Sunday, 13th October 2024

ತುಸು ಹೆಚ್ಚು ಅಭಿವ್ಯಕ್ತಿಗೊಳ್ಳುವಂತೆ ಬಳಕೆದಾರರನ್ನು ಆಹ್ವಾನಿಸುತ್ತಿದೆ ‘ಕೂ’ ಹೊಸ ಅಭಿಯಾನ!

ಬೆಂಗಳೂರು: ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಆಚರಿಸುತ್ತಾ, ಭಾರತದ ಅತ್ಯಂತ ಆತ್ಮೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ಗಳಲ್ಲಿ ಒಂದಾದ ಕೂ ವೇದಿಕೆ ರೋಮಾಂಚಕ ಅಭಿಯಾನವನ್ನು ಪ್ರಾರಂಭಿಸಿದೆ – #ತುಸುಹೆಚ್ಚುಸಾಮಾಜಿಕವಾಗೋಣ.

ಪ್ರೀತಿ ಇರಲಿ, ಅಪೇಕ್ಷೆ ಇರಲಿ ನಾವು ಭಾರತೀಯರು ಎಲ್ಲಾ ವಿಷಯದಲ್ಲೂ ಒಂದು ಮುಷ್ಟಿ ಹೆಚ್ಚು ತೋರ್ಪಡಿಸುತ್ತೇವೆ ಎನ್ನುವುದನ್ನು ಈ ಅಭಿಯಾನ ಸಾರುತ್ತದೆ. ಒಂದು ಅದ್ಭುತ ವಿಡಿಯೋ ಮೂಲಕ ಜನರು ತಮ್ಮ ಜೀವನದಲ್ಲಿ ಅನುಭವಿಸಿದ ಎಲ್ಲ ಹೆಚ್ಚಿನ ದನ್ನ ಮೆಲುಕುಹಾಕುವುದನ್ನು ಮತ್ತು ನೈಜ ಸಮಯದಲ್ಲಿ 10 ಭಾಷೆಗಳಲ್ಲಿ ಕೂ ಮಾಡುವ ಮೂಲಕ ತುಸು ಹೆಚ್ಚು ಅಭಿವ್ಯಕ್ತಿಸುವುದನ್ನು ಈ ಅಭಿಯಾನ ಪ್ರೇರೇಪಿಸು ತ್ತದೆ.

ವಿಡಿಯೋದ ಲಿಂಕ್ – https://www.youtube.com/shorts/P0o3HPVLRMs

ತಾಯಿಯೊಂದಿಗಿನ ತುಸು ಹೆಚ್ಚೆನಿಸುವ ನಾಟಕೀಯ ಮಾತುಗಳು, ಸಿನಿಮಾದ ವಿಶೇಷ ಹೆಚ್ಚುವರಿ ಡೈಲಾಗ್ ಗಳು, ಹೆಚ್ಚುವರಿ ನಿದ್ರೆ, ಗೋಲ್ ಗಪ್ಪಾಗಳನ್ನು ಸವಿಯುವಾಗ ಬಾಯಿ ಸೇರುವ ಹೆಚ್ಚುವರಿ ಪಾನಿ ಪೂರಿಗಳು..! ಹೀಗೆ ದಿನನಿತ್ಯದ ಜೀವನದ ಸನ್ನಿವೇಶ ಗಳು ಮತ್ತು ಸಂಭಾಷಣೆಗಳನ್ನು ಚಿತ್ರಿಸುವ ವಿಡಿಯೋ ಭಾರತೀಯರು ನಲುಮೆಯಿಂದ ಆನಂದಿಸುವ ಹೆಚ್ಚುವರಿ ಗಳನ್ನು ಆನಂದಗಳನ್ನು ಬಿಂಬಿಸುತ್ತದೆ.

ಬದುಕಿನ ಎಲ್ಲಾ ಹೆಚ್ಚುವರಿ ಆಂಶಗಳನ್ನು ಸಂಭ್ರಮಿಸುತ್ತ ಜೀವಿಸುವ ಬಳಕೆದಾರರನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಅಭಿವ್ಯಕ್ತಪಡಿಸುವ ಮೂಲಕ #ತುಸುಹೆಚ್ಚುಸಾಮಾಜಿಕವಾಗೋಣ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಕವನಗಳು, ಆಧ್ಯಾತ್ಮಿಕತೆ, ಸಂಗೀತ ಅಥವಾ ಪಾಕವಿಧಾನಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸುವ ಬಳಕೆದಾರರನ್ನು ಕೂ ವೇದಿಕೆ ಒಳಗೊಂಡಿದೆ, ಹಾಗಾಗಿ ಈ ಅಭಿಯಾನ ಇಡೀ ಭಾರತದೊಂದಿಗೆ ಸಂಪರ್ಕವನ್ನು ಸಾಧಿಸುತ್ತದೆ.

ಭಾಷೆಯ ಗಡಿಯನ್ನು ಮೀರಲು ಈ ಅಭಿಯಾನವು ಪ್ರೇರಣೆ ನೀಡುವ ಮೂಲಕ ಇತರ ರಾಜ್ಯಗಳ, ಸಂಸ್ಕೃತಿಗಳ ಜನರೊಂದಿಗೆ ಸಂವಹನ ನಡೆಸಲು ಮತ್ತು ಭಾರತವನ್ನು ಅರಿಯಲು ಕೂ ವೇದಿಕೆ ಆಳವಾದ ಸಾಮಾಜಿಕ ಸಂಪರ್ಕವನ್ನು ನಿರ್ಮಿಸುತ್ತದೆ. ಈಗ ಕೂ ಜೊತೆಗೆ ಭಾರತ ಯಾವಾಗಲೂ ತುಸುಹೆಚ್ಚು ಸಾಮಾಜಿಕವಾಗಿರಲಿದೆ ಎಂಬ ಸಂದೇಶದ ಸುತ್ತ #ತುಸುಹೆಚ್ಚುಸಾಮಾಜಿಕ ವಾಗೋಣ ಅಭಿಯಾನವನ್ನು ಹೆಣೆಯಲಾಗಿದೆ.

