Wednesday, 11th December 2024

ಯೋಧರ ಕಾಲಿಗೆ ನಮಸ್ಕರಿಸಿದ ಪುಟ್ಟ ಬಾಲಕಿ !

ಬೆಂಗಳೂರು: ಯೋಧರನ್ನು ಕಂಡಾಗ ನಮ್ಮಲ್ಲಿ ಗೌರವ ಭಾವನೆ ಮೂಡುತ್ತದೆ. ಪುಟ್ಟ ಬಾಲಕಿಯೊಬ್ಬಳು ನಿಂತಿದ್ದ ಯೋಧರ ಬಳಿ ತೆರಳಿ ಅವರ ಕಾಲಿಗೆ ನಮಸ್ಕರಿಸಿದ್ದಾಳೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿದ್ದು, ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಪ್ಪು ಬಣ್ಣದ ಉಡುಪಿನಲ್ಲಿದ್ದ ಬಾಲಕಿ ಓಡುತ್ತಾ ಸೈನಿಕರ ಬಳಿಗೆ ಹೋಗಿ ನಿಲ್ಲುತ್ತಾಳೆ. ಅಲ್ಲಿಯೇ ತಮ್ಮ ಇನ್ನೊಬ್ಬರ ಸೈನಿಕರ ಜೊತೆ ಮಾತನಾಡುತ್ತ ನಿಂತಿದ್ದ ಸೈನಿಕರೊಬ್ಬರು ಮಗುವನ್ನು ನೋಡಿ ದಾಕ್ಷಣ ಬಾಲಕಿಯನ್ನು ಮಾತನಾಡಿಸುತ್ತಾರೆ.

ಸೈನಿಕರ ಮುಖ ನೋಡುತ್ತಿದ್ದ ಬಾಲಕಿ ಸೈನಿಕನ ಕಾಲಿಗೆ ನಮಸ್ಕರಿಸುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.