Thursday, 7th December 2023

“ನಾಡೋಜ ಎಚ್.ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ” -೨೦೨೩ ಪ್ರದಾನ ಸಮಾರಂಭ

ಬೆಂಗಳೂರು: ನಾಡಿನ ಪ್ರಸಿದ್ಧ ಸಾಹಿತಿ, ಪ್ರವಾಸಿ ಕಂಡ ಇಂಡಿಯಾ ಮಾಲಿಕೆಯ ಕರ್ತೃ, ಜಾನಪದ ಲೋಕ ನಿರ್ಮಾತೃ ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನಲ್ಲಿ ಅವರು ಕಟ್ಟಿ ಬೆಳೆಸಿದ `ಕರ್ನಾ ಟಕ ಜಾನಪದ ಪರಿಷತ್ತು’ ಸಂಸ್ಥೆ ಪ್ರತಿ ವರ್ಷ ರಾಷ್ಟ್ರ ಮಟ್ಟದ ಜನಪದ ಕಲಾವಿದರನ್ನು ಗುರುತಿಸಿ ಒಂದು ಲಕ್ಷ ರೂ.ಗಳನ್ನೊಳಗೊಂಡ ಪ್ರಶಸ್ತಿ ನೀಡುತ್ತದೆ.
ಎಚ್. ಎಲ್. ನಾಗೇಗೌಡರಿಗೆ ನೂರು ವಸಂತಗಳು ತುಂಬಿದ ನೆನಪಿನಲ್ಲಿ ೨೦೧೫ರಿಂದ ಅವರ ಹೆಸರಿ ನಲ್ಲಿ ರಾಷ್ಟç ಮಟ್ಟದಲ್ಲಿ ಜಾನಪದ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಯನ್ನು ಗುರುತಿಸಿ, ಅವರನ್ನು ಸನ್ಮಾನಿಸುವ ಸುಸಂಸ್ಕÈತಿಯನ್ನು ಪರಿಷತ್ತು ಹಮ್ಮಿಕೊಂಡು, ಅದರಂತೆ, ಈ ಮೊದಲು ೨೦೧೫ರಲ್ಲಿ ಛತ್ತೀಸ್‌ಗಢದ ಪದ್ಮಶ್ರೀ, ಪದ್ಮಭೂಷಣ ಪಾಂಡವಾನಿ ಕಲಾವಿದೆ ಶ್ರೀಮತಿ ತೀಜನ್ ಬಾಯಿ ಅವರಿಗೆ, ೨೦೧೬ರಲ್ಲಿ ಮಣಿಪಾಲದ ಹಸ್ತಶಿಲ್ಪ ಟ್ರಸ್ಟ್ನ ರೂವಾರಿ ಶ್ರೀ ವಿಜಯನಾಥ ಶೆಣೈ ಅವರಿಗೆ, ೨೦೧೭ರಲ್ಲಿ ರಾಜಸ್ಥಾನಿ ಜನಪದ ಸೂಫಿ ಹಾಗೂ ಕಬೀರ್ ತಾತ್ವಿಕ ಹಿನ್ನೆಲೆಯ ಪ್ರಸಿದ್ದ ಸಂಗೀತ ಕಲಾವಿದರು, ಅತ್ಯುನ್ನತ ಪ್ರಶಸ್ತಿಗಳನ್ನು ಗಳಿಸಿರುವ ಶ್ರೀ ಮುಖ್ತಿಯಾರ್ ಅಲಿ ಅವರಿಗೆ, ೨೦೧೮ರಲ್ಲಿ ಬಳ್ಳಾರಿ ಜಿಲ್ಲೆಯ ತೊಗಲು ಗೊಂಬೆ ಯಕ್ಷಗಾನ ಕಲಾವಿದರಾದ ನಾಡೋಜ ಶ್ರೀ ಬೆಳಗಲ್ಲು ವೀರಣ್ಣ ಅವರಿಗೆ, ೨೦೧೯ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ವೀರಗಾಸೆ ಕಲಾವಿದರಾದ ಶ್ರೀ ಎಂ. ಆರ್. ಬಸಪ್ಪ ಅವರಿಗೆ, ೨೦೨೧ರಲ್ಲಿ ಉತ್ತರ ಪ್ರದೇಶದ ಸೂಫಿ ಸಂಗೀತಗಾರರಾದ ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿ ಅವರಿಗೆ, ೨೦೨೨ರಲ್ಲಿ ಕೇರಳದ ಪುಲ್ಲುವನ್ ಪಾಟ್ಟು ಹಾಡುಗಾರ್ತಿ ಶ್ರೀಮತಿ ಅಂಬುಜಾಕ್ಷಿ ಅವರಿಗೆ ನೀಡಲಾಗಿತ್ತು.
