Saturday, 14th December 2024

ಲಕ್ನೋ ಸೂಪರ್ ಜೈಂಟ್ಸ್‌ಗೆ ಬಲ ತುಂಬಲಿರುವ ವಿಡಾ ಪವರ್ಡ್‌ ಬೈ ಹೀರೋ ಎಲ್‌ಎಸ್‌ಜಿಗೆ ಅಧಿಕೃತ ಎಲೆಕ್ಟ್ರಿಕ್ ಸಂಚಾರ ಪಾಲುದಾರ

ವಿಡಾ ಪವರ್ಡ್‌ ಬೈ ಹೀರೋ ವಿಶ್ವದ ಅತಿದೊಡ್ಡ ಮೋಟಾರುಸೈಕಲ್‌ಗಳು ಮತ್ತು ಸ್ಕೂಟರುಗಳ ಉತ್ಪಾದಕ ಹೀರೋ ಮೋಟೋ ಕಾರ್ಪ್‌ನ ಬೆಳೆಯುತ್ತಿರುವ ಸಂಚಾರಿ ಬ್ರ್ಯಾಂಡ್‌ ಆಗಿದ್ದು, ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಅಧಿಕೃತ ಎಲೆಕ್ಟ್ರಿಕ್‌ ಮೊಬಿ ಲಿಟಿ ಪಾರ್ಟ್ನರ್‌ ಆಗಿ ಪಾಲುದಾರಿಕೆ ಮಾಡಿಕೊಂಡಿದೆ.

ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌) 2023 ಸೀಸನ್‌ನ ಪೂರ್ತಿ ಎಲ್‌ಎಸ್‌ಜಿ ಅಧಿಕೃತ ಎಲೆಕ್ಟ್ರಿಕ್‌ ಸಂಚಾರಿ ಪಾಲು ದಾರನಾಗಿರುವ ವಿಡಾ ದ ಲೋಗೋ ಅನ್ನು ಆಟಗಾರರ ಹೆಲ್ಮೆಟ್‌ಗಳು ಮತ್ತು ಕ್ಯಾಪ್‌ಗಳ ಮೇಲೆ ಪ್ರಮುಖವಾಗಿ ಪ್ರದರ್ಶಿಸ ಲಾಗುತ್ತದೆ. ಬ್ಯಾಟರ್‌ಗಳಿಗೆ ಸುರಕ್ಷತೆಯನ್ನು ಹೆಲ್ಮೆಟ್‌ಗಳು ಒದಗಿಸುವುದು ಮತ್ತು ನಿರ್ಭೀತಿಯಿಂದ ಆಟವಾಡಲು ನೆರವಾಗು ವಂತೆಯೇ, ವಿಡಾ ಕೂಡ ಗ್ರಾಹಕರಿಗೆ “ಚಿಂತೆ ಇಲ್ಲದ ಇವಿ ಸೌಲಭ್ಯ”ವನ್ನು ಒದಗಿಸುತ್ತದೆ.

ಹೀರೋ ಮೋಟೋಕಾರ್ಪ್‌ನ ಎಮರ್ಜಿಂಗ್‌ ಮೊಬಿಲಿಟಿ ಬ್ಯುಸಿನೆಸ್ ಯುನಿಟ್ (ಇಎಂಬಿಯು) ಮುಖ್ಯಸ್ಥ ಡಾ. ಸ್ವದೇಶ್‌ ಶ್ರೀವಾಸ್ತವ ಹೇಳುವಂತೆ “ಲಖನೌ ಸೂಪರ್‌ ಜೈಂಟ್ಸ್‌ ಜೊತೆಗೆ ಪಾಲುದಾರಿಕೆ ವಹಿಸಲು ನಮಗೆ ಖುಷಿಯಾಗುತ್ತದೆ. ಈ ತಂಡವು ಐಪಿಎಲ್‌ನ ಹಿಂದಿನ ಸೀಸನ್‌ನಲ್ಲಿ ಎಲ್ಲರನ್ನೂ ಆಕರ್ಷಿಸಿತ್ತು. ಇದೇ ರೀತಿ, ವಿಡಾ ಕೂಡ ಮಾಲೀಕತ್ವ ಮತ್ತು ಬಳಕೆಯ ಅನುಕೂಲವನ್ನು ಒದಗಿಸುವುದರಿಂದ ಗ್ರಾಹಕರಲ್ಲಿ ಆಸಕ್ತಿಯನ್ನು ಮೂಡಿಸಿದೆ.

