Friday, 19th July 2024

ರೈತರಿಗೆ ಗುರಿ ಮೀರಿ ಸಾಲ ಕೊಟ್ಟಿದ್ದೇವೆ, ನುಡಿದಂತೆ ನಡೆದಿದ್ದೇವೆ: ಸಚಿವ ಎಸ್ ಟಿ ಎಸ್

• ರೈತರಿಗೆ ಸಂತಸದ ಸುದ್ದಿ, ನಿಗದಿತ ಗುರಿಗಿಂತ ಹೆಚ್ಚಿನ ಸಾಲ
• 24.36 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿ ಇತ್ತು
• 25.67 ಲಕ್ಷ ರೈತರಿಗೆ 17,260 ಕೋಟಿ ರೂಪಾಯಿ ಸಾಲ ನೀಡಿಕೆ
• ಹೆಚ್ಚುವರಿಯಾಗಿ 1.31 ಲಕ್ಷ ರೈತರಿಗೆ 1960.48 ಕೋಟಿ ರೂ. ಸಾಲ ವಿತರಣೆ
• ಆತ್ಮನಿರ್ಭರ ಯೋಜನೆ ಜಾರಿಯಲ್ಲಿಯೂ ಕರ್ನಾಟಕವೇ ಮುಂದು

ಬೆಂಗಳೂರು: ರೈತರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಕೋವಿಡ್ 19ರ ಸಂಕಷ್ಟದ ಕಾಲದಲ್ಲಿಯೂ ನಮ್ಮ ಶ್ರಮ ಸಾರ್ಥಕವಾಗಿದೆ. ಪ್ರಸಕ್ತ ಸಾಲಿನಲ್ಲಿ 24.36 ಲಕ್ಷ ರೈತರಿಗೆ ಅಲ್ಪಾವಧಿ, ದೀರ್ಘಾವಧಿ, ಬೆಳೆಸಾಲವಾಗಿ 15,300 ಕೋಟಿ ರೂಪಾಯಿ ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಏ.04 ರ ವರೆಗೆ 2567413 ರೈತರಿಗೆ 17,260.48 ಕೋಟಿ ರೂ. ಸಾಲ ನೀಡುವ ಮೂಲಕ ಗುರಿಗಿಂತ ಹೆಚ್ಚಿನ ರೈತರಿಗೆ ಹೆಚ್ಚಿನ ಮೊತ್ತದ ಸಾಲ ನೀಡಿದ್ದೇವೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ 2020-21ನೇ ಆರ್ಥಿಕ ವರ್ಷ ಪ್ರಾರಂಭವಾಗುವ ಹೊಸ್ತಿಲಲ್ಲೇ ಕೊರೋನಾ ಮಹಾಮಾರಿ ವಿಶ್ವದಾ ದ್ಯಂತ ಆವರಿಸಿಕೊಂಡು ಆರ್ಥಿಕ ನಷ್ಟವನ್ನು ತಂದೊಡ್ಡಿತ್ತು. ಇಂತಹ ಸಮಯದಲ್ಲಿಯೂ ಸಹ ನಮ್ಮ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮದಿಂದ ಇಂದು ಎಲ್ಲ ರೈತ ಬಾಂಧವರಿಗೆ ಸಾಲ ಲಭ್ಯವಾಗುವಂತಾಗಿದೆ ಎಂದು ಸಚಿವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಹೆಚ್ಚುವರಿ 1 ಲಕ್ಷ ರೈತರಿಗೆ ಸಾಲ..!
ಈಗಾಗಲೇ ಹಾಕಿಕೊಂಡಿರುವ 15,300 ಕೋಟಿ ರೂಪಾಯಿ ಸಾಲ ನೀಡಿಕೆ ಗುರಿಯನ್ನು ಮೀರಿ ಸಾಲವನ್ನು ವಿತರಣೆ ಮಾಡಲಾ ಗಿದ್ದು, 2567413 ರೈತರಿಗೆ 17,260.48 ಕೋಟಿ ರೂ. ಸಾಲ ನೀಡಲಾಗಿದೆ. ಅಂದರೆ, ಒಟ್ಟು 1,31,413 ರೈತರಿಗೆ 1960.48 ಕೋಟಿ ರೂಪಾಯಿ ಸಾಲವನ್ನು ಹೆಚ್ಚುವರಿಯಾಗಿ ವಿತರಣೆ ಮಾಡಿದಂತಾಗಿದೆ. ಇದನ್ನು ನಾವು ಅಭೂತಪೂರ್ವ ಯಶಸ್ಸು ಎಂದೇ ಹೇಳಬಹುದು. ಈ ಸಾಧನೆಗೆ ಎಲ್ಲ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ ಎಂದು ಸಚಿವ ರಾದ ಸೋಮಶೇಖರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ: ಎಲ್ಲ ರೈತ ಫಲಾನುಭವಿಗಳಿಗೂ ಸಾಲ ಸಿಗಬೇಕೆಂಬ ಸದುದ್ದೇಶದಿಂದ ನಾನು ಪ್ರತಿ ಜಿಲ್ಲೆಗಳಿಗೆ ಭೇಟಿ ನೀಡಿ ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದೇನೆ. ಸಹಕಾರಿ ನಡಿಗೆ ಡಿಸಿಸಿ ಬ್ಯಾಂಕ್ ಕಡೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ನಾನೇ ಸ್ವತಃ ಸಭೆ ನಡೆಸಿ ರೈತರಿಗೆ ನೀಡಲಾದ ಸಾಲದ ವಿವರಗಳನ್ನು ಪಡೆದುಕೊಂಡಿದ್ದೆ. ಎಲ್ಲಿ ಗುರಿ ಸಾಧಿಸಲಾಗಿಲ್ಲವೋ ಅಲ್ಲೆಲ್ಲ ಸಲಹೆ-ಸೂಚನೆಗಳನ್ನು ನೀಡಿ ಬಂದಿದ್ದೆ ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದರು.

