ಬೆಂಗಳೂರು: ಮೇಕೆದಾಟುಗಾಗಿ ದೆಹಲಿ ಚಲೊ” ಹೋರಾಟ ಮತ್ತು ರಾಷ್ಟ್ರಪತಿ ಅವರಿಗೆ ಮನವಿ ನೀಡಲು ಬೆಂಗಳೂರಿನಿಂದ 50 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಅಧ್ಯಕ್ಷರು ಸಂಗೊಳ್ಳಿರಾಯಣ್ಣ ಪ್ರತಿಮೆ ಮಾಲಾರ್ಪಣೆ ಮಾಡಿ ದೆಹಲಿಗೆ ತೆರಳಲಿದ್ದಾರೆ.
ಮೇಕೆದಾಟು ಕುಡಿಯುವ ನೀರಿನ ಅನುμÁ್ಟನಕ್ಕಾಗಿ ದಿನಾಂಕ:1-2-2023 ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ದೆಹಲಿ ಚಲೊ” ಹೋರಾಟ ಮತ್ತು ರಾಷ್ಟ್ರಪತಿ ಅವರಿಗೆ ಮನವಿ ಕೊಡು ವುದು. ಬೆಂಗಳೂರಿನಿಂದ 50 ಕ್ಕೂ ಹೆಚ್ಚು ಕನ್ನಡ ಸಂಘಟನೆಗಳ ಅಧ್ಯಕ್ಷರು ದೆಹಲಿಗೆ ತೆರಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು.
ಮೇಕೆದಾಟು ಹೊರಾಟ ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮಗೆಲ್ಲಾ ತಿಳಿದಿರುವಂತೆ ನೆನ್ನೆಮೊನ್ನೆಯದಲ್ಲಾ ಈ ನಾಡಿನ ಹಲವಾರು ಕನ್ನಡಪರ ಸಂಘಟನೆಗಳು ರೈತಪರ ಸಂಘಟನೆಗಳು ಹಾಗೂ ನಾಡಿನ ಚಿಂತಕರು ಸೇರಿದಂತೆ ಹಲವಾರು ಸಂಘಸಂಸ್ಥೆಗಳು ಸುಮಾರು 3-4 ದಶಕ ಗಳಿಂದಲೂ ಹಲವಾರು ರೀತಿಯಲ್ಲಿ ಈ ವಿಚಾರವಾಗಿ ಹೋರಾಟವನ್ನು ಮಾಡುತ್ತಾ ಬಂದಿವೆ.