Friday, 13th December 2024

ವಿಶ್ವ ಸಂಗೀತ ದಿನವನ್ನು ಸಂಭ್ರಮಿಸುವ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ

ವಿಶೇಷ ವಿಷಯಾಧಾರಿತ ಪ್ರದರ್ಶನಗಳ ವಾರಾಂತ್ಯದೊoದಿಗೆ ವಿಶ್ವ ಸಂಗೀತ ದಿನವನ್ನು ಸಂಭ್ರಮಿಸುವ ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ

ಬೆoಗಳೂರು: ಇಂಡಿಯನ್ ಮ್ಯೂಸಿಕ್ ಎಕ್ಸ್ಪೀರಿಯನ್ಸ್ ಮ್ಯೂಸಿಯಂ(ಐಎoಇ) ತನ್ನ ಜೆಪಿ ನಗರದ ಆವರಣದಲ್ಲಿ ವಿಶ್ವ ಸಂಗೀತ ದಿನವನ್ನು ಸಂಭ್ರಮಿ ಸಲು ವಿಶೇಷ ಪ್ರದರ್ಶನಗಳ ಸರಣಿಯ ಆಯೋಜನೆಯನ್ನು ಉತ್ಸಾಹದೊಂದಿಗೆ ಪ್ರಕಟಿಸಿದೆ.

ಸಂಭ್ರಮಾಚರಣೆಯ ಮುಖ್ಯಾಂಶಗಳು

1. ಮಾರ್ನಿoಗ್ ರಾಗ(ಬೆಳಗಿನ ರಾಗ) : ಶನಿವಾರ ಜೂನ್ 22, ಬೆಳಿಗ್ಗೆ 6.30ಕ್ಕೆ ಹಿಂದೂಸ್ತಾನಿ ಸಂಗೀತ ಕಛೇರಿ, ಕಲಾವಿದರು : ಶೃತಿ ಬೋಡೆ ಅವರೊಂದಿಗೆ ತಬಲದಲ್ಲಿ ಯೋಗೀಶ್ ಭಟ್ ಮತ್ತು ಹಾರ್ಮೋನಿಯಂನಲ್ಲಿ ವಿಘ್ನೇಶ್ ಭಾಗವತ್ ಸಾತ್ ನೀಡಲಿದ್ದಾರೆ.

2. ಅಕೋಡ ಅವರಿಂದ ಫ್ರೆಂಚ್ ಕ್ರಿಯೋಲ್ ಜಾಝ್ ಸಂಗೀತ ಪ್ರದರ್ಶನ ಶನಿವಾರ ಜೂನ್ 22,ಸಂಜೆ 7 ಗಂಟೆ, ಕಲಾವಿದರು : ಅಕೋಡ, ವ್ಯಾಲೇರಿ ಚಾನೆ ಟೆಫ್(ಪಿಯಾನೊ/ಓಕಲ್ಸ್), ಎರಿಕ್ ಪರೆಜ್(ತಾಳವಾದ್ಯ) ಮತ್ತು ಥಾಮಸ್ ಬೌಡೆ(ಬಾಸ್)

3. ಮಾರ್ನಿಂಗ್ ರಾಗ (ಬೆಳಗಿನ ರಾಗ) : ಕರ್ನಾಟಕ ಸಂಗೀತದ ಕೊಳಲು ಕಛೇರಿ, ಭಾನುವಾರ, ಜೂನ್ 23, ಬೆಳಿಗ್ಗೆ 6.30, ಕಲಾವಿದರು : ಹೇರಂಬ ಮತ್ತು ಹೇಮಂತ್(ಕೊಳಲು ಸಹೋದರರು), ಮೃದಂಗದಲ್ಲಿ ಅನೂರ್ ವಿನೋದ್ ಶ್ಯಾಮ್ ಮತ್ತು ಮೋರ್ಚಿಂಗ್‌ನಲ್ಲಿ ಎ ಚಿದಾನಂದ ಅವರಿಂದ ಸಾತ್.

4. ಜ್ಯಾಮ್ ಸೆಷನ್ ಮತ್ತು ಕಛೇರಿ ಕಾರ್ಯಕ್ರಮ ಜೊತೆಗೆ ಅಂತರ ಸಾಂಪ್ರದಾಯಿಕ ರಾಕ್ ಬ್ಯಾಂಡ್ ಗಾಲೇ ಭಾಯ್, ಭಾನುವಾರ, ಜೂನ್ 23, ಜ್ಯಾಮ್ ಸೆಷನ್, ಸಂಜೆ 4 ಗಂಟೆ, ಕಛೇರಿ ಸಂಜೆ 7 ಗಂಟೆ.
ಎಲ್ಲಾ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರಿಗೆ ತೆರೆದಿರುತ್ತದೆ.