ಕಾರ್ಯವೈಖರಿ ತೃಪ್ತಿ ತಂದಿದೆ: ರೈತರಿಗೆ ಎಷ್ಟು ಪ್ರಮಾಣದಲ್ಲಿ, ಯಾವ ಯಾವ ವಿಭಾಗದಲ್ಲಿ ಸಾಲ ನೀಡಲಾಗಿದೆ. ಬಡವರ ಬಂಧು, ಕಾಯಕ, ಎಸ್ ಸಿ ಎಸ್ ಟಿ  ಯೋಜನೆಗಳಿಗೆ ಸಾಲ ನೀಡಿಕೆ ಪ್ರಮಾಣ ಹೇಗಿದೆ ಎಂಬಿತ್ಯಾದಿ ಎಲ್ಲ ವಿಷಯಗಳ ಬಗ್ಗೆ ಅಧಿಕಾರಿಗಳಿಂದ ಈ ಸಂದರ್ಭದಲ್ಲಿ ಮಾಹಿತಿ ಪಡೆದು, ಶೀಘ್ರದಲ್ಲಿ ಗುರಿಯನ್ನು ತಲುಪುವಂತೆಯೂ ಸೂಚನೆ ನೀಡಿದ್ದೆ. ಇದೀಗ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿ ತಂದಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ಪ್ರತಿದಿನ ಸಚಿವರ ಫಾಲೋಅಪ್
ಅಪೆಕ್ಸ್ ಬ್ಯಾಂಕ್, 21 ಡಿಸಿಸಿ ಬ್ಯಾಂಕ್ ನಿಂದ ಕಳೆದ ಒಂದು ವರ್ಷದಿಂದ ಪ್ರತಿದಿನ ಸಂಜೆ 6 ಗಂಟೆಗೆ ರೈತರಿಗೆ ಸಾಲ ನೀಡಿಕೆ ಬಗ್ಗೆ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸುತ್ತಾ ಬಂದಿದ್ದರು. ಈ ವೇಳೆ, ರೈತರಿಗೆ ಎಷ್ಟು ಸಾಲವನ್ನು ಕೊಡಲಾಗುತ್ತಿದೆ, ಹೊಸ ರೈತರಿಗೆ ಎಷ್ಟು ಸಾಲವನ್ನು ವಿತರಣೆ ಮಾಡಲಾಗಿದೆ? ಯಾವ ಯಾವ ಯೋಜನೆಗಳಡಿ ಸಾಲ ವಿತರಣೆ ಮಾಡಲಾಗುತ್ತಿದೆ..? ಗುರಿ ಮುಟ್ಟಲಾಗಿದೆಯೇ ಎಂಬಿತ್ಯಾದಿ ಅಂಶಗಳನ್ನು ಗಮನಿಸಿ ಸೂಕ್ತ ನಿರ್ದೇಶನ ಮಾಡುತ್ತಾ ಬಂದಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಡಿಸಿಸಿ, ಅಪೆಕ್ಸ್ ಬ್ಯಾಂಕ್ ಗಳ ಎಂಡಿಗಳು, ಹಿರಿಯ ಅಧಿಕಾರಿಗಳ ಜೊತೆ ತ್ರೈಮಾಸಿಕ ಸಭೆ ಹಮ್ಮಿಕೊಂಡು ಪ್ರಗತಿ ಪರಿಶೀಲನೆ ಸಭೆಯನ್ನು ಸಚಿವರಾದ ಸೋಮಶೇಖರ್ ಅವರು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ಕಂದಾಯ ವಿಭಾಗಗಳಿಗೆ ಸಚಿವರು ಸ್ವತಃ ಭೇಟಿ ಕೊಟ್ಟು ಪ್ರಗತಿ ಪರಿಶೀಲನೆ ನಡೆಸಿ ಸೂಚನೆಗಳನ್ನು ನೀಡಿದ್ದಾರೆ. ಈ ವೇಳೆ ಗಮನಕ್ಕೆ ಬರುವ ಸಮಸ್ಯೆಗಳಿಗೆ ತುರ್ತು ಸ್ಪಂದಿಸಿ ಪರಿಹರಿಸುವ ಕೆಲಸವನ್ನು ಮಾಡಿದ್ದಾರೆ. ಇದರ ಪರಿಣಾಮ ಶೇಕಡಾ ನೂರು ಗುರಿ ಮೀರಿ ಸಾಲ ವಿತರಣೆಯಾಗಲು ಅನುಕೂಲವಾಗಿದೆ.