೨೦೨೩ನೇ ಸಾಲಿಗೆ ಆಂಧ್ರಪ್ರದೇಶದ ತೂರ್ಪು ಭಾಗವತಂ (ಪೂರ್ವ ಭಾಗವತಂ) ನ ಮೃದಂಗ ಕಲಾವಿದರಾದ  ಶ್ರೀ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್ ಅವರಿಗೆ ನೀಡಲಾಗುತ್ತಿದೆ.
“ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟೀçಯ ಪ್ರಶಸ್ತಿ” -೨೦೨೩
     – ಶ್ರೀ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್
ತೂರ್ಪು ಭಾಗವತಂ (ಪೂರ್ವ ಭಾಗವತಂ)  ಅಂಧ್ರಪ್ರದೇಶದ ಒಂದು ಪ್ರಾಚೀನ ಜನಪದ ಕಲೆ. ವಿಶಾಖ ಪಟ್ಟಣಂ ಮತ್ತು ವಿಜಯನಗರಂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರಚಲಿತವಿದೆ. ಇದನ್ನು ಕರ್ನಾ ಟಕದ ಮೂಡಲಪಾಯ ಯಕ್ಷಗಾನದ ಪ್ರದರ್ಶನಕ್ಕೆ ಹೋಲಿಸಿಕೊಂಡು ನೋಡಬಹುದಾಗಿದೆ.
ನಶಿಸಿ ಹೋಗುತ್ತಿರುವ ತೂರ್ಪು ಭಾಗವತಂ ಜನಪದ ಕಲೆಯ ೧೨ನೇ ತಲೆಮಾರಿನ ಮೃದಂಗ ಕಲಾ ವಿದರು ಶ್ರೀ ದೇವಗುಪ್ತಪು ವೀರವೆಂಕಟ ಜಗನ್ನಾದ ರಾವ್ ಅವರು. ಅಮ್ಮನವರ ಜಾತ್ರೆಯಲ್ಲಿ ಪ್ರದರ್ಶಿಸಲ್ಪಡುವ ಈ ಕಲೆಗೆ ವೀದಿನಾಟಕಂ ಎಂದೂ ಕರೆಯುತ್ತಾರೆ.
