Saturday, 14th December 2024

ಶೋ ರದ್ದು: ಸ್ಟ್ಯಾಂಡಪ್ ಕಾಮಿಡಿಯನ್ ಫಾರೂಕಿಗೆ ಮುಖಭಂಗ

ಬೆಂಗಳೂರು: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿ ರುವ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಮುಖಭಂಗ ಆದಂತಾಗಿದೆ. ತೆಲಂಗಾಣದಲ್ಲಿ ಈತನ ಶೋಗೆ ಏರ್ಪಾಟಾಗಿದ್ದ ವೇದಿಕೆಗೆ ಶಾಸಕರೊಬ್ಬರು ಬೆಂಕಿ ಇಡಲು ಹೋಗಿದ್ದರೆ, ಇತ್ತ ಬೆಂಗಳೂರಿನಲ್ಲಿ ಇಂದು ನಡೆಯಲಿದ್ದ ಈತನ ಶೋ ರದ್ದುಗೊಂಡಿದೆ.

ತೆಲಂಗಾಣದ ಶಿಲ್ಪಕಲಾ ವೇದಿಕೆಯಲ್ಲಿ ಸ್ಟ್ಯಾಂಡಪ್​ ಕಾಮಿಡಿ ಯನ್​ ಮುನಾವರ್ ಫಾರೂಕಿ ಶನಿವಾರ ಕಾಮಿಡಿ ಪ್ರದರ್ಶನ ನೀಡಲಿದ್ದು, ವೇದಿಕೆಗೆ ಬೆಂಕಿ ಇಡುವುದಾಗಿ ಹೇಳಿ ತೆಲಂಗಾಣದ ಘೋಷಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಹೊರಟಿದ್ದರು. ಈ ಸಂದರ್ಭದಲ್ಲಿ ಹೈದರಾಬಾದ್ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನ ಜೆ.ಪಿ.ನಗರದ ಎಂಎಲ್​ಆರ್​ ಕನ್ವೆನ್ಷನ್​ ಹಾಲ್​ನಲ್ಲಿ ಇಂದು ಮುನಾವರ್ ಫಾರೂಕಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬುಕ್​ ಮೈಶೋನಲ್ಲಿ ಇದರ ಆನ್​ಲೈನ್​ ಟಿಕೆಟ್ ಬುಕಿಂಗ್ ನಡೆಯುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ಇದ್ದ ಈ ಕಾರ್ಯಕ್ರಮ ರದ್ದುಗೊಂಡಿದೆ.