#ತುಸುಹೆಚ್ಚುಸಾಮಾಜಿಕವಾಗೋಣ – ವೇದಿಕೆಯ ಅಂತರ್ಗತ ಸ್ವರೂಪವನ್ನು ಎತ್ತಿ ತೋರಿಸುತ್ತದೆ, ಇದು ಪ್ರತಿಯೊಬ್ಬ ಇಂಟರ್ನೆಟ್ ಬಳಕೆದಾರರಿಗೆ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮವನ್ನು ಅನುಭವಿಸಲು ಮತ್ತು ಆನಂದಿಸಲು ಮುಕ್ತ ಅವಕಾಶ ನೀಡುತ್ತದೆ. ಆರಾಮದಾಯಕ ಭಾಷೆಯಲ್ಲಿ ಮತ್ತು ಆಯ್ಕೆಯ ವಿಷಯದಲ್ಲಿ ವ್ಯಕ್ತಪಡಿಸಲು ಸ್ವಾತಂತ್ರ್ಯವನ್ನೂ ಒದಗಿಸುತ್ತದೆ.

ಕೂ ಬಗ್ಗೆ ಕೂ ಬಹು-ಭಾಷಾ, ಮೈಕ್ರೋ-ಬ್ಲಾಗಿಂಗ್ ವೇದಿಕೆಯನ್ನು ಮಾರ್ಚ್ 2020 ರಲ್ಲಿ ಭಾರತೀಯರು ತಮ್ಮ ಮಾತೃಭಾಷೆ ಯಲ್ಲಿಯೇ ಆನ್‌ಲೈನ್‌ನಲ್ಲಿ ತಮ್ಮ ಮನದಾಳವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರಾರಂಭಿಸಲಾಯಿತು. ಕೂ ಭಾಷಾ ಆಧಾರಿತ ಮೈಕ್ರೋ-ಬ್ಲಾಗಿಂಗ್‌ನ ಆವಿಷ್ಕಾರಕವಾಗಿದ್ದು ಕೂ ಅಪ್ಲಿಕೇಶನ್‌ನ ಸ್ಮಾರ್ಟ್ ವೈಶಿಷ್ಟ್ಯಗಳು ಪ್ರಸ್ತುತ 10 ಭಾಷೆಗಳಲ್ಲಿ ಲಭ್ಯವಿದೆ – ಹಿಂದಿ, ಮರಾಠಿ, ಗುಜರಾತಿ, ಪಂಜಾಬಿ, ಕನ್ನಡ, ತಮಿಳು, ತೆಲುಗು, ಅಸ್ಸಾಮಿ, ಬೆಂಗಾಲಿ ಮತ್ತು ಇಂಗ್ಲಿಷ್ ಸೇರಿದಂತೆ ಕೂ ಅಪ್ಲಿಕೇಶನ್ ಭಾರತೀಯರ ಧ್ವನಿಗೆ ಒಂದು ಉತ್ತಮ ವೇದಿಕೆಯನ್ನು ಒದಗಿಸುವ ಮೂಲಕ ತಮ್ಮ ಆಲೋಚನೆಗಳನ್ನು ತಮ್ಮ ಆಯ್ಕೆಯ ಭಾಷೆಯಲ್ಲಿಯೇ ಮುಕ್ತವಾಗಿ ವ್ಯಕ್ತಪಡಿಸಲು ಅವರಿಗೆ ಅವಕಾಶ ನೀಡುತ್ತದೆ.

ಕೂ ನಲ್ಲಿನ ನವೀನ ವೈಶಿಷ್ಟ್ಯಗಳಲ್ಲಿ, ವೇದಿಕೆಯ ಅನುವಾದ ವೈಶಿಷ್ಟ್ಯವು ಮೂಲ ಪಠ್ಯದ ಭಾವನೆ ಮತ್ತು ಸಂದರ್ಭಕ್ಕೆ ಧಕ್ಕೆ ಬಾರದಂತೆ ಮೂಲ ಅರ್ಥವನ್ನು ಉಳಿಸಿಕೊಂಡು ಭಾರತೀಯ ಭಾಷೆಗಳಾದ್ಯಂತ ಪೋಸ್ಟ್‌ನ ನೈಜ-ಸಮಯದ ಅನುವಾದಕ್ಕೆ ಅನುಕೂಲಕರವಾಗಿದೆ. ಇದು ಭಾಷೆಗಳಾದ್ಯಂತ ಜನರ ತಲುಪುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚಿನ ಆಕರ್ಷಣೆಯನ್ನು ಒದಗಿಸುತ್ತದೆ. ಕೂ ಅಪ್ಲಿಕೇಶನ್ 30 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದಿದೆ. ರಾಜಕೀಯ, ಕ್ರೀಡೆ, ಮಾಧ್ಯಮ, ಮನರಂಜನೆ, ಆಧ್ಯಾತ್ಮಿಕತೆ ಮತ್ತು ಕಲೆ ಮತ್ತು ಸಂಸ್ಕೃತಿ ಸೇರಿದಂತೆ 7000 ಕ್ಕೂ ಹೆಚ್ಚು ಗಣ್ಯ ವ್ಯಕ್ತಿಗಳಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಸ್ಥಳೀಯ ಭಾಷೆಯಲ್ಲಿ ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಉತ್ತಮ ವೇದಿಕೆಯಾಗಿದೆ.