ತೂರ್ಪು ಭಾಗವತಂನಲ್ಲಿ ಪ್ರಮುಖ ವಾಗಿ ರಾಧೆ, ಶ್ರೀಕೃಷ್ಣಸತ್ಯಭಾಮೆ, ಮಾಧವಿ – ಹೀಗೆ ಕೃಷ್ಣ ಕಥನಗಳ ಕಲಾಪಗಳನ್ನು ನೃತ್ಯ, ಹಾಡು ಮತ್ತು ಸಂಗೀತದೊ0ದಿಗೆ ಆಯಾ ಕಾಲಕ್ಕೆ ತಕ್ಕಂತೆ ಪ್ರಸ್ತುತ ಪಡಿಸಿಕೊಂಡು ಬರಲಾಗುತ್ತಿದೆ. ಈ ಪ್ರದರ್ಶಕ ಕಲೆಯ ಜೀವಾಳವೇ ಮೃದಂಗ ವಾದ್ಯ
             ಪು.ತಿ.ನೋ
ಸಂಗೀತ. ಭಾಗವತರ ಹಾಡಿಗೆ ಅನುಗುಣವಾಗಿ, ರಾಗ-ತಾಳವನ್ನು ಮೇಳೈಸಿ ಹರ‍್ಮೋನಿಯಂ ಜೊತೆಗೆ ಮೃದಂಗವನ್ನು ನುಡಿಸುತ್ತಾರೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದೇ ಮೃದಂಗ ಕಲೆಯ ವೈಶಿಷ್ಟ÷್ಯ. ಶ್ರೀ ದೂದಲ ಶಂಕರಯ್ಯ ಭಾಗವತರಲ್ಲಿ ೯ ವರ್ಷಗಳ ಕಾಲ ಅಧ್ಯಯನ ಮಾಡಿದ ಶ್ರೀ ಜಗನ್ನಾದ ರಾವ್ ಅವರು ಏಕಕಾಲಕ್ಕೆ ಮೂರು ಮೃದಂಗಗಳನ್ನು ನುಡಿಸುವ ಏಕೈಕ ಕಲಾವಿದರಾಗಿದ್ದಾರೆ.
ಪ್ರೇಕ್ಷಕರನ್ನು ರಾತ್ರಿಯಿಡೀ ಪೌರಾಣಿಕ ಕಥಾ ಲೋಕಕ್ಕೆ ಕರೆದುಕೊಂಡು ಹೋಗುವ ಸಮ್ಮೋಹಕ ಸಂಗೀತ, ಮೈಮನ ನವಿರೇಳಿಸುವ ಸಮುದ್ರ ಘರ್ಜನೆ, ಮೋಡ ಘರ್ಜನೆ, ಪ್ರಕೃತಿಯ ಸುಮಧುರ ನಿನಾದಗಳು, ಹಕ್ಕಿಯ ಚಿಲಿಪಿಲಿಗಳನ್ನು ನುಡಿಸಿ ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸುವ ಮೃದಂಗಕಾರನ ಕೌಶಲ್ಯ ಕೈಚಳಕಗಳ ಸೇವೆಯನ್ನು ತಲೆಮಾರಿನಿಂದ ವಂಶಪಾರ0ರ‍್ಯವಾಗಿ ಸಲ್ಲಿಸುತ್ತಾ ಬಂದಿರುತ್ತಾರೆ.
ಶ್ರೀ ಜಗನ್ನಾದ ರಾವ್ ಅವರು ೨೦೦೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡುವುದರ ಜೊತೆಗೆ, ದಕ್ಷಿಣ ಭಾರತದ ಪ್ರಮುಖ ಉತ್ಸವಗಳು ಮತ್ತು ಕಾರ್ಯ ಕ್ರಮಗಳಲ್ಲಿ ಪ್ರದರ್ಶನ ನೀಡಿ ಕಲೆಗೆ ಘನತೆ ತಂದುಕೊಟ್ಟಿರುತ್ತಾರೆ. ಈ ಸಾಂಪ್ರದಾಯಿಕ ಕಲಾ ಸೇವೆಗೆ ೨೦೦೩ರಲ್ಲಿ ಆಂಧ್ರ ಪ್ರದೇಶ ಸರ್ಕಾರದ ಪ್ರತಿಷ್ಠಿತ ನಂದಿ ಪುರಸ್ಕಾರಗಳ ಜೊತೆಗೆ ಮೃದಂಗ ಸಿಂಹ ಪುರಸ್ಕಾರ, ಗರುಡ ಪುರಸ್ಕಾರ – ಹೀಗೆ ಹತ್ತು ಹಲವು ಸನ್ಮಾನ ಪುರಸ್ಕಾರಗಳಿಗೆ ಶ್ರೀಯುತರು ಭಾಜನರಾಗಿರುತ್ತಾರೆ.