ಚಿಂತೆ ರಹಿತ ಇವಿ ಸೌಲಭ್ಯವನ್ನು ಒದಗಿಸುವ ನಮ್ಮ ಬ್ರ್ಯಾಂಡ್‌ ಭರವಸೆಗೆ ಅನುಗುಣವಾಗಿ, ಇವಿಗಳಿಗೆ ಗ್ರಾಹಕರು ಬದಲಾಗುವ ಪ್ರಕ್ರಿಯೆ ಸರಾಗವಾಗಿರಬೇಕು ಮತ್ತು ಕಿರಿಕಿರಿ ರಹಿತವಾಗಿರಬೇಕು ಎಂದು ನಾವು ಖಚಿತಪಡಿಸುತ್ತಿದ್ದೇವೆ. ಸುಸ್ಥಿರತೆಯನ್ನೇ ಮುಖ್ಯ ವಾಗಿಟ್ಟುಕೊಂಡು ವಿಡಾ ವರ್ಲ್ಡ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ತಂತ್ರಜ್ಞಾನಕ್ಕೆ ಆದ್ಯತೆಯ ಸಿದ್ಧಾಂತವನ್ನು ಅಳವಡಿಸಿಕೊಳ್ಳಲಾಗಿದೆ. ಎಲ್‌ಎಸ್‌ಜಿ ಗೆ 2023 ಐಪಿಎಲ್‌ ಸೀಸನ್‌ ಅದ್ಭುತವಾಗಿರಲಿ ಎಂದು ನಾವು ಹಾರೈಸುತ್ತೇವೆ ಮತ್ತು ಅವರಿಗೆ ಚಿಯರ್ ಮಾಡುತ್ತೇವೆ.”

ಆರ್‌ಪಿಎಸ್‌ಜಿ ಸ್ಪೋರ್ಟ್ಸ್‌ನ ಸಿಇಒ ಕರ್ನಲ್‌ ವಿನೋದ್‌ ಬಿಶ್ತ್ ಹೇಳುವಂತೆ “ಬದಲಾವಣೆ ಮತ್ತು ಪ್ರಗತಿಯನ್ನು ಪ್ರತಿನಿಧಿಸುವ ಬ್ರ್ಯಾಂಡ್ ವಿಡಾ ಆಗಿದೆ. ಹೊಸತನ್ನು ಆರಂಭಿಸುವ ತಂಡವಾಗಿ ನಮ್ಮ ಸಿದ್ಧಾಂತಕ್ಕೆ, ಭವಿಷ್ಯಕ್ಕೆ ಉತ್ತಮ ವಿಶ್ವವನ್ನು ರೂಪಿಸ ಬೇಕು ಎಂಬ ವಿಡಾ ಧ್ಯೇಯವೂ ಹೊಂದಿಕೆಯಾಗುತ್ತದೆ. ಸುಸ್ಥಿರತೆಯೇ ಪ್ರಮುಖವಾಗಿದ್ದು, ಕ್ಷೇತ್ರದ ಹೊರಗೆ ದೊಡ್ಡ ಮಟ್ಟದ ಪರಿಣಾಮವನ್ನು ನಮ್ಮ ಪಾಲುದಾರಿಕೆಯು ಖಂಡಿತವಾಗಿಯೂ ಬೀರುತ್ತದೆ ಎಂದು ವಿಶ್ವಾಸವನ್ನು ಹೊಂದಿದ್ದೇವೆ” ಎಂದಿ ದ್ದಾರೆ.

