್ಯಸ್ಥರು, ಎಫ್‌ಸಿಬಿ ಉಲ್ಕಾ, ಬೆಂಗಳೂರು, “ಭಾರತೀಯರಾದ ನಾವು ನಮ್ಮ ಊಟವನ್ನು ಸಿಹಿ ತಿನ್ನುವ ಮೂಲಕ ಪೂರ್ಣಗೊಳಿಸುತ್ತೇವೆ. ಆದರೆ, ನಮ್ಮ ಟಿಫಿನ್‌ಗಳ ವಿಷಯಕ್ಕೆ ಬಂದಾಗ, ಈ ಅಭ್ಯಾಸ ಕಾಣೆಯಾಗಿದೆ.ಹೀಗಾಗಿ ಇನ್ನುಮುಂದೆ ಈ ಅಭ್ಯಾಸವನ್ನು ಮುಂದುವರೆಸಲು ಡಾರ್ಕ್ ಫ್ಯಾಂಟಸಿಯನ್ನು ಆದರ್ಶಪ್ರಾಯವಾಗಿ ಇರಿಸಲು ಇದೊಂದು ಅವಕಾಶವಾಗಿದೆ. ನಮ್ಮ ಉತ್ಪನ್ನವು ರೂಪ ಮತ್ತು ರುಚಿ ಎರಡರಲ್ಲೂ ಸರಿಸಾಟಿ ಇಲ್ಲ, ಭಾರತದಾದ್ಯಂತ ಟಿಫನ್‌ಗಾಗಿಯೇ ವಿಶೇಷವಾಗಿ ಪ್ಯಾಕ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
‘ಹರ್ ಟಿಫಿನ್ ಕಿ ಸ್ವೀಟ್ ಎಂಡಿಂಗ್’ ಅಭಿಯಾನವನ್ನು ದೇಶಾದ್ಯಂತ ವಿವಿಧ ಡಿಜಿಟಲ್ ಮಾಧ್ಯಮ ವೇದಿಕೆಗಳಲ್ಲಿ ವಿಸ್ತರಿಸಲಾಗುವುದು. ಈ ಅಭಿಯಾ ನವು ಗ್ರಾಹಕರನ್ನು ಅನುರಣಿಸುತ್ತದೆ ಮತ್ತು ತಮ್ಮ ಟಿಫಿನ್, ಊಟ ಮತ್ತು ತಿಂಡಿ ಬಾಕ್ಸ್‌ಗಳಲ್ಲಿ ಡಾರ್ಕ್ ಫ್ಯಾಂಟಸಿ ಕುಕೀಗಳನ್ನು ಸಿಹಿತಿಂಡಿಯಾಗಿ ಸೇರಿಸಲು ಪ್ರೇರೇಪಿಸುತ್ತದೆ ಎಂದು ಬ್ರ್ಯಾಂಡ್ ವಿಶ್ವಾಸ ಹೊಂದಿದೆ.