ಆತ್ಮನಿರ್ಭರದಲ್ಲಿ ಸಾಧನೆ; ಎಸ್ ಟಿ ಎಸ್ ಮಾಹಿತಿ
* ಕೇಂದ್ರ ಸರ್ಕಾರ, ನಬಾರ್ಡ್ ನಿಂದಲೂ ಪ್ರಶಂಸೆ

ಆತ್ಮ ನಿರ್ಭರ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮುಂದಿದೆ. ಈ ಮೂಲಕ ಯೋಜನೆ ಅನುಷ್ಠಾನ ದಲ್ಲಿ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕೇಂದ್ರ ಹಾಗೂ ನಬಾರ್ಡ್ ಸಹ ಶ್ಲಾಘನೆ ವ್ಯಕ್ತಪಡಿಸಿದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಇದೇ ವೇಳೆ ಮಾಹಿತಿ ನೀಡಿದರು.

ಆತ್ಮನಿರ್ಭರ ಯೋಜನೆಯಡಿ 1 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಪ್ರತಿ ಸಂಘಕ್ಕೆ 2 ಕೋಟಿ ರೂಪಾಯಿ ಯಂತೆ ಸಾಲ ನೀಡಿಕೆಗೆ ಅವಕಾಶವಿದ್ದು, ಈ ಪೈಕಿ 1549 ಸಹಕಾರ ಸಂಘಗಳನ್ನು ಗುರುತಿಸಿ, 949 ಪ್ಯಾಕ್ಸ್ ಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಇದರಲ್ಲಿ 614 ಪ್ಯಾಕ್ಸ್ ಗಳಿಗೆ 198.96 ಕೋಟಿ ರೂಪಾಯಿ ಮಂಜೂರಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ

ಹೀಗಾಗಿ ಇದರ ಅನುಷ್ಠಾನಕ್ಕಾಗಿ 21 ಡಿಸಿಸಿ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮುಖಾಂತರ ಸಮರ್ಪಕವಾಗಿ ಕಾರ್ಯನಿರ್ವಹಿಸಿವೆ. ಇದಕ್ಕೋಸ್ಕರ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಸಚಿವರಾದ ಸೋಮಶೇಖರ್ ಹೇಳಿದ್ದಾರೆ

ಗುರಿ ಮುಟ್ಟದ ಬ್ಯಾಂಕ್ ಗಳಿಗೆ ವಾರಕ್ಕೊಮ್ಮೆ ಭೇಟಿ
ಆತ್ಮನಿರ್ಭರ ಯೋಜನೆಯ ಸಾಧನೆಯಾಗಬೇಕೆಂದರೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಕ್ರೆಡಿಟ್ ಸೊಸೈಟಿಗಳು ಹಾಗೂ ಅರ್ಬನ್ ಬ್ಯಾಂಕ್ ಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಯಾವ ಜಿಲ್ಲೆಯ ಬ್ಯಾಂಕ್ ಗಳು ಗುರಿ ಮುಟ್ಟಿಲ್ಲವೋ ಅಂಥ ಕಡೆ ಗಳಲ್ಲಿ ನೋಡಲ್ ಅಧಿಕಾರಿಗಳು ವಾರಕ್ಕೊಮ್ಮೆಯಂತೆ ಭೇಟಿ ನೀಡಿ ಪ್ರಗತಿ ಸಾಧಿಸಬೇಕೆಂಬ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು

ಅಭೂತಪೂರ್ವ ಯಶಸ್ಸು
ಆರ್ಥಿಕ ಸ್ಪಂದನ ಯೋಜನೆಯಡಿ ಬಹುತೇಕ ಡಿಸಿಸಿ ಬ್ಯಾಂಕ್ ಗಳು, ಅಪೆಕ್ಸ್ ಬ್ಯಾಂಕ್ ಗಳು ಹಾಗೂ ನಬಾರ್ಡ್ ನಿಂದ ಉತ್ತಮ ಸಾಧನೆ ತೋರಿದ್ದು, ಶೇ. 96 ಗುರಿ ಮುಟ್ಟಲಾಗಿದೆ. ಅಂದರೆ 2020-21ನೇ ಸಾಲಿಗೆ 39,072 ಕೋಟಿ ಮೊತ್ತದ ಸಾಲ ವಿತರಣೆ ಗುರಿಯಲ್ಲಿ 37366 ಕೋಟಿ ರೂಪಾಯಿ ಸಾಲ ವಿತರಣೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದಕ್ಕೆ ಸಹಕಾರ ವಲಯದ ಎಲ್ಲ ಬ್ಯಾಂಕ್ ಗಳು ಅತ್ಯುತ್ತಮವಾಗಿ ಕೆಲಸ ಮಾಡಿರುವುದರಿಂದ ಇದೀಗ ಕರ್ನಾಟಕವು ದೇಶದಲ್ಲಿಯೇ ಮೊದಲ ಸ್ಥಾನ ಗಳಿಸಿದೆ. ನಾವು ಇದೇ ಸಾಧನೆಯನ್ನು ಮುಂದೂ ಇಟ್ಟುಕೊಳ್ಳಬೇಕಿದ್ದು, ಆ ನಿಟ್ಟಿನಲ್ಲಿ ಶ್ರಮ ಹಾಕಲು ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ಸಚಿವರಾದ ಸೋಮಶೇಖರ್ ಅವರು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳಿಂದ ಅಭಿನಂದನೆ
ರೈತರಿಗೆ ಕಾಲ ಕಾಲಕ್ಕೆ ಸಾಲಸೌಲಭ್ಯ ಲಭಿಸಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಂಡಿರುವ ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಅಭಿನಂದನೆ ಸಲ್ಲಿಸಿ ದ್ದಾರೆ. ಅಲ್ಲದೆ, ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಹೆಚ್ಚುವರಿ ಗುರಿಯನ್ನು ಮುಟ್ಟುವ ಮೂಲಕ ಜನಪರ, ರೈತಪರ ಕೆಲಸ ಮಾಡಿದ್ದಾಗಿ ಅಭಿನಂದಿಸಿದ್ದಲ್ಲದೆ, ಮುಂದೂ ಸಹ ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುವಂತೆ ಬೆನ್ನುತಟ್ಟಿ ದ್ದಾರೆ.

2020-21 ಕೃಷಿ ಸಾಲ ವಿತರಣೆ ವಿವರ
ಕೃಷಿ ಸಾಲಗಳ ವಿತರಣೆ: ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೂ.3 ಲಕ್ಷಗಳ ಬೆಳೆ ಸಾಲ ಮತ್ತು ಶೇ.3 ರ ಬಡ್ಡಿ ದರದಲ್ಲಿ ರೂ.10 ಲಕ್ಷಗಳ ವರೆಗಿನ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲ ವಿತರಿಸಲಾಗುತ್ತಿದೆ.

2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ.14500 ಕೋಟಿ ಅಲ್ಪಾವಧಿ ಬೆಳೆ ಸಾಲ ವಿತರಣೆ ಮತ್ತು 0.70 ಲಕ್ಷ ರೈತರಿಗೆ ಶೇ.3 ರ ಬಡ್ಡಿ ದರದಲ್ಲಿ 1200 ಕೋಟಿ ಮಧ್ಯಮಾವಧಿ/ ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಿದ್ದು, ಇಲ್ಲಿಯವರೆಗೆ ವರೆಗೆ ಒಟ್ಟು 25.24 ಲಕ್ಷ ರೈತರಿಗೆ ರೂ.16191.35 ಕೋಟಿಗಳ ಅಲ್ಲಾವಧಿ ಕೃಷಿ ಸಾಲ ಮತ್ತು 0.43 ಲಕ್ಷ ರೈತರಿಗೆ ರೂ.1069.13 ಕೋಟಿಗಳ ಮಧ್ಯಮಾವಧಿ/ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಶೇ.100 ಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸ ಲಾಗಿದೆ.

ಕಳೆದ ಮೂರು ವರ್ಷಗಳಲ್ಲಿನ ಸಾಲ ವಿತರಣೆ ಮಾಹಿತಿ
• 2017-18ನೇ ಸಾಲಿನಲ್ಲಿ 21,04,455 ರೈತರಿಗೆ 11618.89 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು.
• 2018-19ನೇ ಸಾಲಿನಲ್ಲಿ 20,14,951 ರೈತರಿಗೆ 11350.52 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿತ್ತು.
• 2019-20ನೇ ಸಾಲಿನಲ್ಲಿ 22,60525 ರೈತರಿಗೆ 13734.47 ಕೋಟಿ ರೂಪಾಯಿ ಸಾಲ ವಿತರಣೆ ಮಾಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!