 ಕರ್ನಾಟಕ ಜಾನಪದ ಪರಿಷತ್ತು ೨೦೨೩ನೇ ಸಾಲಿನ ಒಂದು ಲಕ್ಷ ರೂ. ಮೌಲ್ಯದ “ನಾಡೋಜ ಎಚ್. ಎಲ್. ನಾಗೇಗೌಡ ರಾಷ್ಟೀçಯ ಪ್ರಶಸಿ”್ತ ಯನ್ನು ದಿನಾಂಕ: ೨೭/೧೧/೨೦೨೩ರ ಸೋಮವಾರÀ ಬೆಳಗ್ಗೆ ೧೦.೩೦ ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅತ್ಯಂತ ಸಂಭ್ರಮದಲ್ಲಿ ನೀಡಿ ಗೌರವಿಸುತ್ತಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಶಾಖಾ ಮಠಾಧೀಶರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ  ಪೂಜ್ಯ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಅವರು ವಹಿಸಲಿದ್ದಾರೆ.
ಉದ್ಘಾಟನೆಯನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ಎಸ್. ತಂಗಡಗಿ ಅವರು ಮಾಡಲಿದ್ದು, ಪ್ರಶಸ್ತಿ ಪುರಸ್ಕÈತರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕÈತರಾದ ಡಾ. ಚಂದ್ರಶೇಖರ ಕಂಬಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಂಧÀ್ರ ಪ್ರದೇಶ ಹಿರಿಯ ಜಾನಪದ ವಿದ್ವಾಂಸರು ಡಾ. ಎನ್. ಭಕ್ತವತ್ಸಲ ರೆಡ್ಡಿ ಮತ್ತು ಕನ್ನಡ ಮತ್ತು ಸಂಸ್ಕÈತಿ ಇಲಾಖೆಯ ನಿರ್ದೇಶಕರಾದ ಡಾ. ಕೆ. ಧರಣಿದೇವಿ ಭಾ.ಪೊ.ಸೇ ಅವರು ಭಾಗವಹಿಸಲಿದ್ದಾರೆ. ಇವರುಗಳಲ್ಲದೆ ನಾಡಿನ ಹೆಸರಾಂತ ಜಾನಪದ ವಿದ್ವಾಂಸರುಗಳು, ಕಲಾವಿದರುಗಳು, ಗಣ್ಯರು ಭಾಗವಹಿಸುತ್ತಾರೆ.
 ವಿಶೇಷ ಆಕರ್ಷಣೆಯಾಗಿ ಪ್ರಶಸ್ತಿ ಪುರಸ್ಕÈತರಿಂದ “ಸತ್ಯಭಾಮಾ ಕಲಾಪ” ಪ್ರಸಂಗದ ಪ್ರದರ್ಶನ ಇದ್ದು  ಕಲಾಸಕ್ತರಿಗೆ ವಿಶೇಷ ರಸದೌತಣವಾಗಲಿದೆ. ಅಲ್ಲದೇ, ನಾಡೋಜ ಎಚ್.ಎಲ್. ನಾಗೇಗೌಡ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಜಾನಪದ ಕಲೆಗಳ ಪ್ರದರ್ಶನವಿರುತ್ತದೆ. ಪರಿಷತ್ತಿನ ಪ್ರಕಟಣೆಗಳ ಪ್ರದರ್ಶನ ಮತ್ತು ಮಾರಾಟವು ಇರುತ್ತದೆ.
– ಪ್ರೊ. ಹಿ.ಚಿ.ಬೋರಲಿಂಗಯ್ಯ, ಕಾರ್ಯಾಧ್ಯಕ್ಷರು
         ಕರ್ನಾಟಕ ಜಾನಪದ ಪರಿಷತ್ತು

Leave a Reply

Your email address will not be published. Required fields are marked *

error: Content is protected !!