Friday, 13th December 2024

ಬಿಸಿಯೂಟ ಕಾರ್ಯಕರ್ತರಿಗೆ ನರೇಗಾ ಜಾಬ್ ಕಾರ್ಡ್

vidhana soudha good news

ಬೆಂಗಳೂರು : ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮದ ಅಡುಗೆ ಸಿಬ್ಬಂದಿಯು ಸರ್ಕಾರದ ಪೂರ್ಣಕಾಲಿಕ ನೌಕರರಾಗುವುದಿಲ್ಲ. ಅವರುಗಳು ನಿಗದಿತ ಗೌರವಧನ ಪಡೆದು ಪ್ರತಿ ದಿನ 4 ಗಂಟೆಗಳ ಅವಧಿಗೆ ಶಾಲೆಗಳಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಾರೆ.

ಆದ್ದರಿಂದ ಈ ಅಡುಗೆ ಸಿಬ್ಬಂದಿಯ ವಾಸಸ್ಥಳವನ್ನು ಪರಿಶೀಲಿಸಿ ಮಹಾತ್ಮಗಾಂಧಿ ನರೇಗಾ ಅಧಿನಿಯಮದನ್ವಯ ಜಾಬ್ ಕಾರ್ಡ್ ನೀಡಲು ಮತ್ತು ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ಒದಗಿಸಲು ಅಗತ್ಯ ಕ್ರಮವಹಿಸುವಂತೆ ಆದೇಶಿಸಲಾಗಿದೆ.