ಬ್ಲಾಕ್+ಡೆಕರ್ ಹಾಗೂ ಇಂದ್ಕಲ್ ಟೆಕ್ನಾಲಜೀಸ್ ಭಾರತದಲ್ಲಿ ಬೃಹತ್ ಸಾಧನಗಳ ಬಿಡುಗಡೆ ಮತ್ತು ಲಭ್ಯತೆಗೆ ಲೈಸೆನ್ಸಿಂಗ್ ಸಹಯೋಗದ ಪ್ರವೇಶದ ಪ್ರಕಟಣೆ
• ಈ ಲೈಸೆನ್ಸಿಂಗ್ ಸಹಯೋಗದಲ್ಲಿ ಏರ್ ಕಂಡೀಷನರ್ ಗಳು, ಲಾಂಡ್ರಿ ಮೆಷಿನ್ ಗಳು ಮತ್ತು ರೆಫ್ರಿಜಿರೇಟರ್ ಗಳು ಒಳಗೊಂಡಿವೆ.
ಬೆಂಗಳೂರು: ಪವರ್ ಟೂಲ್ಸ್, ಗೃಹ ಉತ್ಪನ್ನಗಳು ಮತ್ತು ಹೊರಾಂಗಣ ವಿದ್ಯುತ್ ಸಾಧನದ ಜಾಗತಿಕ ಮುಂಚೂಣಿಯ ಬ್ಲಾಕ್+ಡೆಕರ್ ಬೆಂಗಳೂರು ಮೂಲದ ಮುಂಚೂಣಿಯ ತಂತ್ರಜ್ಞಾನ ಹಾಗೂ ಆವಿಷ್ಕಾರದ ಕಂಪನಿ ಇಂದ್ಕಲ್ ಟೆಕ್ನಾಲಜೀಸ್ ನೊಂದಿಗೆ ಲೈಸೆನ್ಸಿಂಗ್ ಸಹಯೋಗ ಹೊಂದಿದ್ದು ಭಾರತದಲ್ಲಿ ಗ್ರಾಹಕರಿಗೆ ಪ್ರೀಮಿಯಂ ಶ್ರೇಣಿಯ ಬೃಹತ್ ಸಾಧನಗಳನ್ನು ತರಲಿದೆ.
“ಗೃಹ ಉತ್ಪನ್ನಗಳಲ್ಲಿ ಜಾಗತಿಕ ನಾಯಕನಾಗಿ ನಾವು ನಮ್ಮ ಗ್ರಾಹಕರಿಗೆ ಲಭ್ಯತೆಯನ್ನು ಈ ಪ್ರದೇಶಕ್ಕೆ ವಿಸ್ತರಿಸುವ ಮೂಲಕ ಆದ್ಯತೆಯನ್ನು ಮುಂದುವರಿಸಿದ್ದೇವೆ” ಎಂದು ಸ್ಟ್ಯಾನ್ಲಿ ಬ್ಲಾಕ್ ಅಂಡ್ ಡೆಕರ್‌ನ ಲೈಸೆನ್ಸಿಂಗ್ ಕಮರ್ಷಿಯಲ್ ಡೈರೆಕ್ಟರ್ ಅಮಿತ್ ದತ್ತಾ ಹೇಳಿದರು. ನಾವು ಬ್ರಾಂಡ್ ಪೋರ್ಟ್ಫೋಲಿಯೊ ವಿಸ್ತರಿಸಿ ಮತ್ತು ಎಲ್ಲ ಗೃಹ ಕೆಲಸಗಳಿಗೆ ಈ ಹೊಸ ಉತ್ಪನ್ನ ಕೊಡುಗೆಗಳ ಮೂಲಕ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಬದ್ಧರಾಗಿದ್ದೇವೆ” ಎಂದರು.
