ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಅತ್ಯಾಧುನಿಕ “ಕ್ಯಾಥ್‌ಲ್ಯಾಬ್”ನನ್ನು ನಾಗರಭಾವಿ ಫೊರ್ಟಿಸ್ ಆಸ್ಪತ್ರೆಯಲ್ಲಿ ಇಂದು ಆರಂಭಿಸಲಾಯಿತು.
ಕೌಶಲ್ಯಾಭಿವೃದ್ಧಿ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ, ತೋಟಗಾರಿಕೆ ಸಚಿವ ಮುನಿರತ್ನ ನಾಯ್ಡು ಉದ್ಘಾಟಿಸಿದರು.
ಅತ್ಯಾಧುನಿಕ “ಫಿಲಿಪ್ಸ್ AZURION 7C12” ಕ್ಯಾಥ್‌ಲ್ಯಾಬ್ ಆಗಿದ್ದು, ಉನ್ನತ ಮಟ್ಟದ ಇಂಟಿಗ್ರೇಡೆಡ್ ಐಎಫ್‌ಆರ್ ಸೌಲಭ್ಯದ ಜೊತೆಗೆ ಅತ್ಯಾಧುನಿಕ ತಂತ್ರ ಜ್ಞಾನವನ್ನು ಒಳಗೊಂಡಿದೆ. ಹೃದಯಾಘಾತವಾದ ಸಂದರ್ಭದಲ್ಲಿ ಪರಿಧಮನಿಗಳ ಕ್ರಿಯಾತ್ಮಕ ಚಲನೆಯ ನೋಡುವ ಡೈನಾಮಿಕ್ ಕರೋನರಿ ರೋಡ್‌ಮ್ಯಾಪ್ (ಡಿಸಿಆರ್) ನಂತಹ ವಿಶಿಷ್ಟವಾದ ಸುಧಾರಿತ ಮಧ್ಯಸ್ಥಿಕೆಯ ಸಾಧನವನ್ನು ಸಹ ಹೊಂದಿದೆ. ಇದು ಸ್ವಯಂಚಾಲಿತವಾಗಿ 2D ಫ್ಲೋರೋಸ್ಕೋಪಿ ಮೂಲಕ ಹೃದಯದ ಒಳಗಿನ ಚಲನವನಗಳ ಮೂಲಕ ನೋಡಬಹುದು. ಇದಷ್ಟೇ ಅಲ್ಲದೇ, ಸಾಕಷ್ಟು ವಿಶೇಷತೆಯಿಂದ ಈ ಕ್ಯಾಥ್‌ಲ್ಯಾಬ್ ಒಳಗೊಂಡಿದ್ದು, ಹಠಾತ್ ಹೃದಯಾಘಾತವಾದರೂ ತ್ವರಿತವಾಗಿ ಚಿಕಿತ್ಸೆ ನೀಡುವ ಎಲ್ಲಾ ಅತ್ಯಾಧುನಿಕ ಟೆಕ್ನಾಲಜಿಯನ್ನು ಹೊಂದಿದೆ.
ಕ್ಯಾಥ್‌ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಸಚಿವ ಡಾ. ಅಶ್ವತ್ಥ ನಾರಾಯಣ್, ಫೊರ್ಟಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕ್ಯಾಥ್‌ಲ್ಯಾಬ್ ಪ್ರಾರಂಭಿಸಿ ರುವುದು ಅತ್ಯಂತ ಸ್ವಾಗತಾರ್ಹ. ಇಂದಿನ ಯುಗದಲ್ಲಿ ಹೃದಯಾಘಾತ ಅಥವಾ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಅಂಥವರಿಗೆ ತ್ವರಿತವಾಗಿ ಚಿಕಿತ್ಸೆ ನೀಡುವುದು ಅನಿವಾರ್ಹ. ಇದೀಗ ಫೊರ್ಟಿಸ್ ಆಸ್ಪತ್ರೆಯಲ್ಲೂ ಈ ಲ್ಯಾಬ್ ಪ್ರಾರಂಭಿಸಿರುವುದು ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು ಪ್ರಶಂಸಿಸಿದರು.
ತೋಟಗಾರಿಕೆ ಸಚಿವರಾದ ಮುನಿರತ್ನ ನಾಯ್ಡು ಮಾತನಾಡಿ, ವೈದ್ಯಕೀಯ ಲೋಕ ಪ್ರತಿಹೆಜ್ಜೆಯನ್ನೂ ಅಪ್‌ಗ್ರೇಡ್ ಆಗುತ್ತಿರಬೇಕು. ಅಂತೆಯೇ ಫೊರ್ಟಿಸ್ ಆಸ್ಪತ್ರೆ ಕ್ಯಾಥ್‌ಲ್ಯಾಬ್ ತೆರೆದಿದೆ. ಫೊರ್ಟಿಸ್‌ನ ಇಡೀ ತಂಡಕ್ಕೆ ನಾನು ಅಭಿನಂದನೆ ಸಲ್ಲಿಸುವ ಎಂದರು.
ಫೊರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಹಿರಿಯ ಸಲಹೆಗಾರರಾದ ಡಾ.ಸಿ ಪ್ರಭಾಕರ ಕೋರೆಗೋಳ್, ಹೃದಯಾಘಾತವಾದ ಸಂದರ್ಭದಲ್ಲಿ ತ್ವರಿತ ಚಿಕಿತ್ಸೆ ಅತ್ಯಂತ ಅವಶ್ಯಕ. ಇದೀಗ ಪ್ರಾರಂಭಿಸಿರುವ ಕ್ಯಾಥ್‌ಲ್ಯಾಬ್ ನಲ್ಲಿ ಹೃದಯದ ಪ್ರತಿ ಪರಿಧಮನಿಯನ್ನೂ ಅನಲೈಸ್ ಮಾಡುವಂತಹ ಹಾಗೂ ವೀಕ್ಷಿಸುವಂತಹ ಟೆಕ್ನಾಲಜಿಯನ್ನು ಒಳಗೊಂಡಿದೆ. ಹೀಗಾಗಿ ಕಡಿಮೆ ಸಮಯದಲ್ಲಿ ನಿಖರವಾಗಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲು ಸಹಕಾರಿಯಾಗಲಿದೆ ಎಂದರು.
ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಬಿಸಿನೆಸ್ ಹೆಡ್ ಅಕ್ಷಯ್ ಒಲೇಟಿ ಮಾತನಾಡಿ, ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಫೊರ್ಟಿಸ್ ಆಸ್ಪತ್ರೆ ಸದಾ ಮುಂದಿದೆ. ಇದೀಗ ಈ ಕ್ಯಾಥ್‌ಲ್ಯಾಬ್ ಮೂಲಕ ಇನ್ನಷ್ಟು ಭರವಸೆಯನ್ನು ಮೂಡಿಸಿದ್ದೇವೆ ಎಂದು ಹೇಳಿದರು.