ವಿಡಾ ವಿ1 ನಲ್ಲಿ 2 ತೆಗೆಯಬಹುದಾದ ಬ್ಯಾಟರಿಗಳಿವೆ ಮತ್ತು ಕಾರ್ಯಕ್ಷಮತೆ, ರೇಂಜ್‌ ಮತ್ತು ಟಾಪ್‌ ಸ್ಪೀಡ್‌ನಲ್ಲಿ ಶ್ರೇಣಿಯಲ್ಲೇ ಉತ್ತಮ ಸಂಯೋಜನೆಯನ್ನು ಒದಗಿಸುತ್ತದೆ. ಇದು ಓಮ್ನಿಚಾನೆಲ್‌ ಮೂಲಕ ಬೆಂಗಳೂರು, ಜೈಪುರ ಮತ್ತು ದೆಹಲಿಯಲ್ಲಿ ಇದು ಲಭ್ಯವಿದ್ದು, ಎಕ್ಸ್‌ಪೀರಿಯನ್ಸ್‌ ಸೆಂಟರ್‌ಗಳು ಮತ್ತು ಪಾಪ್‌ ಅಪ್‌ ಸ್ಟೋರ್‌ಗಳು ಇಲ್ಲಿವೆ.

ಆರಂಭಿಕವಾಗಿ ಮೂರು ನಗರಗಳಲ್ಲಿ 50 ಸ್ಥಳಗಳಲ್ಲಿ ಸುಮಾರು 300 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ವಿಡಾ ಸ್ಥಾಪಿಸಿದೆ. ಚಾರ್ಜಿಂಗ್‌ ನೆಟ್‌ವರ್ಕ್‌ ಪ್ರಮುಖ ಸ್ಥಳಗಳಲ್ಲಿ ಇದ್ದು, ಗ್ರಾಹಕರಿಗೆ ಇವು ಅನುಕೂಲವನ್ನು ಒದಗಿಸುತ್ತವೆ. ನಿಮಿಷಕ್ಕೆ 1.2 ಕಿ.ಮೀ ವೇಗದಲ್ಲಿ ಸ್ಕೂಟರ್‌ ಬ್ಯಾಟರಿಯನ್ನು ಚಾರ್ಜ್‌ ಮಾಡಲು ವಿಡಾದ ಫಾಸ್ಟ್‌ ಚಾರ್ಜಿಂಗ್‌ ನೆಟ್‌ವರ್ಕ್‌ ಅನುವು ಮಾಡುತ್ತದೆ. ಪ್ರತಿ ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ಡಿಸಿ ಮತ್ತು ಎಸಿ ಚಾರ್ಜಿಂಗ್‌ ಸಾಕೆಟ್‌ಗಳಿರುತ್ತವೆ.

ಸಮಗ್ರ ಚಾರ್ಜಿಂಗ್ ಪಯಣಕ್ಕಾಗಿ ಮೈ ವಿಡಾ ಮೊಬೈಲ್‌ ಆ್ಯಪ್‌ ಅನ್ನು ಗ್ರಾಹಕರು ಬಳಸಬಹುದಾಗಿದೆ. ಸಮೀಪದ ಚಾರ್ಜಿಂಗ್‌ ಸ್ಟೇಷನ್‌ ಹುಡುಕಬಹುದು, ಲಭ್ಯತೆಯನ್ನು ನೋಡಬಹುದು, ಚಾರ್ಜಿಂಗ್‌ ಸ್ಲಾಟ್‌ ರಿಸರ್ವ್‌ ಮಾಡಬಹುದು ಮತ್ತು ಆ್ಯಪ್‌ನಿಂದ ಚಾರ್ಜಿಂಗ್ ಸ್ಟೇಷನ್‌ಗೆ ನ್ಯಾವಿಗೇಟ್‌ ಮಾಡಬಹುದು.