“ನಾವು ಸ್ಟ್ಯಾನ್ಲಿ ಬ್ಲಾಕ್ ಅಂಡ್ ಡೆಕರ್‌ನೊಂದಿಗೆ ಈ ಉತ್ಸಾಹಕರ ಉದ್ಯಮಕ್ಕೆ ಜೊತೆಯಲ್ಲಿ ಕೆಲಸ ಮಾಡಲು ಬಹಳ ಸಂತೋಷ ಹೊಂದಿದ್ದೇವೆ. ಬ್ಲಾಕ್+ಡೆಕರ್ ಬ್ರಾಂಡ್ ತನ್ನ ತಂತ್ರಜ್ಞಾನ ಹಾಗೂ ವಿನ್ಯಾಸದ ಪರಿಪೂರ್ಣ ಸಂಯೋಜನೆಯ ಮಹತ್ತರ ಉತ್ಪನ್ನಗಳಿಗೆ ಖ್ಯಾತಿ ಪಡೆದಿದೆ” ಎಂದು ಇಂದ್ಕಲ್ ಟೆಕ್ನಾಲಜೀಸ್‌ನ ಸಿಇಒ ಆನಂದ್ ದುಬೇ ಹೇಳಿದರು.
“ಹೊಸದಾಗಿ ಬಿಡುಗಡೆ ಯಾದ ಗೃಹಸಾಧನಗಳ ಶ್ರೇಣಿಯು ಸುಂದರ ಹಾಗೂ ಪ್ರೀಮಿಯಂ ಫೀಲ್ ನೀಡುವುದೇ ಅಲ್ಲದೆ ಕಾರ್ಯ ನಿರ್ವಹಣೆ ಮತ್ತು ಅಸಂಖ್ಯ ಅಂತರ್ಬೋಧೆಯ ವಿಶೇಷತೆಗಳನ್ನು ಹೊಂದಿವೆ. ಗ್ರಾಹಕರು ಈ ಉತ್ಪನ್ನಗಳ ಅನುಭವ ಪಡೆಯು ವುದನ್ನು ನೋಡಲು ಕಾತುರರಾಗಿದ್ದೇವೆ” ಎಂದರು.
ವಾಷಿಂಗ್ ಮೆಷಿನ್‌ಗಳು: ಬ್ಲಾಕ್+ಡೆಕರ್ ವಾಷಿಂಗ್ ಮೆಷಿನ್ ಶ್ರೇಣಿಯಲ್ಲಿ ಎರಡು ಫ್ರಂಟ್ ಲೋಡ್ ಮಾಡೆಲ್‌ಗಳು 6ಕೆಜಿ ಮತ್ತು 8ಕೆಜಿ ಸಾಮರ್ಥ್ಯಗಳಲ್ಲಿವೆ ಮತ್ತು ಒಂದು ಟಾಪ್ ಲೋಡ್ ಮಾಡೆಲ್ 7.5 ಕೆಜಿ ಸಾಮರ್ಥ್ಯದಲ್ಲಿದೆ. ಫ್ಲಾಗ್ ಶಿಪ್ ಫ್ರಂಟ್-ಲೋಡ್ ಯಂತ್ರಗಳನ್ನು ಈ ವಿಭಾಗವನ್ನು ವ್ಯಾಖ್ಯಾನಿಸುವ ಉನ್ನತ ಬಿ.ಎಲ್.ಡಿ.ಸಿ ಮೋಟಾರ್ ಹೆಕ್ಸ್-ನೆಟ್ ಕ್ರಿಸ್ಟಲ್ ವಿನ್ಯಾಸದ ಸುಧಾ ರಿತ ಟಬ್ ಮತ್ತು ಟ್ರಿಪಲ್ ವೆಲಾಸಿಟಿ ಜೆಟ್ ಸಿಸ್ಟಂನಂತಹ ವಿಶೇಷತೆಗಳನ್ನು ಹೊಂದಿದೆ. ಈ ಯಂತ್ರಗಳು ಬಿಲ್ಟ್-ಇನ್ ಹಿಟರ್, ಫ್ಯಾಬ್ರಿಕ್ ಸ್ಪೆಸಿಫಿಕ್ ಸ್ಮಾರ್ಟ್ ವಾಷ್ ಪ್ರೋಗ್ರಾಮ್ಸ್ ಮತ್ತು ಹೈಜೆನಿಕ್ ಡ್ರಮ್ ಕ್ಲೀನ್ ಹೊಂದಿವೆ.
