“ವಿಶ್ವ ಕಿಡ್ನಿ ದಿನ”ದ ಅಂಗವಾಗಿ ಫೋರ್ಟಿಸ್ ಆಸ್ಪತ್ರೆ ಹಾಗೂ ಮೋಹನ್ ಪ್ರತಿಷ್ಠಾನದ ಸಹಯೋಗದಲ್ಲಿ ಮಾನವನ ಚಿತಾಭಸ್ಮದಿಂದ ನಿರ್ಲಿಸಲಾದ “ಕಿಡ್ನಿ ಅಂಗವನ್ನು” ಖ್ಯಾತ ನಟಿ ತಾರಾ ಅವರು ಗುರುವಾರ ಫೋರ್ಟಿಸ್ ಆಸ್ಪತ್ರೆಯಲ್ಲಿ ಅನಾವರಣಗೊಳಿಸಿದರು.
ಆಸ್ಪತ್ರೆಯ ಮೂತ್ರಶಾಸ್ತ್ರ, ಯುರೋ-ಆಂಕೊಲಾಜಿ ಹಿರಿಯ ನಿರ್ದೇಶಕ ಡಾ ಮೋಹನ್ ಕೇಶವಮೂರ್ತಿ, ಹೆಚ್ಚುವರಿ ನಿರ್ದೇಶಕ ಡಾ. ಶಾಕಿರ್ ತಬ್ರೇಜ್, ಮೋಹನ್ ಫೌಂಡೇಶನ್ ನಿರ್ದೇಶಕ ಶ್ರೀಧರ್ ಹಂಚಿನಾಳ್, ಫೋರ್ಟಿಸ್ ಆಸ್ಪತ್ರೆ ಬಿಸಿನೆಸ್ ಹೆಡ್ ಅಕ್ಷಯ್ ಓಲೇಟಿ ಉಪಸ್ಥಿತರಿದ್ದರು.