ಏರ್ ಕಂಡೀಷನರ್ ಗಳು: ವಿನ್ಯಾಸ ಮತ್ತು ಕಾರ್ಯವನ್ನು ಒಟ್ಟಿಗೆ ತರುವ 3 ಬ್ಲಾಕ್+ಡೆಕರ್ ಏರ್ ಕಂಡೀಷನರ್ ಮಾಡೆಲ್ ಗಳಲ್ಲಿ 1.5 ಟನ್ ಮತ್ತು 2.0 ಟನ್ ಒಳಗೊಂಡಿದ್ದು 1.5 ಟನ್ ಎರಡು ಬದಲಾವಣೆಗಳಲ್ಲಿ ಲಭ್ಯವಿದೆ. ಸರಳ, ಕನಿಷ್ಠಾತ್ಮಕ ವಿನ್ಯಾಸದೊಂದಿಗೆ ಪ್ರಮುಖ ವಿಶೇಷತೆಗಳಲ್ಲಿ ಇನ್ಫಿನಿಟಿ ಇಂಪೆಲ್ಲರ್, ಕ್ಯಾಡ್ ಸೆನ್ಸರ್, ಕ್ವಾಡ್-ಕನ್ವರ್ಟಿಬಲ್ ಮತ್ತು ಆರ್32 ಇಕೊ ಫ್ರೆಂಡ್ಲಿ ರೆಫ್ರಿಜಿರೆಂಟ್ ಒಳಗೊಂಡಿದೆ.
ಎಲ್ಲ ಬ್ಲಾಕ್+ಡೆಕರ್ ಲಾರ್ಜ್ ಅಪ್ಲಯನ್ಸ್ ಗಳು ಉದ್ಯಮದ ಮುಂಚೂಣಿಯ ವಾರೆಂಟಿ ಮತ್ತು ಸೇವಾ ನಿಯಮಗಳೊಂದಿಗೆ ಬಂದಿವೆ. ಎಲ್ಲ ಉತ್ಪನ್ನಗಳೂ ಮೋಟಾರ್‌ಗಳು ಮತ್ತು ಕಂಪ್ರೆಸರ್ ಗಳ ಮೇಲೆ ಕ್ರಮವಾಗಿ ವಾಷಿಂಗ್ ಮೆಷಿನ್‌ಗಳು ಮತ್ತು ಏರ್ ಕಂಡೀಷನರ್‌ಗಳಿಗೆ 10 ವರ್ಷಗಳ ವಾರೆಂಟಿ ಹೊಂದಿವೆ. ಈ ಉತ್ಪನ್ನಗಳು ಸಮಗ್ರ 2 ವರ್ಷಗಳ ವಾರೆಂಟಿ ಮತ್ತು 5 ವರ್ಷಗಳ ಮೈನ್ ಬೋರ್ಡ್ ವಾರೆಂಟಿ ಹೊಂದಿದ್ದು ಎಲ್ಲ ಬ್ಲಾಕ್+ಡೆಕರ್ ಲಾರ್ಜ್ ಅಪ್ಲಯನ್ಸಸ್ ಗ್ರಾಹಕರಿಗೆ ಗುಣಮಟ್ಟದ ಭರವಸೆ ಮತ್ತು ಮನಃಶ್ಯಾಂತಿಯನ್ನು ಎಲ್ಲ ಮಹತ್ತರ ಫೀಚರ್‌ಗಳು ಮತ್ತು ವಿನ್ಯಾಸಗಳೊಂದಿಗೆ ನೀಡುತ್ತದೆ.
ಇಂದ್ಕಲ್ ನ ಬ್ಲಾಕ್+ಡೆಕರ್ ಉತ್ಪನ್ನಗಳ ಹೊಸ ಸಂಗ್ರಹವು ಅಮೆಜಾನ್.ಇನ್ ಮತ್ತು ಫ್ಲಿಪ್‌ಕಾರ್ಟ್.ಇನ್ ಮತ್ತು ಇನ್-ಸ್ಟೋರ್ ಚಾನೆಲ್‌ಗಳಲ್ಲಿ ಜೂನ್ 3ರಿಂದ ಲಭ್ಯವಿವೆ.
ಲೈಸೆನ್ಸಿಂಗ್ ಸಹಯೋಗವನ್ನು ಸ್ಟ್ಯಾನ್ಲಿ ಬ್ಲಾಕ್ ಅಂಡ್ ಡೆಕರ್ ಪರವಾಗಿ ಭಾರತದ ಮುಂಚೂಣಿಯ ಬ್ರಾಂಡ್ ಲೈಸೆನ್ಸಿಂಗ್ ಏಜೆನ್ಸಿ ಲೈಸೆನ್ಸ್ ವರ್ಕ್ಸ್ ಸಮನ್ವಯಗೊಳಿಸಿದೆ.